Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಡೇಶ್ವರ- ಮಹಿಳಾ ಮತ್ತು ಉದ್ಯೋಗಖಾತ್ರಿ ಗ್ರಾಮಸಭೆ, ನೋಡೆಲ್ ಅಧಿಕಾರಿಯ ಗೈರಿಗೆ ಆಕ್ರೋಶ

ಕೋಟ: ಇಲ್ಲಿನ ಪಾಂಡೇಶ್ವರ ಗ್ರಾಮಪಂಚಾಯತ್ ಮಹಿಳಾ ಮತ್ತು ಮಹಾತ್ಮಾ ಗಾಂಧಿ ಉದ್ಯೋಗಖಾತ್ರಿ ವಿಶೇಷ ಗ್ರಾಮಸಭೆ ಶುಕ್ರವಾರ ಪಂಚಾಯತ್ ಆವರಣದಲ್ಲಿ ಪಂಚಾಯತ್ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿತು. ಗ್ರಾಮಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಈ ವೇಳೆ  ಕಳೆದ ನಾಲ್ಕು ವರ್ಷಗಳಿಂದ ಗ್ರಾಮಸಭೆಯಲ್ಲಿ ಅಗತ್ಯವಾಗಿ ಇರಬೇಕಾದ ನೋಡೇಲ್ ಅಧಿಕಾರಿಗಳು ಪ್ರತಿ ಗ್ರಾಮಸಭೆಯಲ್ಲಿ ಅನುಪಸ್ಥಿತಿಗೆ ಪಂಚಾಯತ್ ಪ್ರತಿನಿಧಿ ಪ್ರತಾಪ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿ ಈ ಬಗ್ಗೆ  ಬೇಜಾವಾಬ್ದಾರಿ ಹಾಗೂ ಗ್ರಾಮಸಭೆಯನ್ನು ನಿರ್ಲಕ್ಷ÷್ಯದಿಂದ ಕಾಣುವ ನೋಡೆಲ್ ಅಧಿಕಾರಿ ಶಿಕ್ಷಣ ಇಲಾಖಾಧಿಕಾರಿಗಳ ವರ್ತನೆಯನ್ನು ಖಂಡಿಸಿದರು.ಅಲ್ಲದೆ ಈ ಬಗ್ಗೆ ನಿರ್ಣಯ ಕೈಗೊಂಡು ಮೇಲಾಧಿಕಾರಿಗಳ ಗಮನಕ್ಕೆ ಕಳುಹಿಸಲು ಸಭೆ ಸೂಚಿಸಿದರು.
ಉದ್ಯೋಗಖಾತ್ರಿ ಗ್ರಾಮಸಭೆ ಅಸಮರ್ಪಕ ಮಾಹಿತಿ ಸಭೆ ನಿರಸ ಮಹಾತ್ಮಾ ಗಾಂಧಿ ಉದ್ಯೋಗಖಾತ್ರಿ ಯೋಜನೆಯ ಗ್ರಾಮಸಭೆಯಲ್ಲಿ ಯೋಜನೆಯ ಅನುಷ್ಠಾನಕ್ಕೆ ಸಂಬAಧಿಸಿದAತೆ ಮಾಹಿತಿ ನೀಡಲು ಪಂಚಾಯತ್ ಇಲಾಖಾ ಮಟ್ಟದ ಅಧಿಕಾರಿಯಲ್ಲಿ ಸೂಚಿಸಿತು ಈ ಬಗ್ಗೆ ಮಾಹಿತಿ ನೀಡಲು ತಾಲೂಕು ಸಂಯೋಜಕ ಅಕ್ಷಯ್ ಕೃಷ್ಣ ಯತ್ನಿಸುತ್ತಿದಂತೆ ಮಾಹಿತಿ ಕೊರತೆ ಎದ್ದು ಕಾಣುತ್ತಿದೆ. ಈ ಬಗ್ಗೆ ಸಭೆ ಬೇಸರ ಹೊರಹಾಕಿದ ಪಂಚಾಯತ್ ಪ್ರತಿನಿಧಿಗಳು ನಿಮ್ಮ ಬಳಿ ಮಾಹಿತಿ ಸಮರ್ಪಕವಾದ ಮಾಹಿತಿ ಇಲ್ಲ ಎಂದು ಸಭೆಯನ್ನು ಮುಂದುವರೆಸಲು ಸೂಚಿತು.

ರಾಷ್ಟಿçಕೃತ ಬ್ಯಾಂಕ್  ಅಧಿಕಾರಿ ಕನ್ನಡದಲ್ಲೆ ವ್ಯವಹರಿಸಲಿ
ಗ್ರಾಮೀಣ ಪರಿಸರದಲ್ಲಿ ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿ ಕನ್ನಡ ಭಾಷೆಯ ಕೊರತ ಎದ್ದುಕಾಣುತ್ತಿದೆ ಅಲ್ಲದೆ ಅಲ್ಲಿನ ಸಿಬ್ಬಂದಿ ವರ್ಗ ಜನಸ್ನೇಹಿಯಾಗಿ ವರ್ತಿಸುತ್ತಿಲ್ಲ ಹೀಗಾದರೆ ಪರಿಸ್ಥಿತಿ ಹೇಗೆ ಎಂದು ಪಂಚಾಯತ್ ಉಪಾಧ್ಯಕ್ಷ ವೈ .ಬಿ ರಾಘವೇಂದ್ರ ಪ್ರಶ್ನಿಸಿದರು. ಈ ಬಗ್ಗೆ ಮಾತನಾಡಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಷ್  ಸಂಬAಧಿಸಿದ ಬ್ಯಾಂಕ್‌ಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಗೃಹಲಕ್ಷಿ÷್ಮ ವಂಚಿತರ ಗೋಳು ಗಮನ ಸೆಳೆದ ಸದಸ್ಯ ಸಿಲ್ವಸ್ಟಾರ್ ರಾಜ್ಯಸರಕಾರದ ಮಹತ್ವದ ಯೋಜನೆಯಾದ ಗೃಹಲಕ್ಷಿ÷್ಮ ಯೋಜನೆಯನ್ನು ಕರಾರುವಾಕ್ಕಾಗಿ ಅನುಷ್ಠಾನಗೊಳಿಸಿದೆ ಆದರೆ ವ್ಯಾಪ್ತಿಯ ಕೆಲವು ಫಲಾನುಭವಿಗಳು ವಂಚಿತರಾಗಿದ್ದಾರೆ ಈ ಬಗ್ಗೆ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಭಾಗೀರಥಿ ಪಂಚಾಯತ್ ಸದಸ್ಯ ಸಿಲ್ವಸ್ಟಾರ್ ಗಮನ ಸೆಳೆದರು.

ಈ ಬಗ್ಗೆ ಐಟಿ,ಜಿಎಸ್ ಟಿ ಅನುಷ್ಠಾನಗೊಳಿಸಿದವರಿಗೆ ಇದರ ಸಮಸ್ಯೆ ಸೃಷ್ಠಿಯಾಗಿದ್ದು ಸತ್ಯ ಇನ್ನುಳಿದಂತೆ ತಮ್ಮ ಗಮನಕ್ಕೆ ಬಂದ ವಂಚಿತ ಫಲಾನುಭವಿಗಳ ಬಗ್ಗೆ ಮೇಲಾಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ಉತ್ತರಿಸಿದರು. ವಿವಿಧ ಇಲಾಧಿಕಾರಿಗಳು,ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ ಉದ್ಯೋಗಖಾತ್ರಿ ವರದಿ ಮಂಡಿಸಿದರು.ಕಾರ್ಯಕ್ರಮವನ್ನು ಕಾರ್ಯದರ್ಶಿ ವಿಜಯ ಭಂಡಾರಿ ನಿರೂಪಿಸಿದರು.

ಪಾಂಡೇಶ್ವರ ಗ್ರಾಮಪಂಚಾಯತ್ ಮಹಿಳಾ ಮತ್ತು ಮಹಾತ್ಮಾ ಗಾಂಧಿ ಉದ್ಯೋಗಖಾತ್ರಿ ವಿಶೇಷ ಗ್ರಾಮಸಭೆ ಶುಕ್ರವಾರ ಪಂಚಾಯತ್ ಆವರಣದಲ್ಲಿ ಪಂಚಾಯತ್ ಅಧ್ಯಕ್ಷೆ ಸುಶೀಲ ಸದಾನಂದ ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿತು.

Leave a Reply

Your email address will not be published. Required fields are marked *