
ಕೋಟ: ಕೋಟ ಗ್ರಾಮಪಂಚಾಯತ್ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯ ದಾಖಲಿಸಿದ್ದಾರೆ. ಇತ್ತೀಚಿಗೆ ಗಿಳಿಯಾರು ಹರ್ತಟ್ಟು ವಾರ್ಡ್ ಶಾಂತಿ ಜಿ.ಪೈ ನಿಧನ ಹೊಂದಿದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಬಿಜೆಪಿ ಬೆಂಬಲಿ ಅಭ್ಯರ್ಥಿಯಾಗಿ ಪ್ರೇಮ ಹರೀಷ್ ದೇವಾಡಿಗ ಕಾಂಗ್ರೆಸ್ ಬೆಂಬಲಿ ಸರಸ್ವತಿ ಶೇಖರ್ ದೇವಾಡಿಗ ಕಣದಲ್ಲಿದ್ದರು. ನ.23ರಂದು ಚುನಾವಣೆಯಲ್ಲಿ 221ಮತಗಳ ಅಂತರಿAದ ಪ್ರೇಮ ಜಯಶಾಲಿಯಾದರು.
ಜಯಗಳಿಸಿದ ಪ್ರೇಮ ಹರೀಷ್ ರವರನ್ನು ಬಿಜೆಪಿ ಮುಖಂಡರು ಅಭಿನಂದಿಸಿದರು.ಇದೇ ವೇಳೆ ಕೋಟ ಅಮೃತೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರುಟೀ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಕೋಟ ಗ್ರಾಮಪಂಚಾಯತ್ ಚುನಾವಣೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರೇಮ ಗೆಲುವಿನ ಹಿನ್ನಲ್ಲೆಯಲ್ಲಿ ಕೋಟ ಅಮೃತೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
Leave a Reply