ಕೋಟ: ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂದಿರ ಕೊಮೆ ಕೊರವಡಿ ಇದರ ವಾರ್ಷಿಕ ಕಾರ್ತಿಕ ಮಾಸದ ಪ್ರಯುಕ್ತ ಶ್ರೀರಾಮ ಮಂದಿರದ ದಿವ್ಯ ಸನ್ನಿಧಿಯಲ್ಲಿ ನ.24ರಂದು ಭಾನುವಾರ ಸಾಮೂಹಿಕ ದೀಪೋತ್ಸವ ಹಾಗೂ ರಂಗ ಪೂಜೆ ಕಾರ್ಯಕ್ರಮ ಜರಗಿತು.ಧಾರ್ಮಿಕ ವಿಧಿ ವಿಧಾನಗಳನ್ನು ಮಂಜುನಾಥ ಹೊಳ್ಳ ನೆರವೆರಿಸಿದರು.
ಆ ಪ್ರಯುಕ್ತ ಸಂಜೆ 4 ಗಂಟೆಯಿoದ ವಿವಿಧ ಭಜನಾ ತಂಡಗಳಿAದ ಕಾರ್ಯಕ್ರಮ, ರಾತ್ರಿ ರಂಗ ಪೂಜೆ ಹಾಗೂ ಮಹಾಮಂಗಳಾರತಿ ಸೇವೆ, ಫಲಹಾರದ ವ್ಯವಸ್ಥೆ ನಡೆಯಿತು. ಮಂದಿರದ ಆಡಳಿತ ಮಂಡಳಿ ಮತ್ತು ಜೀರ್ಣೋದ್ಧಾರ ಸಮಿತಿಯ ಸದಸ್ಯರು ಹಾಗೂ ಕೊಮೆ ಕೊರವಡಿ ಭಗವತ್ ಭಕ್ತರು ಗ್ರಾಮಸ್ಥರು ಉಪಸ್ಥಿತರಿದ್ದರು. ಕೊಮೆ ಕೊರವಡಿ ಪಟ್ಟಾಭಿರಾಮಚಂದ್ರ ಮಂದಿರದಲ್ಲಿ ದೀಪೋತ್ಸವ ಕಾರ್ಯಕ್ರಮ ಜರಗಿತು.
ಮಂದಿರದ ಆಡಳಿತ ಮಂಡಳಿ ಮತ್ತು ಜೀರ್ಣೋದ್ಧಾರ ಸಮಿತಿಯ ಸದಸ್ಯರು ಹಾಗೂ ಕೊಮೆ ಕೊರವಡಿ ಭಗವತ್ ಭಕ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.















Leave a Reply