
ಕೋಟ: ಸಾಂಸ್ಕçತಿಕ ಹರಿಕಾರ, ಸಂಘ ಸಂಸ್ಥೆಗಳ ಪ್ರೋತ್ಸಾಹಕ, ಯಕ್ಷಗಾನ ಕಲಾಕೇಂದ್ರದ ಮೂಲಕರ್ತೃ ಗುಂಡ್ಮಿ ಶಂಕರನಾರಾಯಣ ಉಪಾಧ್ಯರ 11 ನೆಯ ವರ್ಷದ ಸಂಸ್ಮರಣಾ ಕಾರ್ಯಕ್ರಮವು ನಾಳೆ ನ.À 30ರ ಭಾನುವಾರ ಸಂಜೆ ಗಂಟೆ 6.ಕ್ಕೆ ಏರ್ಪಡಿಸಲಾಗಿದೆ. ಈ ಸಂಧರ್ಭದಲ್ಲಿ ಅಸೌಖ್ಯ ದಿಂದಿರುವ ಭಾಗವತ ಹೆಬ್ರಿ ಗಣೇಶರ ಪುತ್ರರಾದÀ ಅಮೃತ ರಾಜರಿಗೆ ವೈದ್ಯಕೀಯ ನೆರವು ನೀಡಲಾಗುವುದು. ಅಂತೆಯೇ ಇಟಗಿ ಮಹಾಬಲೇಶ್ವರ ಭಟ್ಟ ರಚಿತ ಗುರುದಕ್ಷಿಣೆ ಯಕ್ಷಗಾನ ಪ್ರದರ್ಶನವಿದ್ದು, ಕೊಂಡದಕುಳಿ, ತೋಟಿಮನೆ, ಅಶೋಕ ಭಟ್ಟ ಸಿದ್ದಾಪುರ, ಕುಳಿಮನೆ ನಾಗೇಶ್, ಆದಿತ್ಯ ಹೆಗಡೆ, ಅಶೋಕ್ ಆಚಾರ್ ಮುಂತಾದ ಕಲಾವಿದರು ಭಾಗವಹಿಸುತ್ತಿದ್ದಾರೆಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ತಿಳಿಸಿರುತ್ತಾರೆ.
Leave a Reply