ಅರಣ್ಯ ಸಚಿವ ಈಶ್ವರಪ್ಪ ಖಂಡ್ರೆ ರವರು ಎಂಪಿಎಂ ನಾಗಭೂಷಣ ಕೋಟ್ಯಂತರ ರೂ ಅಕ್ರಮ ಅವ್ಯವಹಾರದ ನಾಗಾಲೋಟಕದ ವಿರುದ್ಧ ತನಿಖೆ ನೆಡೆಸುತ್ತಾರಾ……?! ಅಥವಾ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಲ ಚಡ್ಡಿರೂಢ ಮುಖಂಡರು ಎಂಪಿಎಂ ನಾಗಭೂಷಣ ತನಿಖೆ ಪ್ರಕರಣವನ್ನೂ ಕಸದ ಬುಟ್ಟಿಗೆ ಹಾಕಿದಂತೆ ಅರಣ್ಯ ಸಚಿವರೂ ಗಪ್ ಚುಪ್ ಆಗ್ತಾರಾ…….?! ಮುಳುಗಡೆ ಅಗ್ತಾ ಇರೋದು ಮಾತ್ರಾ ಎಂಪಿಎಂ ಸಾರ್ವಜನಿಕರ ತೆರಿಗೆ ಹಣ…..!!!!!!!!
ಸಾಗರ & ಹೊಸನಗರ : ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದ ಸಾಗರ ಹಾಗೂ ಹೊಸನಗರ ವ್ಯಾಪ್ತಿಯಲ್ಲಿ ಹುಲುಸಾಗಿ ಬೆಳೆದ ಅಕೇಶಿಯಾ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿ ಬಹು ಕೋಟಿ ಹಗರಣದ ಪಿತಾಮಹ ಎಂದೇ ಕುಖ್ಯಾತಿ ಎಂದೇ ಆರೋಪಿತ ಎಂಪಿಎಂ ನಾಗಭೂಷಣ್ ವಿರುದ್ಧ ಈಗಾಗಲೇ ದೂರುಗಳು ಸಂಬಂಧ ಪಟ್ಟ ಇಲಾಖೆಯವರಿಗೆ ಸಲ್ಲಿಸಿದ್ದು, ಇಲಾಖೆಯ ವಿಚಾರಣೆಯೂ ನೆಡೆಯುತ್ತಿದ್ದೂ, ಅಮಾನತ್ತು ಆದೇಶ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗತಕಾಲದ ಇತಿಹಾಸ.
ಎಂಪಿಎಂ ನಾಗಭೂಷಣ್ ಬಚಾವ್ ಮಾಡುವ ಹಿಂದೇ ಕೆಲ ಚಡ್ಡಿ ದೇಶ ಭಕ್ತರ ಪಟಾಲಂ ಹಾಗೂ ಕೆಲ ಸಾಗರದಲ್ಲಿರುವ ಬಿಜೆಪಿ ಮುಖಂಡರುಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಕರಣವನ್ನೂ ಮುಚ್ಚಿ ಹಾಕಲು ಹರಸಾಹಸ ಮಾಡಿರುವುದು ಗಾಸಿಪ್ ಆಗಿ ಉಳಿಯದೇ ಅಂತಿಮವಾಗಿ ಜಗಜಾಹ್ಹಿರವಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಮಾನ್ಯ ಅರಣ್ಯ ಸಚಿವರ ಅವಗಾಹನೆಗೆ ತರ ಬಯಸುತ್ತಿದ್ದೇನೆ
ಎಂಪಿಎಂ ಸಂಸ್ಥೆಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಐಎಎಸ್ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳೇ ಆಗಿರುವುದು ಎಲ್ಲೋ ಎಂಪಿಎಂ ಅಕೇಶಿಯಾ ಮರಗಳ ಅಕ್ರಮ ಕಡಿತಲೆ ಬಹು ಕೋಟಿ ಅವ್ಯವಹಾರ ಅಕ್ರಮ ವಿರುದ್ಧ ನ್ಯಾಯಯುತ ತನಿಖೆ ನೆಡೆಸಲು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದೇ ಹಿಂದೇಟು ಜಿಲ್ಲಾಧಿಕಾರಿಗಳ ಕರ್ತವ್ಯ ಲೋಪ ವಿರುದ್ಧ ಎಂಪಿಎಂ ಉಳಿಸಿ ಹೋರಾಟಗಾರರೂ, ಪರಿಸರವಾದಿಗಳು, ಪ್ರಜ್ಞಾವಂತರೂ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಬೆಳಕಿಗೆ ಬಂದಿದೆ
ಎಂಪಿಎಂ ಸಂಸ್ಥೆ ಮುಳುಗಡೆ ಹಿಂದೇ ಇಂತಹ ಭ್ರಷ್ಟ ಅಧಿಕಾರಿಗಳ ಪಟಾಲಂ ಹುನ್ನಾರ ಬಯಲು ಮಾಡುವ ಪ್ರಾಮಾಣಿಕ ಪ್ರಯತ್ನವನ್ನೂ ಕರ್ನಾಟಕ ರಾಜ್ಯ ಸರ್ಕಾರದ ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ, ಶಿಕ್ಷಣ ಸಚಿವರೂ ಮಧು ಬಂಗಾರಪ್ಪ ಎಂಪಿಎಂ ಉಳಿವಿಗಾಗಿ SIT ತಂಡ ರಚನೆ ಮಾಡಿ ಎಂಪಿಎಂ ನಾಗಭೂಷಣ್ ಇನ್ನಿತರ ಭ್ರಷ್ಟ ಅಧಿಕಾರಿಗಳ ಅಕ್ರಮ ಅವ್ಯವಹಾರ ವಿರುದ್ಧ ತನಿಖೆ ನೆಡೆಸುವಂತೆ ಶಿವಮೊಗ್ಗ ಜಿಲ್ಲಾ ಎಂಪಿಎಂ ಉಳಿವಿಗಾಗಿ ಸಕಲ ಪ್ರಯತ್ನದಲ್ಲಿರುವ ಸಂಘಗಳ ಹೋರಾಟಗಾರರೂ, ಪರಿಸರವಾದಿಗಳು, ಪ್ರಜ್ಞಾವಂತರೂ ಅಗ್ರಹಿಸಿದ್ದಾರೆ.
✒️ಓಂಕಾರ ಎಸ್. ವಿ. ತಾಳಗುಪ್ಪ*