Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತೆಕ್ಕಟ್ಟೆ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟನೆ

ಕೋಟ: ನಾಡೋಜ ಡಾ.ಜಿ.ಶಂಕರ್ ಇವರ ಕನಸಿನಂತೆ ಯಾವ ರೋಗಿಗಳಿಗೂ ರಕ್ತದ ಕೊರತೆ ಬರಬಾರದು ಎಂಬ ನೆಲೆಯಲ್ಲಿ ಮೊಗವೀರ ಯುವ ಸಂಘಟನೆ ಬೃಹತ್ ರಕ್ತದಾನ ಶಿಬಿರಗಳನ್ನು ಸತತ 15 ವರ್ಷಗಳಿಂದ ಯಾವ ಸ್ವಾರ್ಥವನ್ನು ಇಟ್ಟುಕೊಳ್ಳದೆ ರಾಜ್ಯದ್ಯಾಂತ ಹಮ್ಮಿಕೊಳ್ಳತ್ತಾ ಬರುತ್ತಿದೆ. ರಕ್ತದಾನ ಮಹಾದಾನ. ಒಬ್ಬ ವ್ಯಕ್ತಿ ರಕ್ತದಾನ ಮಾಡಿದರೇ 4 ಮಂದಿ ಜೀವ ಉಳಿಸಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಹೇಳಿದರು. 

ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕ ಮತ್ತು ಮಹಿಳಾ ಸಂಘಟನೆ, ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಇವರ ನೇತೃತ್ವದಲ್ಲಿ ರೋಟರಿ ಕ್ಲಬ್ ತೆಕ್ಕಟ್ಟೆ, ರಕ್ತನಿಧಿ ಕೆಎಮ್‌ಸಿ ಮಣಿಪಾಲ ಹಾಗೂ ಜಿಲ್ಲಾಡಳಿತ ಉಡುಪಿ, ಎಚ್‌ಡಿಎಫ್‌ಸಿ ಬ್ಯಾಂಕ್, ಶ್ರೀ ಸುಧೀಂದ್ರ ಸಭಾ ಭವನ ತೆಕ್ಕಟ್ಟೆ ಇವರ ಸಹಕಾರದೊಂದಿಗೆ ಭಾನುವಾರ ತೆಕ್ಕಟ್ಟೆ ಸುಧೀಂದ್ರ ಸಭಾ ಭವನದಲ್ಲಿ ಜರುಗಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ತೆಕ್ಕಟ್ಟೆ ರೋಟರಿ ಕ್ಲಬ್ ಕರ‍್ಯದರ್ಶಿ ಕೃಷ್ಣ ಮೊಗವೀರ ಮಾತನಾಡಿ, ಮನುಷ್ಯ ಎಷ್ಟು ಬೇಕಾದರೂ ಹಣ ಸಂಪಾದನೆ ಮಾಡಬಹುದು. ಆದರೆ ರಕ್ತವನ್ನು ಯಾವುದೇ ಹಣದಿಂದ ತಯಾರಿಸಲು ಸಾಧ್ಯವಿಲ್ಲ. ಇದರಿಂದ ಈ ಪುಣ್ಯದ ಕೆಲಸದಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕರೆ ನೀಡಿದರು.

ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕ ಅಧ್ಯಕ್ಷ ನಾಗರಾಜ್ ಬೀಜಾಡಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸಂತೋಷ ನಾಯ್ಕ್ ತೆಕ್ಕಟ್ಟೆ, ಮಾಜಿ ಜಿಲ್ಲಾಧ್ಯಕ್ಷರಾದ ಅಧ್ಯಕ್ಷ ರಾಜೇಂದ್ರ ಹಿರಿಯಡ್ಕ, ಸತೀಶ್ ಎಮ್ ನಾಯ್ಕ್, ಜಿಲ್ಲಾ ಕರ‍್ಯದರ್ಶಿ ರವೀಂದ್ರ ಪುತ್ರನ್, ಕೆಎಮ್‌ಸಿ ಮಣಿಪಾಲ ರಕ್ತನಿಧಿ ವಿಭಾಗದ ವೈದ್ಯೆ ಡಾ.ಕಾವ್ಯ, ಎಚ್‌ಡಿಎಫ್‌ಸಿ ಬ್ಯಾಂಕ್‌ನ ದೀಕ್ಷಾ, ಕೋಟೇಶ್ವರ ಘಟಕದ ಗೌರವಾಧ್ಯಕ್ಷ ಸುರೇಶ್ ಮೊಗವೀರ ಶಾನಾಡಿ, ಮಾಜಿ ಅಧ್ಯಕ್ಷ ಸುನೀಲ್ ಜಿ ನಾಯ್ಕ್, ಕೋಟೇಶ್ವರ ಮಹಿಳಾ ಸಂಘಟನೆ ಅಧ್ಯಕ್ಷೆ ಉಷಾ ಬಂಗೇರ ಮತ್ತಿತರರು ಉಪಸ್ಥಿತರಿದ್ದರು. ಸುನೀಲ್ ಜಿ ನಾಯ್ಕ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕೋಟೇಶ್ವರ ಘಟಕದ ಕರ‍್ಯದರ್ಶಿ ರಾಘವೇಂದ್ರ ಹಳಅಳಿವೆ ಕರ‍್ಯಕ್ರಮ ನಿರ್ವಹಿಸಿದರು.

ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಜಯಕರ ಅಮೀನ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕ ಅಧ್ಯಕ್ಷ ನಾಗರಾಜ್ ಬೀಜಾಡಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸಂತೋಷ ನಾಯ್ಕ್ ತೆಕ್ಕಟ್ಟೆ, ಮಾಜಿ ಜಿಲ್ಲಾಧ್ಯಕ್ಷರಾದ ಅಧ್ಯಕ್ಷ ರಾಜೇಂದ್ರ ಹಿರಿಯಡ್ಕ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *