
ಕೋಟ: ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ- ಐರೋಡಿ ಇವರು ಕಳೆದ ಇಪ್ಪತ್ತು ವರ್ಷಗಳಿಂದ ಹಮ್ಮಿಕೊಂಡು ಬಂದಿರುವ ಸಂಸ್ಕೃತಿ ಸಂಭ್ರಮದಲ್ಲಿ ಯಕ್ಷವರ್ಷ ತಿಂಗಳ ಸರಣಿ ಕಾರ್ಯಕ್ರಮದಂತೆ ಈ ತಿಂಗಳ ಕಾರ್ಯಕ್ರಮವುÀ ಜ.10 ರಂದು ಸಂಜೆ 5.30ಕ್ಕೆ ನಡೆಯಲಿದೆ. ಅಂದು ಸದಾನಂದ ರಂಗಮoಟಪ ಗುಂಡ್ಮಿ- ಸಾಲಿಗ್ರಾಮದಲ್ಲಿ ಹಿರಿಯ ಕಲಾವಿದರಿಂದ ನಡುತಿಟ್ಟಿನ ಸಂಪ್ರದಾಯ ಯಕ್ಷಗಾನ ಕರ್ಣಾರ್ಜುನ ಪ್ರಸಂಗ ಪ್ರದಸಲ್ಪಡುತ್ತದೆ.
ಯು.ಎಸ್.ಎ. ಯ ಪಟ್ಲ ಪೌಂಡೇಶನ್ ಅಧ್ಯಕ್ಷರಾದ ಅರವಿಂದ ಉಪಾಧ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇತೀಚಿಗೆ ಅಗಲಿದ ಕಲಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಗುಂಡ್ಮಿ ರಾಮಕೃಷ್ಣ ಐತಾಳರ ನುಡಿ ನಮನ ಕಾರ್ಯಕ್ರಮ ನಡೆಯಲಿದ್ದು ಕುಂದಾಪುರದ ಕಲಾಕ್ಷೇತ್ರದ ಕಿಶೋರ್ ಕುಮಾರ್ ನುಡಿನಮನ ಸಲ್ಲಿಸಲಿದ್ದಾರೆ.
ಯಕ್ಷಗಾನ ಪ್ರದರ್ಶನದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್, ಸುನೀಲ್ ಭಂಡಾರಿ, ಸುಜನ್ ಹಾಲಾಡಿ, ಕೋಟ ಸುರೇಶ, ಹೆನ್ನಾಬೈಲ್ ವಿಶ್ವನಾಥ, ಸುನೀಲ್ ಹೊಲಾಡ್, ಅಶೋಕ್ ಆಚಾರ್, ಸತೀಶ್ ಹಾಲಾಡಿ ಭಾಗವಹಿಸಲಿದ್ದಾರೆಂದು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ತಿಳಿಸಿರುತ್ತಾರೆ.













Leave a Reply