
ಕೋಟ: ಕರ್ನಾಟಕ ಬ್ಯಾಂಕಿನ ಚಿತ್ರಪಾಡಿ ಸಾಲಿಗ್ರಾಮ ಶಾಖೆ 53ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಬ್ಯಾಂಕ್‌ನಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದ ಸಾಲಿಗ್ರಾಮ ದೇವಸ್ಥಾನದ ಅಧ್ಯಕ್ಷರಾದ ಡಾ. ಕೆ. ಎಸ್ ಕಾರಂತ ಬ್ಯಾಂಕಿನ ಪ್ರಗತಿಯನ್ನು ಶ್ಲಾಘಿಸಿ, ಇನಷ್ಟು ಪ್ರಗತಿ ಸಾಧಿಸಲು ನಾವೆಲ್ಲಾ ಪಣತೊಡೋಣ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ಉಡುಪಿ ಪ್ರಾದೇಶಿಕ ಕಛೇರಿಯ ಎ.ಜಿ.ಎಂ ವಾದಿರಾಜ್ ಕೆ ವಹಿಸಿದ್ದರು.
ಇದೇ ಸಮಾರಂಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕತ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಇವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಕರ್ಣಾಟಕ ಬ್ಯಾಂಕ್‌ನ ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ ಉಪಾಧ್ಯ ಅಘೋರೇಶ್ವರ ದೇಗುಲದ ಅಧ್ಯಕ್ಷ ಚಂದ್ರಶೇಖರ ಕಾರಂತ ,ಸ್ಥಳೀಯರಾದ ಚಂದ್ರಶೇಖರ ಸೋಮಯಾಜಿ,ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಡಿಜಿಎಮ್ ಆನಂದರಾಮ ಅಡಿಗ, ಬೈಕಾಡಿ ಶ್ರೀನಿವಾಸ ರಾವ್, ಉಪಸ್ಥಿತರಿದ್ದರು.
ಬ್ಯಾಂಕಿನ ವ್ಯವಸ್ಥಾಪಕರಾದ ಅವಿನಾಶ್ ಸ್ವಾಗತಿಸಿದರು. ಸಿಬ್ಬಂದಿಗಳಾದ ರಶ್ಮಿ ವಂದಿಸಿದರು. ವಿನಯಕಾಂಚನ್ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಬ್ಯಾಂಕಿನ ಚಿತ್ರಪಾಡಿ ಸಾಲಿಗ್ರಾಮ ಶಾಖೆ 53ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕತ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಇವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.














Leave a Reply