
ಕೋಟ: ಕೋಟ ಗ್ರಾಮಪಂಚಾಯತ್ ನ 2024-25ನೇ ಸಾಲಿನ ವಿಶೇಷಚೇತನರಿಗೆ ಕಾಯ್ದಿರಿಸಿದ ಅನುದಾನದ ಸಹಾಯದ ವಿತರಣೆಯ ವಿಶೇಷ ಸಭೆ ಮಾಹಿತಿ ಕಾರ್ಯಕ್ರಮ ಮಂಗಳವಾರ ಪಂಚಾಯತ್ ಸಭಾಂಗಣದಲ್ಲಿ ಜರಗಿತು.
ಸಭೆಯಲ್ಲಿ ಜಿಲ್ಲಾ ಮನೋತಜ್ಞರಾದ ವೈಶಾಕ್‌ನವರು ವಿಶೇಷಚೇತನರಿಗೆ ಸಂಬAಧಿಸಿದ ಮಾನಸಿಕ ಹಾಗೂ ದೈಹಿಕ ವಿಷಯಗಳು ಸೇರಿದಂತೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಲಕ್ಷಿ÷್ಮÃ ತಮ್ಮ ಇಲಾಖೆಯಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಮಾತನಾಡಿ ಪಂಚಾಯತ್ ನಲ್ಲಿ ವಿಶೇಷ ಚೇತನರಿಗೆ ಶೇ.ಐದರ ಅನುದಾನದಲ್ಲಿ 1,20,000 ರೂ ಆರ್ಥಿಕ ಸಹಾಯಧನದ 43ಫಲಾನುಭವಿಗಳಿಗೆ ಚಕ್ ನೀಡುವ ಬಗ್ಗೆ ಮಾಹಿತಿ ನೀಡಿ ಒಟ್ಟು 92,000ರೂ ಗಳ ಪ್ರಥಮ ಹಂತದ ನೆರವನ್ನು ನೀಡುವ ಮಾಹಿತಿ ತಿಳಿಸಿದರು.
ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿ ಫಲಾನುಭವಿಗಳಿಗೆ ಚಕ್ ವಿತರಿಸಿದರು.
ಸಭೆಯಲ್ಲಿ ಪಂಚಾಯತ್ ಸದಸ್ಯರಾದ ಶಿವರಾಮ ಶೆಟ್ಟಿ, ಜಯಂತಿ ಪೂಜಾರಿ, ಗುಲಾಬಿ ಪೂಜಾರಿ, ವಿಶೇಷಚೇತನರ ಸಂಯೋಜಕ ಅಬುಬಕ್ಕರ್, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚಾಯತ್ ಕಾರ್ಯದರ್ಶಿ ಶೇಖರ್ ಮರವಂತೆ ಸ್ವಾಗತಿಸಿ ನಿರೂಪಿಸಿದರು.
ಕೋಟ ಗ್ರಾಮಪಂಚಾಯತ್ ನ 2024-25ನೇ ಸಾಲಿನ ವಿಶೇಷಚೇತನರಿಗೆ ಕಾಯ್ದಿರಿಸಿದ ಅನುದಾನದ ಸಹಾಯದ ಚಕ್‌ಅನ್ನುಪಂ ಚಾಯತ್ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿ ಫಲಾನುಭವಿಗಳಿಗೆ ವಿತರಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಜಿಲ್ಲಾ ಮನೋತಜ್ಞರಾದ ವೈಶಾಕ್ ಮತ್ತಿತರರು ಇದ್ದರು.
ಕೋಟ.ಜ.7 ವಿಶೇಷಚೇತನ














Leave a Reply