Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ “ಸಹಕಾರಿ ಕ್ರೀಡಾಕೂಟ 2024-25” ಸಮಗ್ರ ಪ್ರಶಸ್ತಿ

ಕೋಟ: ಮಂದಾರ್ತಿ ಸೇವಾ ಸಹಕಾರಿ ಸಂಘ  ಮಂದಾರ್ತಿ ಇದರ ಶತಮಾನೋತ್ಸವ ಸಂಭ್ರಮಾಚರಣೆ ಶತಸಾರ್ಥಕ್ಯ ಕಾರ್ಯಕ್ರಮದ ಪ್ರಯುಕ್ತ ಇವರ ನೇತೃತ್ವದಲ್ಲಿ ಅ.20.ರಂದು ಭಾನುವಾರ ಪ್ರೌಢಶಾಲಾ ಮೈದಾನ, ಮಂದಾರ್ತಿ ಇಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಿಬ್ಬಂದಿಗಳಿಗೆ ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ಸಹಕಾರಿ ಕ್ರೀಡಾಕೂಟದಲ್ಲಿ ಕ್ರೀಡಾಕೂಟದ ಪಥ ಸಂಚಲನದಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ  ಶರತ್ ಕುಮಾರ್ ಶೆಟ್ಟಿ ಇವರೊಂದಿಗೆ ಸಂಘದ ಎಲ್ಲಾ ಸಿಬ್ಬಂದಿಯವರು ಸಮವಸ್ತç ಧರಿಸಿ ಶಿಸ್ತುಬದ್ಧವಾಗಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದುಕೊಂಡರು.

ತದನಂತರ ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ಸಂಘದ ಸಿಬ್ಬಂದಿಯವರು ಉತ್ಸಾಹದಿಂದ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದಿರುತ್ತಾರೆ. ಮಹಿಳಾ ವಿಭಾಗದ ಹಗ್ಗ ಜಗ್ಗಾಟ, 4,100 ಮೀಟರ್ ರಿಲೇ ಓಟ ಮತ್ತು ಪುರುಷರ ವಿಭಾಗದ ವಾಲಿಬಾಲ್, ಹಗ್ಗ ಜಗ್ಗಾಟ, 4*100 ಮೀಟರ್ ರಿಲೇ ಓಟದಲ್ಲಿ ಸಂಘದ ಸಿಬ್ಬಂದಿಯವರು ಪ್ರಥಮ ಸ್ಥಾನ ಪಡೆದಿರುತ್ತಾರೆ. ಮಹಿಳಾ ವಿಭಾಗದ ಗುಂಡೆಸತ, ಲೆಮನ್ ಸ್ಪೂನ್ ಓಟ, 100 ಮೀಟರ್ ಓಟ ಮತ್ತು 400 ಮೀಟರ್ ಓಟದಲ್ಲಿ ಸಂಘದ ಸಿಬ್ಬಂದಿಯವರು ಪ್ರಥಮ ಸ್ಥಾನ ಪಡೆದಿದ್ದು, ಮಹಿಳಾ ವಿಭಾಗದ 100 ಮೀಟರ್ ಓಟ, 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಹಾಗೂ ಮಹಿಳಾ ವಿಭಾಗದ 100 ಮೀಟರ್ ಓಟ ಮತ್ತು 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಪುರುಷರ ವಿಭಾಗದ ಜಾವೆಲಿನ್ ಎಸೆತ, 400 ಮೀಟರ್ ಓಟದಲ್ಲಿ ಸಂಘದ ಸಿಬ್ಬಂದಿಯವರು ಪ್ರಥಮ ಸ್ಥಾನ ಪಡೆದಿದ್ದು, ಪುರುಷರ ವಿಭಾಗದ 400 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡರು.

ಸಂಘದ ಅಧ್ಯಕ್ಷ ಡಾ| ಕೃಷ್ಣ ಕಾಂಚನ್, ನಿರ್ದೇಶಕರಾದ ಕೆ. ಉದಯ ಕುಮಾರ್ ಶೆಟ್ಟಿ, ಜಿ. ತಿಮ್ಮ ಪೂಜಾರಿ,ರವೀಂದ್ರ ಕಾಮತ್, ಮಹೇಶ ಶೆಟ್ಟಿ, ರಂಜಿತ್ ಕುಮಾರ್ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ  ಶರತ್ ಕುಮಾರ್ ಶೆಟ್ಟಿ,ತರಬೇತುದಾರ ಸಹಾಯಕ ಕಾರ್ಯ ನಿರ್ವಹಣಾಧಿಕಾರಿ  ಸುರೇಶ ಕಾಂಚನ್ ,ಕ್ರೀಡಾಕೂಟದಲ್ಲಿ ಸಂಘದ ಸಿಬ್ಬಂದಿ ಉಪಸ್ಥಿತರಿದ್ದು,

ಮಂದಾರ್ತಿ ಸೇವಾ ಸಹಕಾರಿ ಸಂಘ  ಮಂದಾರ್ತಿ ಇದರ ಶತಮಾನೋತ್ಸವದಲ್ಲಿ ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಸಹಕಾರಿ ಕ್ರೀಡಾಕೂಟ 2024-25 ಸಮಗ್ರ ಪ್ರಶಸ್ತಿ ಪಡೆದುಕೊಂಡರು. ಸಂಘದ ಅಧ್ಯಕ್ಷ ಡಾ| ಕೃಷ್ಣ ಕಾಂಚನ್, ನಿರ್ದೇಶಕರಾದ ಕೆ. ಉದಯ ಕುಮಾರ್ ಶೆಟ್ಟಿ, ಜಿ. ತಿಮ್ಮ ಪೂಜಾರಿ,ರವೀಂದ್ರ ಕಾಮತ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *