
ಸಾವಳಗಿ: ಎಲ್ಲ ವ್ಯಕ್ತಿಗಳು ಶಿಕ್ಷಣವನ್ನು ಪಡೆದಾಗ ಮಾತ್ರ ನಾವು ಜಗತ್ತಿನಲ್ಲಿ ಶಾಂತಿ ಹೊಂದಲು ಸಾಧ್ಯ ಎಂದು ಗ್ರಾಮ ಪಂಚಾಯತ ಸದಸ್ಯ ಸುಜೀತಗೌಡ ಪಾಟೀಲ ಹೇಳಿದರು.
ನಗರದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಗೆ ಶೇಠ್ ಟಾಪಿದಾಸ ಮತ್ತು ತುಳಸಿದಾಸ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇವರ ವತಿಯಿಂದ ದೇಣಿಗೆಯಾಗಿ ನೀಡಿದ ಸ್ಮಾರ್ಟ್ ಬೋರ್ಡ್ ಉದ್ಘಾಟನಾ ಕಾರ್ಯಕ್ರಮವನ್ನು ಶುಕ್ರವಾರ ನಡೆಯಿತು.
ಶೇಠ್ ಟಾಪಿದಾಸ ಮಾತನಾಡಿ ‘ದೇಶದ ಸಂವಿಧಾನವು ಮಕ್ಕಳಿಗೆ ವಿಶೇಷ ಸ್ಥಾನ ನೀಡಿದೆ. ಪ್ರತಿ ಮಗುವೂ ಶಿಕ್ಷಣ ಪಡೆಯುವುದು ಮೂಲಭೂತ ಹಕ್ಕಾಗಿದೆ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ನೀಡಲು ಮುಂದಾಗಬೇಕು. ಮಕ್ಕಳ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರು ಅರಿವನ್ನು ಪಡೆಯಬೇಕು. ಮಕ್ಕಳು ಮೊಬೈಲ್ ಸೇರಿದಂತೆ ವ್ಯಸನಿಗಳಾಗುತ್ತಿದ್ದಾರೆ. ಮಕ್ಕಳ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ಗಮನಹರಿಸಿ, ಚಿಕ್ಕವಯಸ್ಸಿನಲ್ಲೇ ನಡವಳಿಕೆಯನ್ನು ತಿದ್ದಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಾಲೆಯ ಅಧ್ಯಕ್ಷರು, ಉಪಾಧ್ಯಕ್ಷ, ಸದಸ್ಯರು, ಶಾಲೆಯ ಆಡಳಿತ ಮಂಡಳಿಯವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Leave a Reply