
ರಾತ್ರಿಯಿಡಿ ಅಕ್ರಮವಾಗಿ ಮಣ್ಣು ಸಾಗಾಟ – ಚಿರನಿದ್ರೆಯಲ್ಲಿ ತಹಸೀಲ್ದಾರ್ & ಗಣಿ ಇಲಾಖೆಯ ಅಧಿಕಾರಿಗಳು – ತಹಸೀಲ್ದಾರ್ & ಗಣಿ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ – ಮತ್ತೊಂದು ವಯನಾಡ್ ದುರಂತದತ್ತ ಗಿಳಿಗಾರು
ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೆಣ್ಣೆ ಮಜಿರೆ ಗ್ರಾಮದ ಗಿಳಿಗಾರು ಬಳಿ ಸರ್ಕಾರಿ ಕಂದಾಯ ಭೂಮಿಯಲ್ಲಿ ಸುಮಾರು 50 ರಿಂದ 60 ಅಡಿ ಆಳದಲ್ಲಿ ಜೆಸಿಬಿ ಹಿಟಾಚಿ ಬಳಸಿ ಭೂಮಿ ಕೊರೆದು ಟಿಪ್ಪರ್ ಮೂಲಕ ತಾಳಗುಪ್ಪ ಸುತ್ತಮುತ್ತಲಿನ ನಿವೇಶನ ಲೇ ಔಟ್ ಗಳಿಗೆ ನಿರಾತಂಕವಾಗಿ ಸ್ಥಳೀಯರು ವಿರೋಧ ವ್ಯಕ್ತಪಡಿಸಿದವರಿಗೆ ಅಕ್ರಮವಾಗಿ ಮಣ್ಣು ಸಾಗಟ ಮಾಡುವವರ ಪಟಾಲಂ ರೌಡಿಸಂ ಮಾಡಿ ರಾಜಾರೋಷವಾಗಿ ರಾತ್ರಿಯಿಡಿ ಮಣ್ಣು ತುಂಬಿ ಕೊಂಡ ಟಿಪ್ಪರ್ ಗಳು ಜನರ ನಿದ್ರೆಗೆ ಭಂಗ ಮಾಡುತ್ತಿರುವುದಲ್ಲದೇ ಮತ್ತೊಂದು ವಯನಾಡ್ ದುರಂತಕ್ಕೆ ಎಡೆ ಮಾಡಿಕೊಡುತ್ತಾ ಪ್ರಕೃತಿಯ ಮೇಲೆ ದೌರ್ಜನ್ಯ ಮಾಡುತ್ತಾ ಇದ್ದಾರೆ.
ಸಾಗರ ತಹಸೀಲ್ದಾರ್ & ಗಣಿ ಇಲಾಖೆಯ ಅಧಿಕಾರಿಗಳಲ್ಲಿ ತಾಳಗುಪ್ಪ & ಗಿಳಿಗಾರು ಭಾಗದ ನಾಗರೀಕರುಗಳು ಅಕ್ರಮವಾಗಿ ಮಣ್ಣು ಸಾಗಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದರೂ ಕಣ್ಣಿದ್ದೂ ಕುರುಡರಾದ ತಹಸೀಲ್ದಾರ್ & ಗಣಿ ಇಲಾಖೆಯ ನಡೆ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ಕೇಳಿಬರುತ್ತಿದೆ.
✍🏻 ಓಂಕಾರ ಎಸ್. ವಿ. ತಾಳಗುಪ್ಪ














Leave a Reply