
ಕೋಟ: ರೈತ ಕಾಯಕವಿದ್ದರೆ ಸಮಾಜದಲ್ಲಿ ಬದುಕು ಜೀವಂತ, ಅಂತಹ ರೈತರ ಬಗ್ಗೆ ನಿರ್ಲಕ್ಷಿ÷್ಯÃಯ ಧೋರಣೆ ಸಲ್ಲ ಎಂದು ರೈತಧ್ವನಿ ಸಂಘದ ಹೋರಾಟಗಾರ ನ್ಯಾಯವಾದಿ ಟಿ.ಮಂಜುನಾಥ್ ಗಿಳಿಯಾರು ಅಭಿಪ್ರಾಯಪಟ್ಟರು
ಬುಧವಾರ ಕೋಟದ ಮಣೂರು ಪಡುಕರೆಯ ರವೀಂದ್ರ ಶೆಟ್ಟಿ ಮನೆಯಂಗಳದಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇವರ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ,ವಿಪ್ರ ಮಹಿಳಾ ಸಾಲಿಗ್ರಾಮ ವಲಯ,ಜೆಸಿಐ ಸಿನಿಯರ್ ಲಿಜನ್ ಕೋಟ ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 41ನೇ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಸ್ತುತ ರೈತರು ಬೆಳೆದ ಬೆಳೆಗಳಿಗೆ ನೈಜ ಬೆಲೆ ನೀಡಲು ಮಧ್ಯವರ್ತಿಗಳಿಂದಾಗುತ್ತಿದೆ ಇದರ ಪರಿಣಾಮ ರೈತ ಸಮುದಾಯ ಕೃಷಿ ಕಾಯಕದಿಂದ ಹಿಂದೆ ಸರಿಯುವ ಲಕ್ಷಣಗಳು ಗೊಚರಿಸಿದರೂ ಆಶ್ಚರ್ಯ ಪಡಬೇಕಿಲ್ಲ ಅಂತಹ ಕಾಲಘಟಕ್ಕೆ ನಮ್ಮ ವ್ಯವಸ್ಥೆ ತಳ್ಳಲ್ಪಟ್ಟಿದೆ ಹೀಗಾದರೆ ಮುಂದಿನ ದಿನಗಳಲ್ಲಿ ಆಹಾರದ ಬೆಲೆ ಗಗನಕ್ಕೆ ಏರಿದರೂ ಆಶ್ಚರ್ಯಪಡಬೇಕಾಗಿಲ್ಲ ,ಇಂತಹ ದಿನಗಳಲ್ಲಿ ಪಂಚವರ್ಣ ಸಂಸ್ಥೆ ರೈತಪರ ಕಾಳಜಿಯ ಕಾರ್ಯಕ್ರಮ ಅವರನ್ನು ಗುರುತಿಸುವ ಕಾಯಕ ಅತ್ಯಂತ ಶ್ರೇಷ್ಠವಾಗಿದೆ ಅದರಲ್ಲೂ ರವೀಂದ್ರ ಶೆಟ್ಟಿಯವರ ಕೃಷಿ ಪ್ರಪಂಚವನ್ನು ತೆರದಿಟ್ಟರು.
ಭೂಮಿಯ ಮೇಲೆ ಪ್ಲಾಸ್ಟಿಕ್ ಅವಲಂಬಲನೆ ಸಲ್ಲ
ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಮಾತನಾಡಿ ಪರಿಸರದ ಹಾಗೂ ಕೃಷಿ ಭೂಮಿಯ ಮೇಲೆ ಪ್ಲಾಸ್ಟಿಕ್ ಅತಿಯಾಗಿ ವಿಜೃಂಭಿಸುತ್ತಿದೆ ಇದು ಪ್ರತಿಯೊಂದು ಜೀವಿಗೂ ಮಾರಕವಾಗಿದೆ ಹೊಳೆ ತೊರೆಗಳಲ್ಲೂ ಪ್ಲಾಸ್ಟಿಕ್ ಮಯವಾಗಿದೆ ಇದರಿಂದ ಮನುಷ್ಯ ಜೀವಕ್ಕೆ ಸಂಚಕಾರಬAದೊದಗುತ್ತಿದೆ ಈಗಲೇ ಜಾಗೃತರಾಗುವುದು ಒಳಿತು ಎಂದರಲ್ಲದೆ ರವೀಂದ್ರ ಶೆಟ್ಟಿಯವರ ಕೃಷಿ ಕಾರ್ಯವೈಕರಿಯ ಬಗ್ಗೆ ಗುಣಗಾನಮಾಡಿದರು.
ವಿಶೇಷತೆ ಗೋಪೂಜೆ,ಪರಿಸರಜಾಗೃತಿ,ರೈತ ಸನ್ಮಾನ
ರೈತರೆಡೆಗೆ ಕಾರ್ಯಕ್ರಮದಲ್ಲಿ ಸಾಧಕ ಕೃಷಿಕ ರವೀಂದ್ರ ಶೆಟ್ಟಿ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.ವಿಶೇಷವಾಗಿ ಗೋಪೂಜೆ ನೆರವೇರಿಸಿ,ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಂ.ಭಾಸ್ಕರ್ ಶೆಟ್ಟಿ ಸನ್ಮಾನಿತರ ಬಗ್ಗೆ ಪರಿಚಯಿಸಿದರು.
ಕೋಟದ ರೈತ ಸಂಪರ್ಕಕೇAದ್ರದ ಅಧಿಕಾರಿ ಸುಪ್ರಭಾ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಮುಖ್ಯ ಅಭ್ಯಾಗತರಾಗಿ ರೈತಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಅಧ್ಯಕ್ಷ ತಿಮ್ಮ ಪೂಜಾರಿ,ಗೆಳೆಯರ ಬಳಗ ಕಾರ್ಕಡ ಸದಸ್ಯ ಶೇಖರ್ ಕಾರ್ಕಡ,ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸ್ವಾಗತಿಸಿ ಪ್ರಾಸ್ತಾವನಾ ನುಡಿಗಳನ್ನಾಡಿದರು.ಕಾರ್ಯಕ್ರಮವನ್ನು ಪಂಚವರ್ಣ ಸದಸ್ಯ ಸಂತೋಷ್ ಕುಮಾರ್ ಕೋಟ ನಿರೂಪಿಸಿದರೆ,ಸದಸ್ಯ ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.
ಕೋಟದ ಮಣೂರು ಪಡುಕರೆಯ ರವೀಂದ್ರ ಶೆಟ್ಟಿ ಮನೆಯಂಗಳದಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇವರ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ,ವಿಪ್ರ ಮಹಿಳಾ ಸಾಲಿಗ್ರಾಮ ವಲಯ,ಜೆಸಿಐ ಸಿನಿಯರ್ ಲಿಜನ್ ಕೋಟ ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 41ನೇ ಸರಣಿ ಕಾರ್ಯಕ್ರಮದಲ್ಲಿಸಾಧಕ ಕೃಷಿಕ ರವೀಂದ್ರ ಶೆಟ್ಟಿ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಎಂ.ಭಾಸ್ಕರ್ ಶೆಟ್ಟಿ, ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ಕೋಟದ ರೈತ ಸಂಪರ್ಕಕೇAದ್ರದ ಅಧಿಕಾರಿ ಸುಪ್ರಭಾ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಮತ್ತಿತರರು ಇದ್ದರು.
Leave a Reply