✍️ ಪುರುಷೋತ್ತಮ್ ಪೂಜಾರಿ ಕೊಡಪಾಡಿ
ಮಾನವನ ವ್ಯಕ್ತಿತ್ವದ ರೂಪುರೇಖೆಯು ಅವನ ಬಾಲ್ಯದಿಂದ ಅವನ ಸುತ್ತಮುತ್ತಲಿರುವ ಶಿಕ್ಷಕರ, ಪಾಲಕರ ಹಾಗು ಸಮಾಜದ ಜನರ ಪ್ರಭಾವದಿಂದ ಆಗಿರುತ್ತದೆ. ಬರೀ ಶಿಕ್ಷಣವೊಂದೇ ಸಿಕ್ಕರೆ ಸಾಲದು. ಅದರ ಜೊತೆ ಇನ್ನು ಅನೇಕ ಅಂಶಗಳನ್ನು ಬಾಲ್ಯದಿಂದ ರೂಢಿಸಿಕೊಂಡರೆ ಆತ ಯಶಸ್ವಿ ಕಂಡುಕೊಳ್ಳುತ್ತಾನೆ. ಶಿಕ್ಷಕರು ವಿದ್ಯಾರ್ಥಿಗಳ ಬಗೆಗೆ ದ್ವೇಷ ಅಥವಾ ಅಸೂಯೆ ಹೊಂದಿರುವುದಿಲ್ಲ. ದಾರಿ ತಪ್ಪಿದಾಗ ಅಥವಾ ಕಲಿಕೆಯತ್ತ ಆಸಕ್ತಿ ವಹಿಸಲಿ ಎಂಬ ಉದ್ದೇಶದಿಂದ ಒಂದೆರಡು ಏಟು ನೀಡಬಹುದು. ಆದರೆ, ಹೊಸೂರು ಶಾಲೆಯ ವಿದ್ಯಾರ್ಥಿಗಳಾದ ಮುತ್ತುರಾಜ್ ಮತ್ತು ಮಲ್ಲೇಶಿಯನ್ನು (ಮಾದಿಗ, ಪರಿಶಿಷ್ಟ ಜಾತಿ) ಮಕ್ಕಳನ್ನು ಬೆದರಿಸಿ, ಕೈ ರಟ್ಟೆ ಎಳೆದು ಮುಖ್ಯೋಪಾಧ್ಯಾಯಿನಿಯಾದ ಲಲಿತಾ ಪಟಗಾರ ಮತ್ತು ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಶೆಟ್ಟಿ ಸುಳ್ಳು ಸಾಕ್ಷಿ ಹೇಳಿಸಿದ್ದು ದುರಂತ.
ಈ ಹಿಂದೆ ಹೊಸೂರು ಶಾಲೆಯ ಶೌಚಾಲಯ ನಿರ್ಮಾಣಕ್ಕೆ ತನ್ನ ಗಂಡನಿಂದಲೇ ಆಕ್ಷೇಪಣೆ ಹಾಕಿ, ಶಾಲೆಯ ಲೇಟರ್ ನ್ನು ದುರುಪಯೋಗ ಪಡಿಸಿಕೊಂಡು, ಅಕ್ಷರ ದಾಸೋಹ ಹಗರಣ, ಅಲ್ಲದೇ ಸರಕಾರಿ ನೌಕರರಾಗಿ ಅಕ್ರಮ ಸಕ್ರಮದಲ್ಲಿ ಸ್ಥಳ ಮಂಜೂರಾತಿಗೆ ಹಾಕಿ ಸಿಕ್ಕಿಬಿದ್ದು, ಅನಧಿಕೃತವಾಗಿ ಕಾಂಪೌಂಡ್ ಹಾಕಿ ಅದನ್ನು ಮಾಧ್ಯಮ ಬಯಲಿಗೆ ಎಳೆದು, ಮುಖ್ಯೋಪಾಧ್ಯಾಯನಿ ಲಲಿತ ಪಟಗಾರ, ಬಿಇಓ ನಾಗೇಶ್ ನಾಯಕ್ ವಿರುದ್ಧ ಈಗಾಗಲೇ ಲೋಕಾಯುಕ್ತದಲ್ಲಿ ದೂರು ನೀಡಿ ತನಿಖೆ ಹಂತದಲ್ಲಿರುತ್ತದೆ. ಅಲ್ಲದೆ ಇದೆ ತಪ್ಪಿಗೆ ಈಗಾಗಲೇ DDPI ರವರು ಲಲಿತ ಪಟಗಾರ ನಡವಳಿಕೆ ಮತ್ತು ಅಕ್ರಮವನ್ನು ಅರಿತು ಮೂರು ತಿಂಗಳು ಕಾಲ ಬೇರೆ ಶಾಲೆಗೆ ವರ್ಗಾವಣೆ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಷಯ.
ಈಕೆಗೆ ಇಷ್ಟಾದರೂ ಬುದ್ಧಿ ಬಂದಿಲ್ಲ, ಇದಕ್ಕೆ ಪೂರಕವಾಗಿ ಕೊರೋನ ಕಾಲದಲ್ಲಿ ಈ ಎರಡು ಮಕ್ಕಳು ತಮ್ಮ ಊರಿಗೆ ತೆರಳಿ ಯಾದಗಿರಿ ಶಾಲೆಯಲ್ಲಿದಾಖಲಾಗಿದ್ದರು, ಮಕ್ಕಳ ಪರವಾಗಿ ಟೀಚರ್ ಗಣೇಶ್, ಸೌಮ್ಯ, ಸಂಗೀತರವರು ಮುತ್ತುರಾಜ್ ಮತ್ತು ಮಲ್ಲೇಶಿ ಹೊಸೂರು ಶಾಲೆಯಲ್ಲಿ ಕಲಿಯುತ್ತಿದ್ದಾರೆ ಎಂದು ಹಾಜರಾತಿ ಹಾಕಿ, ಮಕ್ಕಳ ಪರವಾಗಿ ತಾವೇ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಬರೆದಿದ್ದಾರೆ ಎಂದು ಪ್ರಸುತ್ತ SDMC ಸದಸ್ಯ ರಾಘವೇಂದ್ರ ಪೂಜಾರಿ BEO ಮತ್ತು ಮಾಧ್ಯಮಗಳಿಗೆ ಅವರಿಗೆ ಮೌಖಿಕವಾಗಿ ಮತ್ತು ದೂರವಾಣಿ ಮೂಲಕ ದೂರು ನೀಡಿ ಕೆಲವು ದಾಖಲೆಯನ್ನು ನೀಡಿರುತ್ತಾರೆ.
SDMC ಅಧ್ಯಕ್ಷರ ದೂರಿನ್ವಯ BEO ತನಿಖೆಗೆ ಮುಂದಾದಾಗ ಅದರ ತನಿಖೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಯವರು ನಡೆಸಲು ಮುಂದಾದಾಗ ಮುಖ್ಯೋಪಾಧ್ಯಾಯನಿ ಲಲಿತ ಪಟಗಾರ ಮತ್ತು ಅಶೋಕ್ ಶೆಟ್ಟಿ ಅವರು ಸೇರಿ ಮಕ್ಕಳ ತಾಯಿಯಾದ ದೇಯಿಮ್ಮರವರನ್ನು ನಾವು ಹೇಳಿದ ಹಾಗೇ ಕೇಳಬೇಕು ಇಲ್ಲ ನಿಮ್ಮ ಮೇಲೆ ಕೇಸು ದಾಖಲಾಗುತ್ತದೆ. ನಿಮಗೆ ಉಳಿಯಲು ಸ್ಥಳ ಮತ್ತು ಬೇಕಾದ ಸವಲತ್ತುಗಳನ್ನು ನೀಡುತ್ತೇವೆ ಎಂದು ಆಮಿಷ ಒಡ್ಡಿ, ಅದಕ್ಕೆ ವ್ಯವಸ್ಥೆ ಮಾಡಿದ್ದಾರೆ. ನಾವು ನೀಡಿದ ಪತ್ರವನ್ನು ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ನೀಡಿ, ನನ್ನ ಮಕ್ಕಳು ಒಂದನೇ ತರಗತಿಯಿಂದ ಇಲ್ಲಿಯವರೆಗೂ ಹೊಸೂರು ಶಾಲೆಯಲ್ಲಿ ಶಿಕ್ಷಣ ಪಡೆದಿರುತ್ತಾರೆ ನೀವು ಯಾದಗಿರಿ ಶಾಲೆಯ SAT ದಾಖಲೆಯನ್ನು ಡಿಲೀಟ್ ಮಾಡಬೇಕು ಎಂದು ಮನವಿ ನೀಡಿ ಸರಕಾರಿ ದಾಖಲೆಯನ್ನು ನಾಶಪಡಿಸಿದ್ದಾರೆ. ಅಲ್ಲದೇ ಮುಗ್ದ ಮಕ್ಕಳನ್ನು BEO ಎದುರುಗಡೆ ಗದರಿಸಿ ರಟ್ಟೆ ಕೈ ಹಾಕಿ ನಾವು ಹೇಳಿದಂತೆ BEO ಗೆ ಹೇಳಬೇಕು, ಯಾದಗಿರಿ ಶಾಲೆಯ ವಿಷಯ ತೆಗೆಯಬಾರದು, ಲಲಿತ ಪಟಗಾರ ಹೇಳಿದಂತೆ ಹೇಳಿ ಬೇರೇ ಹೇಳಿದರೆ ಜಾಗ್ರತೆ ಎಂದು ಏನು ಅರಿಯದ ಮುಗ್ಧ ದಲಿತ ತಾಯಿ, ಮಕ್ಕಳನ್ನು ಹಾದಿ ತಪ್ಪಿಸಿರುತ್ತಾರೆ. ಇವೆಲ್ಲ ಬೆಳವಣಿಗೆಯನ್ನು ಗಮನಿಸಿ SDMC ಅಧ್ಯಕ್ಷರು ಮಾಧ್ಯಮಗಳಿಗೆ BEO ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎನ್ನುವ ಅಸಮಾಧಾನ ವ್ಯಕ್ತ ಪಡಿಸಿದ್ದರು.
ಯಾಕೆ BEO ಕ್ರಮ ಕೈಗೊಳ್ಳುತ್ತಿಲ್ಲ ಯಾಕೆ?
ಇಲ್ಲಿದೆ ನೋಡಿ ಕಹಾನಿ ಮೇ ಟ್ವಿಸ್ಟ್, BEO ನಾಗೇಶ್ ಅವರ ಪತ್ನಿಯ ಅಕ್ಕ ಮತ್ತು ಲಲಿತ್ ಪಟಗಾರ ಕ್ಲಾಸ್ ಮೆಟ್ ಅಲ್ಲದೇ ಒಂದೇ ಊರಿನವರು ಅಕ್ಕ ಪಕ್ಕ ಮನೆಯವರು, ಲಲಿತ್ ಪಟಗಾರ ಗಂಡ ಹೇಳಿಕೊಂಡಿರುವಂತೆ BEO ಕೊಡಬೇಕಾದ್ದು ಕೊಟ್ಟು ಸರಿ ಮಾಡಿದ್ದೇವೆ ಅಲ್ಲದೇ ರಾಜಕೀಯ ಪ್ರಭಾವಿಗಳ ಕೃಪೆ ಇದೆ ಎನ್ನುವ ಮಾತು ಸಾರ್ವಜನಿಕರ ಎದುರಿಗೆ ಅವರೇ ಹೇಳಿದ್ದಾರೆ ಎನ್ನಲಾಗಿದೆ. ಅವರಿಗೆ DDPI ಯವರು BEO ಗೆ ಸೂಕ್ತ ಸಲಹೆ ನೀಡಿದರು ಸಹ ಅವರ ಮಾರ್ಗದರ್ಶನವನ್ನು ಗಾಳಿಗೆ ತೂರಿ BEO ಸರ್ವಧಿಕಾರಿ ಧೋರಣೆ ತೋರಿದ್ದಾರೆ. ಮಾಧ್ಯಮಗಳು ಯಾಕೆ ಮಕ್ಕಳ ಆಯೋಗ, ರಕ್ಷಣಾ ಘಟಕಕ್ಕೆ ದೂರು ನೀಡಿಲ್ಲ, ಯಾಕೆ ದಲಿತ ದೌರ್ಜನ್ಯ ಮತ್ತು POSCO ಅಡಿ ನೀವು ದೂರು ದಾಖಲೆ ಮಾಡಿಲ್ಲ ಎಂದು ಕೇಳಿದರೆ ಅದು ನನಗೆ ಬರಲ್ಲ ಎನ್ನುವ ಉಡಾಫೆ ಉತ್ತರ ನೀಡುತ್ತಿರುವುದು ವಿಪರ್ಯಾಸ. ಬೈಂದೂರು BEO ಎಲ್ಲಾ ತಪ್ಪಿತಸ್ಥರನ್ನು ರಕ್ಷಣೆ ಮಾಡುವ ಮೂಲಕ ಕರ್ತವ್ಯ ಲೋಪ, ನಿರ್ಲಕ್ಷತನ, ಅಧಿಕಾರ ದುರುಪಯೋಗ ಮಾಡಿರುವುದು ಸಾಬೀತಾಗಿದೆ. ಅಲ್ಲದೇ ಲಲಿತ ಪಟಗಾರ ತನ್ನ ಮಿತ್ರರಾದ CRP ಹಲ್ನಾಡು ನಿತ್ಯಾನಂದ ಶೆಟ್ಟಿಯವರಿಂದಲೂ ಹಣದ ಆಮಿಷವನ್ನು ಒಡ್ಡಿರುತ್ತಾರೆ, ಅವರಿಗೂ ಕಿರಣ್ ಪೂಜಾರಿ ಖಡಕ್ ಉತ್ತರ ನೀಡಿರುತ್ತಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶಾಸಕ ಗಂಟಿಹೊಳೆಯವರೇ, ಶಿಕ್ಷಣ ಮಂತ್ರಿ ಮಧು ಬಂಗಾರಪ್ಪನವರೇ ಇವರೆಲ್ಲರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಂಡು ಮುಗ್ಧ ತಾಯಿ ಮಕ್ಕಳಿಗೆ ನ್ಯಾಯ ಒದಗಿಸಬೇಕೆಂದು ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಉಡುಪಿ ಉಸ್ತುವಾರಿ ಸಚಿವರನ್ನು ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಇಂಡಿಯಾ, ಉಡುಪಿ ಜಿಲ್ಲಾಧ್ಯಕ್ಷರಾದ ಕಿರಣ್ ಪೂಜಾರಿ ಆಗ್ರಹಿಸುತ್ತಿದ್ದಾರೆ.