
ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ನಾಯಕವಾಡಿ ಎಂಬಲ್ಲಿ ಸರಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ದಾಸ್ತಾನು ಇರಿಸಿಕೊಂಡ ಮಾಹಿತಿಯ ಮೇರೆಗೆ ಇಲ್ಲಿನ ಆಹಾರ ನಿರೀಕ್ಷಕ ಸುರೇಶ್ ಎಚ್.ಎಸ್. ಇವರು ಪೊಲೀಸರ ಸಹಕಾರದೊಂದಿಗೆ ದಾಳಿ ನಡೆಸಿದ್ದು ಅಶ್ವಕ್ ಎಂಬವರ ಮನೆಯಲ್ಲಿ ಅಕ್ರಮ ದಾಸ್ತಾನು ಪತ್ತೆ ಹಚ್ಚಿದ್ದಾರೆ. ಗಣೇಶ್ ಹಕ್ಲಾಡಿ ಮತ್ತು ಹಂಝಾ ಅವರಿಂದ ಸರಕಾರದ ಅಕ್ಕಿಯನ್ನು ಕಡಿಮೆ ದರದಲ್ಲಿ ಖರೀದಿಸಿ ಅಕ್ರಮವಾಗಿ ಮಾರಾಟ ಮಾಡಲು ಅಶ್ಪಾಕ್ ಅವರ ಮನೆಯಲ್ಲಿ ದಾಸ್ತಾನು ಇರಿಸಿದ್ದರು ಎಂಬುವುದು. ತನಿಖೆ ವೇಳೆ ಬಯಲಿಗೆ ಬಂದಿದೆ. 18,700ರೂ. ಮೌಲ್ಯದ ಅಕ್ಕಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಘಟನೆಯ ಸಾರಾಂಶ : ಪಿರ್ಯಾದಿದಾರರಾದ ಸುರೇಶ್ ಹೆಚ್.ಎಸ್ ಆಹಾರ ನಿರೀಕ್ಷರು, ಕುಂದಾಪುರರವರಿಗೆ ದಿನಾಂಕ: 30/10/2024 ರಂದು ಕುಂದಾಪುರ ತಾಲೂಕು, ಗುಜ್ಜಾಡಿ ಗ್ರಾಮದ ನಾಯಕ್ವಾಡಿಯ ಅಶ್ಪಕ್ ರವರ ಮನೆಯಲ್ಲಿ ಹಂಮ್ಜಾರವರು ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ದಾಸ್ತಾನು ಇರಿಸಿದ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಪಿರ್ಯಾದಿದಾರರು 13:00 ಗಂಟೆಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅಶ್ಪಕ್ರವರ ಮನೆಯ ಬಲಬದಿಯ ಚಾವಡಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿರುವ 550 ಕೆ.ಜಿ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಬೆಳ್ತಿಗೆ ಅಕ್ಕಿ ಇರುವುದು ಕಂಡು ಬಂತು. ಸದ್ರಿ ಅಕ್ರಮ ದಾಸ್ತಾನು ಇರುವ ಅಕ್ಕಿಯನ್ನು ಆಪಾದಿತ ಗಣೇಶ್ ಹಕ್ಲಾಡಿ , ಮತ್ತು ಹಂಮ್ಜಾರವರು ಸರಕಾರದಿಂದ ಉಚಿತವಾಗಿ ದೊರೆಯುವ ಅಕ್ಕಿಯನ್ನು ಯಾರಿಂದಲೋ ಖರೀದಿಸಿ ಹೆಚ್ಚಿನ ಬೆಲೆಗೆ ಅಂಗಡಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ಅಶ್ಪಕ್ರವರ ಮನೆಯ ಚಾವಡಿಯಲ್ಲಿ ದಾಸ್ತಾನು ಮಾಡಿಟ್ಟಿದ್ದು ಅಕ್ಕಿಯ ಮೌಲ್ಯ 18,700/ರೂ ಆಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 111/2024 ಕಲಂ: 3,6,7 ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ 1955 ರಂತೆ ಪ್ರಕರಣ ದಾಖಲಿಸಲಾಗಿದೆ.
Leave a Reply