
ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗುಲ್ವಾಡಿಯಲ್ಲಿ ದಿನಾಂಕ 01/01/2025 ರಂದು ರೋಬೊಸಾಫ್ಟ್ ಟೆಕ್ನಾಲಜಿಯ ಸೀನಿಯರ್ ಮ್ಯಾನೇಜರ್ ರವರಾದ ಶ್ಯಾಮ್ ರಾಜೇಶ್ ಹಾಗೂ ಕಂಪನಿಯ ಸೆಕ್ರೆಟರಿಯವರಾದ ಚಕ್ರಿ ಹೆಗ್ಡೆಯವರು ಸ್ಮಾರ್ಟ್ ಕ್ಲಾಸ್” ಉದ್ಘಾಟನೆ ಮಾಡಿದರು.
ಒಂದು ಲಕ್ಷದ ಎಪ್ಪತ್ತೈದು ಸಾವಿರ ಮೌಲ್ಯದ ಸ್ಮಾರ್ಟ್ ಕ್ಲಾಸ್ ನ್ನು ಕೊಡುಗೆಯಾಗಿ ನೀಡಿದ ಶ್ಯಾಮ್ ರಾಜೇಶ್ ರ ವರಿಗೆ ಹಾಗೂ ಚಕ್ರಿ ಹೆಗ್ಡೆರವರಿಗೆ ಗೌರವ ಪೂರ್ಣವಾಗಿ ಸನ್ಮಾನ ಕಾರ್ಯಕ್ರಮವನ್ನು ಶಾಲಾ ಮುಖ್ಯಶಿಕ್ಷಕರು, ಎಸ್. ಡಿ. ಎಮ್. ಸಿ ಅಧ್ಯಕ್ಷರು ಹಾಗೂ ಎಲ್ಲಾ ಅತಿಥಿಗಳು ನೆರವೇರಿಸಿದರು. ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಏರಿಯಾ ಮ್ಯಾನೇಜರ್ ರಾದ ಶೇಖರ್ ಶೆಟ್ಟಿಯವರಿಗೂ ಕೂಡ ಸ್ಮರಿಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶೋಧನ್ ಕುಮಾರ್, ಮಂಜುನಾಥ್ ಹಾಗೂ ಉತ್ಸವ ಸಮಿತಿಯ ಅಧ್ಯಕ್ಷರಾದ ಜಿ. ಡಿ. ಪಂಜು ಪೂಜಾರಿ, ಖಜಾಂಜಿಯವರಾದ ಐ. ಕೆ. ಸಾಹೇಬ್, ಎಸ್. ಡಿ. ಎಮ್. ಸಿ. ಗೌರವಅಧ್ಯಕ್ಷರಾದ ಶ್ರೀಧರ್ ಪೂಜಾರಿ, ಅಧ್ಯಕ್ಷರಾದ ಜಿ. ಇಸ್ಮಾಯಿಲ್, ಉಪಧ್ಯಕ್ಷರಾದ ಶ್ರೀಮತಿ ಅಕ್ಷತಾ, ಗೌರವ ಶಿಕ್ಷಕಿಯರು, ಪೋಷಕರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ರಾದ ಪ್ರದೀಪ್ ಕುಮಾರ್ ಶೆಟ್ಟಿ ಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತವಿಕ ಮಾತುಗಳನ್ನಾ ಡಿದರು. ಶ್ರೀಮತಿ ಮಲ್ಲಿಕಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
Leave a Reply