ಸೊರಬ : ಭವ್ಯ ಭಾರತದ ಇತಿಹಾಸದಲ್ಲಿ ತನ್ನದೇ ಆದ ಹೆಸರು ಮಾಡಿದ ಸೊರಬ ವಿಧಾನಸಭಾ ಕ್ಷೇತ್ರ ಅದರಲ್ಲೂ ಕರ್ನಾಟಕ ರಾಜ್ಯದ ಜನಪ್ರಿಯ ಜನಸ್ನೇಹಿ ಹತ್ತು ಹಲವಾರು ಜನಪಯೋಗಿ ಯೋಜನೆಗಳ ಸೋಲಿಲ್ಲದ ಸರದಾರ ದಿವಂಗತ ಎಸ್. ಬಂಗಾರಪ್ಪ ರವರನ್ನು ರಾಷ್ಟ್ರಕ್ಕೆ ಪರಿಚಯಿಸಿದ ಕೀರ್ತಿ ಸೊರಬ ಮತದಾರರಿಗೆ ಸಲ್ಲುತ್ತದೆ.
ಇತ್ತೀಚ್ಚಿನ ಬದಲಾದ ರಾಜಕೀಯ ಬೆಳವಣಿಗೆಯ ಕಾಲಘಟ್ಟದಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ವಿರುದ್ಧ ತೊಡೆ ತಟ್ಟಿ ಬಸವರಾಜ್ ಯತ್ನಾಳ್, ರಮೇಶ್ ಜಾರಕಿಹೊಳೆ, ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ ಜೊತೆ ಗುರುತಿಸಿ ಕೊಂಡಿರುವುದರಿಂದ ಸೊರಬ ಬಿಜೆಪಿ ಮೂರು ಬಾಗಿಲು ಆಗಿರುವುದು ಬಿಜೆಪಿ ಮುಖಂಡರು, ಕಾರ್ಯಕರ್ತರುಗಳು ದಿಕ್ಕು ತೋಚದೇ ಬಿಜೆಪಿ ಪಕ್ಷದ ಸಹವಾಸವೇ ಬೇಡವಾದ ಪರಿಸ್ಥಿತಿಗೆ ತಲುಪಿರುವುದು ನಗ್ನಸತ್ಯವಾಗಿದೆ. ಮಾಜಿ ಸಚಿವ ಕುಮಾರ್ ಬಂಗಾರಪ್ಪ ನಡೆ ಶಿಕ್ಷಣ ಸಚಿವ ಮಧು ಬಂಗಾರಪ್ಪರವರಿಗೆ ಮುಂದಿನ ಚುನಾವಣೆಯಲ್ಲಿ ವರದಾನವಾಗುವ ಲಕ್ಷಣಗಳು ಗೋಚರಿಸುತ್ತಿದೆ.
ಬಿಜೆಪಿ ಪಕ್ಷದ ಹೈ ಕಮಾಂಡ್ ಬಸವರಾಜ್ ಯತ್ನಾಳ್ ಸಹ ಬೆಂಬಲಿಗರ ಭಿನ್ನಮತೀಯ ಚಟುವಟಿಕೆಗೆ ಇತಿಶ್ರೀ ಹಾಡುತ್ತಾರ ಕಾದು ನೋಡುತ್ತಿರುವ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರುಗಳು ಕಾರ್ಯಕರ್ತರುಗಳು ✒️ಓಂಕಾರ ಎಸ್. ವಿ. ತಾಳಗುಪ್ಪ*














Leave a Reply