
ಕುಂದಾಪುರ ತಾಲೂಕು ಕೋಟೇಶ್ವರದ ಮೂಡು ಗೋಪಾಡಿ ಯಲ್ಲಿರುವ ಐ. ಬಿ. ಟಿ ಗಾರ್ಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಗಳು, ಶಿಕ್ಷಣ ,ಮತ್ತು ಸಾಮಾಜಿಕ ನಾಯಕತ್ವದಲ್ಲಿ ತನ್ನನ್ನು ತೊಡಗಿಸಿ ಕೊಂಡಿರುವ ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಗಳ ಸಮನ್ವಯ ಕೇಂದ್ರ ವೇದಿಕೆಯ ರಾಜ್ಯ ನಿರ್ದೇಶಕರಾಗಿ ಆಯ್ಕೆಯಾದ ಅಬ್ದುಲ್ ಸಲಾಂ ಚಿತ್ತೂರು ರವರನ್ನು ಐ. ಬಿ.ಟಿ ಗಾರ್ಡನ್ ಚೇರ್ಮನ್, ಸುನ್ನಿ ಸಂಘಟನೆಗಳ ಜೀವನಾಡಿ , ಸೈಯದ್ ಜಅಫರ್ ಅಸ್ಸಖಾಫ್ ತಂಘಲ್ ರವರು ,,ನಮ್ಮೂರ ಪೊನ್ನು ,,
ಬಿರುದು ನೀಡಿ ಗೌರವಿಸಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಮೂಡು ಗೋಪಾಡಿ ಜುಮ್ಮಾ ಮಸೀದಿಯ ಖತೀಬರಾದ ಇಖ್ ರಮುಲ್ಲಾ ಸಖಾಫಿ, ಹಾಗೂ ಸೈಯದ್ ಶಾಮೀರ್ ಹುಸೈನ್ ಸಖಾಫಿ , ಇನ್ನಿತರ ಧಾರ್ಮಿಕ ಪಂಡಿತರು ಸಮುದಾಯದ ನಾಯಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ಉಪನ್ಯಾಸಕರಾದ ಅಮೀರ್ ಅಹ್ಸನಿ, ಕಾರ್ಯಕ್ರಮದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.














Leave a Reply