
ಕೋಟ: ರೋಟರಿ ಕೋಟ ಸಿಟಿ ಆಶ್ರಯದಲ್ಲಿ ರೋಟರಿ ವಲಯ ೨ರ ವಲಯ ಮಟ್ಟದ ಕ್ರೀಡಾಕೂಟವು ಮೂರು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ ೩೦.ರ ಶನಿವಾರದಂದು ಕೋಟೇಶ್ವರದ ಸಹನಾ ಒಳಾಂಗಣ ಕ್ರೀಡಾಂಗಣದಲ್ಲ್ಲಿ ಇಂಡೋರ್ ಗೇಮ್ಸ್, ಡಿಸೆಂಬರ್ ೧ರಂದು ಹಳೆಕೋಟೆ ಮೈದಾನ ಸಾಲಿಗ್ರಾಮ ಇಲ್ಲಿ ಕ್ರಿಕೆಟ್ ಪಂದ್ಯಾಟ ಹಾಗೂ ಡಿಸೆಂಬರ್ ೮.ರ ಭಾನುವಾರದಂದು ವಿವೇಕ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯಲ್ಲಿದ್ದು, ವಲಯದ ಆರು ಕ್ಲಬ್ಬುಗಳಿಂದ ಸದಸ್ಯರು ಭಾಗವಹಿಸಲಿದ್ದು, ಇಂಡೋರ್ ಗೇಮ್ಸ್ನ್ನು ರೋಟರಿ ಪಾಸ್ಟ್ ಡಿಸ್ಟಿçಕ್ಟ್ ಗವರ್ನರ್ ರಾಜಾರಾಮ್ ಭಟ್ ಉದ್ಘಾಟಿಸಲಿದ್ದು, ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ರೋಟರಿ ಪಾಸ್ಟ್ ಡಿಸ್ಟಿçಕ್ಟ್ ಗವರ್ನರ್ ಜ್ಞಾನವಸಂತ ಶೆಟ್ಟಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿವೇಕ ಪಿ.ಯು. ಕಾಲೇಜಿನ ಪ್ರಾಂಶುಪಾಲ ಜಗದೀಶ್ ನಾವಡ, ಜಿಲ್ಲಾ ಸ್ಪೋಟ್ಸ್ ಚೇರ್ಮನ್ ಅಮಿತ್ ಅರವಿಂದ್, ಚಿನ್ಮಯಿ ಆಸ್ಪತ್ರೆ ಕುಂದಾಪುರ ಇಲ್ಲಿನ ವೈದ್ಯಕೀಯ ನಿರ್ದೇಶಕರಾದ ಡಾ. ಉಮೇಶ್ ಪುತ್ರನ್, ಜಿಲ್ಲಾ ಸ್ಪೋಟ್ಸ್ ವೈಸ್ ಚೇರ್ಮನ್ ಡಾ. ಕೆಂಪರಾಜ್, ವಲಯ ೨ರ ಅಸಿಸ್ಟೆಂಟ್ ಗವರ್ನರ್ ಮಮತಾ ಆರ್ ಶೆಟ್ಟಿ, ಝೋನಲ್ ಟ್ರೈನರ್ ಸುರೇಶ್ ಬೇಳೂರು, ವಲಯ ಸ್ಪೋಟ್ಸ್ ಕೋರ್ಡಿನೇಟರ್ ವಿಷ್ಣುಮೂರ್ತಿ ಉರಾಳ, ಝೋನಲ್ ಲೆಫ್ಟಿನೆಂಟ್ ನಿತ್ಯಾನಂದ ನಾÊರಿ, ಸತೀಶ್ ಕುಮಾರ್ ಶೆಟ್ಟಿ, ಗಣೇಶ್ ಹೊಳ್ಳ, ಕ್ಲಬ್ ಸ್ಪೋಟ್ಸ್ ಚೇರ್ಮನ್ ನಿತೇಶ್ ಶೆಟ್ಟಿ, ಕ್ಲಬ್ಬಿನ ಅಧ್ಯಕ್ಷ ಅನಿಲ್ ಸುವರ್ಣ, ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಮುಂತಾದವರು ಉಪಸ್ಥಿತರಿರುವರು ಎಂದು ಕ್ಲಬ್ಬಿನ ಪ್ರಕಟಣೆ ತಿಳಿಸಿದೆ.
Leave a Reply