Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟದ ಶಾಂತಮೂರ್ತಿ ಶನೀಶ್ವರ ದೇಗುಲ ಪೂರ್ವಭಾವಿ ಸಭೆ

ಕೋಟ: ಕೋಟದ ಶಾಂತಮೂರ್ತಿ ಶನೀಶ್ವರ  ದೇಗುಲದ ಅನ್ನಛತ್ರ,ಸಭಾಂಗಣ ಲೋಕಾರ್ಪಣೆ ಪೂರ್ವಭಾವಿ ಸಭೆ ಭಾನುವಾರ ದೇಗುಲದಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ದೇಗುಲದ ಪಾತ್ರಿಗಳಾದ ಭಾಸ್ಕರ್ ಸ್ವಾಮಿ ಮಾತನಾಡಿ ದೇಗುಲಕ್ಕೆ ಸಾಕಷ್ಟು ಭಕ್ತಸಮುದಾಯ ಆಗಮಿಸುತ್ತಿದ್ದು ಇಲ್ಲಿ ಸುಸಜ್ಜಿತ ಸಭಾಂಗಣ,ಅನ್ನಛತ್ರದ ಅವಶ್ಯಕತೆ ಇದ್ದು ಈಗಾಗಲೇ ಕಟ್ಟಡದ ಕಾಮಗಾರಿ ಶೇ.90 ಪೂರ್ಣಗೊಂಡಿದ್ದು ಬರುವ ಫೆ.12ರಿಂದ 15ರವರೆಗೆ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಲೋಕಾರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು ಇದರ ಬಗ್ಗೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ನೀಡಲು ಕೋರಿಕೊಂಡರು.

ದೇಗುಲದ ಭಕ್ತಾಧಿ ಸಾಮಾಜಿಕ ಕಾರ್ಯಕರ್ತ ಕೆ.ದಿನೇಶ್ ಗಾಣಿಗ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿಸೃತ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಕೋಟ ಮೊಗವೀರ ಯುವ ಸಂಘದ ಅಧ್ಯಕ್ಷ ರಂಜೀತ್ ಕುಮಾರ್,ಸ್ಥಳೀಯರಾದ ತಿಮ್ಮ ಕಾಂಚನ್,ಚAದ್ರ ನಾಯ್ಕ್,ಶಾರದ,ವಿಠೋಭಾ  ಭಜನಾ ಮಂದಿರದ ಅಧ್ಯಕ್ಷ ಪ್ರಭಾಕರ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೇಗುಲದ ಅರ್ಚಕ ಜಯರಾಜ್ ನಿರ್ವಹಿಸಿದರು.ಪ್ರವೀಣ್ ಕುಂದರ್ ಸಹಕರಿಸಿದರು.

ಕೋಟದ ಶಾಂತಮೂರ್ತಿ ಶನೀಶ್ವರ  ದೇಗುಲದ ಅನ್ನಛತ್ರ,ಸಭಾಂಗಣ ಲೋಕಾರ್ಪಣೆ ಪೂರ್ವಭಾವಿ ಸಭೆ ಭಾನುವಾರ ದೇಗುಲದಲ್ಲಿ ಜರಗಿತು. ದೇಗುಲ ಧರ್ಮದರ್ಶಿ ಮುಕ್ತೇಸರ ಭಾಸ್ಕರ್ ಸ್ವಾಮಿ, ಸಾಮಾಜಿಕ ಕಾರ್ಯಕರ್ತ ಕೆ.ದಿನೇಶ್ ಗಾಣಿಗ, ಪಂಚವರ್ಣ ಯುವಕ ಮಂಡಲದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *