Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಲ್ಕೋಪ್ಪ ರಾಜ್ಯ ಅರಣ್ಯ ಸುತ್ತಮುತ್ತ ನೂರಾರು ಸಾಗುವಾನಿ ಮರ ಕಡಿತಲೇ; ಕಳ್ಳರೊಂದಿಗೆ ಕೆಲ ಅರಣ್ಯ ಅಧಿಕಾರಿಗಳು ಶಾಮೀಲು ಶಂಕೆ!!??

ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಪುರದಸರ ಗ್ರಾಮ ಸರ್ವೇ ನಂ 05 ಕಲ್ಕೋಪ್ಪ ರಾಜ್ಯ ಅರಣ್ಯ ಸುತ್ತಮುತ್ತ ನೂರಾರು ಸಾಗುವಾನಿ ಮರ ಕಡಿತಲೇ ಅರಣ್ಯ ರಕ್ಷಣಾ ಕ್ಯಾಂಪ್ ಇದ್ರು ಪ್ರಯೋಜನ ಗಗನಕುಸುಮ ಸಾಗುವಾನಿ ಸಂರಕ್ಷಣೆಗಾಗಿ ಮೀಸಲಿಟ್ಟ ಕ್ಯಾಂಪ್ ಹತ್ತಿರದಲ್ಲೇ ಮರಗಳ ಕಡಿತಲೇ ಕಳ್ಳರೊಂದಿಗೆ ಕೆಲ ಅರಣ್ಯ ಅಧಿಕಾರಿಗಳು ಶಾಮೀಲು ಶಂಕೆ.

ಶಿರಗುಪ್ಪೆ ಗ್ರಾಮ ಸರ್ವೇ ನಂ 33 ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲುಕ್ವಾರೆ ನೆಡಿತಿದ್ರು ಯಾವುದೇ ಕ್ರಮ ವಹಿಸಿಲ್ಲ ಕಲ್ಲುಕ್ವಾರೆ ಮಾಡುವರ ಬಳಿ ಲಕ್ಷ ಲಕ್ಷ ಡೀಲ್ ಕಲ್ಲುಕ್ವಾರೆ ಪ್ರದೇಶದಲ್ಲಿ ಅಕ್ರಮ ಮರ ಕಡಿತಲೇ ನೂರಾರು ಜೀವ ರಾಶಿಗಳಿಗೆ ಹಾನಿ ಗಂಭೀರ ಆರೋಪದತ್ತ ಸ್ಥಳೀಯರು*

ಬಳಸಗೋಡು ಸರ್ವೇ ನಂ 24 ರಲ್ಲೂ 20 ಎಕರೆ ಕಂದಾಯ ಅರಣ್ಯ ಪ್ರದೇಶ ಒತ್ತುವರಿ ಅಕ್ರಮ ಮರ ಕಡಿತಲೇ ಬಗ್ಗೆಯೂ ತೀವ್ರ ಆಕ್ರೋಶದತ್ತ ಪರಿಸರವಾದಿಗಳು

CCF ರವರು ಸೂಕ್ತ ತನಿಖೆಯನ್ನೂ ನೆಡೆಸಿ ತಪ್ಪಿತಸ್ಥ ಅರಣ್ಯ ಅಧಿಕಾರಿಗಳು ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಲಿ ಎಂಬುದೇ ಪ್ರಜ್ಞಾವಂತ ಪರಿಸರವಾದಿಗಳು ಸಾಮಾಜಿಕ ಜಾಲತಾಣಗಳ ನೆತ್ತಿಗ್ಗರ ಒಕ್ಕೊರಲ ದ್ವನಿಯಾಗಿದೆ.

✍🏻ಓಂಕಾರ ಎಸ್. ವಿ. ತಾಳಗುಪ್ಪ

Leave a Reply

Your email address will not be published. Required fields are marked *