Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಗುಲ್ವಾಡಿ : ಪತ್ರಕರ್ತರ ಜನಪರ ಕಾಳಜಿಗೆ ಸ್ಪಂದಿಸಿ, ಸೂಕ್ತ ಪರಿಹಾರ ನೀಡುವ ಆಶ್ವಾಸನೆ ನೀಡಿದ ತಹಸೀಲ್ದಾರ್ ಶೋಭಾಲಕ್ಷ್ಮೀ

ಕುಂದಾಪುರ : ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಹಲವಾರು ವರ್ಷಗಳಿಂದ ಸ್ಥಳೀಯರು ಸರಿ ಸುಮಾರು 40 ವರ್ಷಗಳಿಂದ ವಾಸವಾಗಿದ್ದು, ಹೆಚ್ಚಿನವವರು ಶ್ರಮಿಕರಾಗಿದ್ದು ಕಡುಬಡತನದಿಂದ ಜೀವನ ಸಾಗಿಸುತ್ತಿದ್ದೂ ಮಸೀದಿ ಹಿಂಬಾದಿಯಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುತ್ತಾರೆ. ಕೆಲವೊಂದು ಕಿಡಿಗೇಡಿಗಳು ಮುಗ್ದ ಜನರ ಹತ್ತಿರ ಹಣ ಪಡೆದು ನಿಮಗೆ ಹಕ್ಕು ಪತ್ರ ನೀಡುತ್ತೇವೆ ಎಂದು ವಂಚಿಸಿದ ವಿಷಯವನ್ನು ಹೊಸಕಿರಣ ನ್ಯೂಸ್ ನೊಂದಿಗೆ ಹಂಚಿಕೊಂಡಿರುತ್ತಾರೆ.

ಈ ಇಲ್ಲಿ ವಾಸಿಸುತ್ತಿರುವ ಶ್ರಮಿಕ ವರ್ಗದವರಿಗೆ ಕಾನೂನಾತ್ಮಕವಾಗಿ ವಿಷಯವನ್ನು ಮನದಟ್ಟು ಮಾಡಿ ಜನರ ಸಮಸ್ಯೆಯನ್ನು ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀಯವರ ಗಮನಕ್ಕೆ  ಹೊಸಕಿರಣ ವೆಬ್ ನ್ಯೂಸ್ ನ ಬೈಂದೂರು ವರದಿಗಾರರಾದ ಪುರುಷೋತ್ತಮ್ ಪೂಜಾರಿಯವರು ತಿಳಿಸಿದಾಗ, ಇಂದು ತಹಸೀಲ್ದಾರ್ ಶೋಭಾಲಕ್ಷ್ಮೀಯವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಜನರೊಂದಿಗೆ ಚರ್ಚಿಸಿ, ನಿಮ್ಮಲ್ಲಿರುವ ದಾಖಲೆಗಳೊಂದಿಗೆ    ಕಚೇರಿಗೆ ಬಂದು ನೀಡಿ, ಅದನ್ನು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುತ್ತೇನೆ ಎನ್ನುವ ಆಶ್ವಾಸನೆ ನೀಡಿರುತ್ತಾರೆ. ಹೊಸ ಕಿರಣ ನ್ಯೂಸ್ ನ ಜನಪರ ಕಾಳಜಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

✍️ ವರದಿ : ಪುರುಷೋತ್ತಮ್ ಪೂಜಾರಿ, ಕೊಡಪಾಡಿ

Leave a Reply

Your email address will not be published. Required fields are marked *