• Sat. Apr 19th, 2025

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಟದ ಪಂಚವರ್ಣ ಸಂಸ್ಥೆಯಿಂದ 233ನೇ ಪರಿಸರಸ್ನೇಹಿ ಅಭಿಯಾನ, ಕೋಡಿ ಹೊಸಬೇಂಗ್ರೆ ಬೀಚ್ ಕ್ಲಿನಿಂಗ್
ಕೋಡಿ ಹೊಸಬೇಂಗ್ರೆ- ಸ್ವಚ್ಛತೆಯ ಬಗ್ಗೆ ಸ್ಥಳೀಯರಿಗೆ ಅರಿವಿರಬೇಕು -ಅಣ್ಣಪ್ಪ ಕುಂದರ್

ByKiran Poojary

Dec 8, 2024

ಕೋಟ:  ಪರಿಸರದ ಸ್ವಚ್ಛತೆಯ ಬಗ್ಗೆ ಸ್ಥಳೀಯರು ಜಾಗೃತಿಹೊಂದಬೇಕು ಆಗಲೇ ಪರಿಸರ ಶುಚಿಯಾಗಿಡಲು ಸಾಧ್ಯ ಎಂದು ಕೋಡಿ ಗ್ರಾಮಪಂಚಾಯತ್ ಮಾಜಿ ಉಪಾಧ್ಯಕ್ಷ ಅಣ್ಣಪ್ಪ ಕುಂದರ್ ಅಭಿಪ್ರಾಯಪಟ್ಟರು.
ಭಾನುವಾರ ಕೋಡಿ ಹೊಸಬೇಂಗ್ರೆ ಬೀಚ್ ಪ್ರದೇಶದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ 233ನೇ ಪರಿಸರಸ್ನೇಹಿ ಅಭಿಯಾನದ ಅಂಗವಾಗಿ ಕೋಡಿ ಗ್ರಾಮಪಂಚಾಯತ್, ಸಂಜೀವಿನಿ ಒಕ್ಕೂಟ,ಪಂಚಶಕ್ತಿ ಸಂಘ ಕೋಡಿ ತಲೆ,ಮಣೂರು ಫ್ರೆಂಡ್ಸ್, ಹoದಟ್ಟು ಮಹಿಳಾ ಬಳಗ ಕೋಟ ಇವರುಗಳ ಸಹಯೋಗದೊಂದಿಗೆ ಕೋಡಿ ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿ ಪರಿಸರದ ಬಗ್ಗೆ ಜಾಗೃತಿ ಮೂಡದಿದ್ದರೆ ಪ್ರಾಕೃತಿಕ ವಿಕೋಪಗಳು ಪ್ರಸ್ತುತ ಕಾಲಘಟ್ಟದಲ್ಲಿ ಕಾಣುತ್ತಿದ್ದೇವೆ, ವಾತಾವರಣ ವೈಪರೀತ್ಯಗಳು ಸಂಭವಿಸುತ್ತಲೇ ಇರುತ್ತದೆ ಹಿಂದಿನ ಹಿರಿಯರು ನೀಡಿದ ಪಕೃತಿಯನ್ನು ಮತ್ತೆ ಮರುಗಳಿಸುವಂತೆ ಕರೆ ನೀಡಿದರು. ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಕಾರ್ವಿ ಅಧ್ಯಕ್ಷತೆ ವಹಿಸಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದರು.

ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ , ಕಾರ್ಯದರ್ಶಿ ವಸಂತಿ ಹಂದಟ್ಟು, ಯುವಕ ಮಂಡಲದ ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್, ಪಂಚಶಕ್ತಿ ಸಂಘ ಕೋಡಿ ತಲೆ ಕಾರ್ಯದರ್ಶಿ ಸಂದೀಪ್, ಸoಜೀವಿನಿ ಒಕ್ಕೂಟದ ಅಧ್ಯಕ್ಷೆ ದೀಪಾ ಕಾರ್ವಿ, ಕೋಡಿ ಹೊಸಬೇಂಗ್ರೆ ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್ ಕುಂದರ್, ಮಣೂರು ಫ್ರೆಂಡ್ಸ್ ಮಾಜಿ ಅಧ್ಯಕ್ಷ ದಿನೇಶ್ ಆಚಾರ್, ಎಸ್ ಎಲ್ ಆರ್ ಎಂ ಘಟಕದ ಕಾರ್ಯಕರ್ತರು, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚವರ್ಣದ ಸದಸ್ಯ ರವೀಂದ್ರ ಕೋಟ ನಿರೂಪಿಸಿ ಸಂಯೋಜಿಸಿದರು.

ಕೋಡಿ ಹೊಸಬೇಂಗ್ರೆ ಬೀಚ್ ಪ್ರದೇಶದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ 233ನೇ ಪರಿಸರಸ್ನೇಹಿ ಅಭಿಯಾನದ ಅಂಗವಾಗಿ ಕೋಡಿ ಗ್ರಾಮಪಂಚಾಯತ್ ಸಹಯೋಗದೊಂದಿಗೆ ಕೋಡಿ ಬೀಚ್ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿತು. ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಕಾರ್ವಿ, ಕೋಡಿ ಗ್ರಾಮಪಂಚಾಯತ್ ಮಾಜಿ ಉಪಾಧ್ಯಕ್ಷ ಅಣ್ಣಪ್ಪ ಕುಂದರ್ ,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *