
ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಂದ ಡೂಪ್ಲಿಕೇಟ್ ರಶೀದಿಯೊಂದಿಗೆ ದೌರ್ಜನ್ಯ ನೆಡೆಸುತ್ತಾ, ಅಸಭ್ಯ ವರ್ತನೆಯೊಂದಿಗೆ ವಾಹನ ನಿಲುಗಡೆ ಶುಲ್ಕ ವಸೂಲಾತಿಯಿಂದ ಪ್ರವಾಸಿಗಳ ಭಕ್ತಾಡಿಗಳಿಂದ ಹಗಲು ದರೋಡೆಯತ್ತ ತುಮರಿ ಗ್ರಾಮ ಪಂಚಾಯಿತಿ – ಡೂಪ್ಲಿಕೇಟ್ ರಶೀದಿಯೊಂದಿಗೆ ರೆಡ್ ಹ್ಯಾಂಡ್ ಸಿಕ್ಕರೂ ಯಾವುದೇ ಕ್ರಮಕ್ಕೂ ಮುಂದಾಗದ ಶಿವಮೊಗ್ಗ ಜಿಲ್ಲಾಪಂಚಾಯತ್ – ಸಿಗಂದೂರು ದೇವಿಯ ದರ್ಶನಕ್ಕೆ ಆಗಮಿಸುತ್ತಿದ್ದ ಭಕ್ತರಿಂದ ಅಕ್ರಮವಾಗಿ ವಾಹನ ನಿಲುಗಡೆ ಕುಂಟು ನೆಪದಲ್ಲಿ ಹಗಲು ದರೋಡೆ ಮಾಡುತ್ತಿದ್ದ ತುಮರಿ ಗ್ರಾಮ ಪಂಚಾಯಿತಿಯ ಅಂದಿನ ಆಡಳಿತ ಮಂಡಳಿಗೆ ಕ್ಷಮಿಸುತ್ತಾಳಾ ಆ ತಾಯಿ ಜಗದಂಬೆ ಸಿಗಂದೂರೇಶ್ವರಿ ” ಕ್ಷಮಯಾ ಧರಿತ್ರಿ “.
ತುಮರಿ :-* ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ನಾಡಿನ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸುತ್ತಿರುವುದು ಸರ್ವೇ ಸಾಮಾನ್ಯ ಸಂಗತಿಯಾಗಿದೆ.
ಈ ಹಿಂದೇ ತುಮರಿ ಗ್ರಾಮ ಪಂಚಾಯಿತಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರ್ಯದರ್ಶಿ ಇಮ್ತಿಯಾಜ್ ಭಾಷಾ (ಅಂದು PDO ಆಗಿ ಕರ್ತವ್ಯ ನಿರ್ವಹಣೆ ) ಹಾಗೂ ಗ್ರಾಮ ಪಂಚಾಯಿತಿಯ ಕೆಲ ದಿನಗೂಲಿ ನೌಕರರು ಸಿಗಂದೂರು ದೇವಾಲಯಕ್ಕೆ ಆಗಮಿಸುತ್ತಿದ್ದ ಭಕ್ತಾದಿಗಳು ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಲಾಂಚ್ ಹತ್ತುವ ಇಳಿಯುವ ಪ್ರದೇಶದಲ್ಲಿ ವಾಹನ ನಿಲುಗಡೆ ಕುಂಟು ನೆಪದಲ್ಲಿ ಡೂಪ್ಲಿಕೇಟ್ ರಶೀಧಿ ಬಳಸಿ ಪ್ರವಾಸಿಗರಿಂದ, ಭಕ್ತಾಧಿಗಳಿಂದ ಅಕ್ರಮವಾಗಿ ಶುಲ್ಕ ವಸೂಲಾತಿ ಮಾಡಿ ಸರ್ಕಾರದ ಭೋಕ್ಕಸಕ್ಕೆ ತೀವ್ರ ನಷ್ಟ ಉಂಟು ಮಾಡಿರುವ ಪ್ರಕರಣದಲ್ಲಿ ನೇರ ಭಾಗಿರುವ ಸಾಧ್ಯತೆಯೇ ಹೆಚ್ಚಾಗಿರುವ ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ, ದಿನಪತ್ರಿಕೆಯಲ್ಲಿ ಹರಿದಾಡುತ್ತಿರುವ ಹಿನ್ನಲೆ, ಈ ಪ್ರಕರಣ ನೆಡೆದು ಹಲವು ವರ್ಷಗಳೇ ಉರುಳುತ್ತಾ ಬಂದರೂ ತನಿಖೆ ನೆಡೆಸಿ ತಪ್ಪಿತಸ್ಥರ ವಿರುದ್ಧ ಇದುವರೆಗೂ ಯಾವುದೇ ಸೂಕ್ತ ಶಿಸ್ತು ಕ್ರಮಕ್ಕೆ ಮುಂದಾಗದ ಶಿವಮೊಗ್ಗ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಗಳ ನಡೆಗೆ ಸಿಗಂದೂರು ಭಕ್ತಾದಿಗಳು, ಪ್ರವಾಸಿಗರು, ತುಮರಿ ಭಾಗದ ಪ್ರಜ್ಞಾವಂತರು ಕೆರಳಿ ಕೆಂಡವಾಗಿರುವುದು ಅಷ್ಟೇ ನಗ್ನಸತ್ಯ.
ಪ್ರಾಮಾಣಿಕ, ಧಕ್ಷ, ಜನಸ್ನೇಹಿ, ಜನಪರ, ಆಡಳಿತದಲ್ಲಿ ಪಾರದರ್ಶಕ ಆಡಳಿತಗಾರ ಎಂದೇ ಖ್ಯಾತರಾದ ಶಿವಮೊಗ್ಗ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೇಮಂತ್ (ಐಎಎಸ್ ) ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಡೆದಿದೆ ಎನ್ನಲಾದ ಡೂಪ್ಲಿಕೇಟ್ ರಶೀದಿ ಬಳಸಿ ಶುಲ್ಕ ವಸೂಲಾತಿ ಮಾಡಿದ ಪ್ರಕರಣವನ್ನೂ ತನಿಖೆ ನೆಡೆಸಿ ತಪ್ಪಿತಸ್ಥ ಭ್ರಷ್ಟರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವಂತೆ ಪ್ರಜ್ಞಾವಂತರ ಒಕ್ಕೊರಲ ಧ್ವನಿಯಾಗಿರುವುದು ಕೇಳಿ ಬರುತ್ತಿದೆ
✍🏻ಓಂಕಾರ ಎಸ್. ವಿ. ತಾಳಗುಪ್ಪ*














Leave a Reply