Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಯಕ್ಷಾಂಗಣ ಟ್ರಸ್ಟ್ ವತಿಯಿಂದ ಯಕ್ಷ ಚಿಂತಕ ಸುಜಯೀಂದ್ರ ಹಂದೆ ಹೆಚ್. ವಿರಚಿತ ರಾಜಾ ದ್ರುಪದ ಪ್ರಸಂಗ ಪ್ರದರ್ಶನ

ಕೋಟ: ನೂರಾರು ವರ್ಷಗಳ ಇತಿಹಾಸದ ಯಕ್ಷಗಾನ ಕಲೆಗೆ ಕಲಾವಿದರ ಕೊಡುಗೆ ಅಪಾರ. ಅಂತೆಯೇ ಡಾ. ಕಾರಂತರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಯೋಗ್ಯವಾದ ಯಕ್ಷಗಾನ ಬಯಲಾಟ ಪ್ರಕಟಿಸಿದ ಬಳಿಕ ಹೆಚ್ಚಿನ ಜನಸ್ಪಂದನೆ ದೊರೆಯಿತು. ಆಟ ಬಯಲಾಟ ದಶಾವತಾರ ಆಟ ಯಕ್ಷಗಾನ ಹೆಸರಿನಲ್ಲಿ ಪರಿಷ್ಕರಣೆಗೊಂಡು ವಿದ್ಯಾವಂತರು ವಿದ್ವಜ್ಜನರು ಹೆಚ್ಚು ಹೆಚ್ಚು ಕಲೆಯ ಕುರಿತು ಆಕರ್ಷಿತರಾದರು ಮತ್ತು ಕಲಾ ಕ್ಷೇತ್ರದಲ್ಲಿ ಹೆಚ್ಚಿನ ಕೃಷಿ ಮಾಡಿದರು.

ಹಾಗಾಗಿ ಯಕ್ಷಗಾನಕ್ಕೆ ವಿಶ್ವ ಮಾನ್ಯತೆ ದೊರೆಯಿತು. ಇಂದು ಶಾಲಾ ಶಿಕ್ಷಣದ ಜೊತೆಗೆ ಯಕ್ಷಗಾನ ಶಿಕ್ಷಣ ನೀಡುತ್ತಿರುವುದು ಸಂತೋಷದಾಯಕ ಬೆಳವಣಿಗೆ. ಎಲ್ಲರೂ ಕಲಾವಿದರಾಗದಿದ್ದರೂ ಉತ್ತಮ ಪ್ರೇಕ್ಷಕರಾಗಿ ರೂಪುಗೊಂಡರೆ ಕಲೆಗೆ ಅದೇ ಪೂರಕ ಎಂದು ಬೆಂಗಳೂರಿನ ನಿವೃತ್ತ ಬ್ಯಾಂಕ್ ಅಧಿಕಾರಿ ಯಕ್ಷ ಚಿಂತಕ ಡಾ. ಆನಂದ ರಾಮ ಉಪಾಧ್ಯ ನುಡಿದರು.

ಸಾಲಿಗ್ರಾಮ ಗುರುನರಸಿಂಹ ದೇವಳದ ವಾರ್ಷಿಕ ರಥೋತ್ಸವ ದೇವರ ಅವಭೃತೋತ್ಸವ ಸಂದರ್ಭದಲ್ಲಿ ಕೋಟ ಹಂದೆ ಶ್ರೀ ಮಹಾವಿಷ್ಣು ಮಹಾಗಣಪತಿ ದೇವಾಲಯದ ನಾಗಪ್ಪಯ್ಯ ಹಂದೆ ರಂಗಮAಟಪದಲ್ಲಿ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವತಿಯಿಂದ ಯಕ್ಷ ಚಿಂತಕ ಸುಜಯೀಂದ್ರ ಹಂದೆ ಹೆಚ್. ವಿರಚಿತ “ರಾಜಾ ದ್ರುಪದ” ಪ್ರಸಂಗ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಚೆಂಡೆ ಬಾರಿಸುವ ಮೂಲಕ ಸಾಹಿತಿ, ಕಲಾಪೋಷಕರಾದ ಹೆಚ್. ಜನಾರ್ದನ ಹಂದೆ ಯವರು ನೆರವೇರಿಸಿ, ಮಾತನಾಡಿ ಕಲಾಸೇವೆ ಮಾಡುವ ಕಲಾವಿದರಿಗೆ ಸಂಘಟಕರಿಗೆ ಪ್ರೋತ್ಸಾಹ ನೀಡಬೇಕಾದುದು ಕಲಾಭಿಮಾನಿಗಳ ಮತ್ತ್ತು ದಾನಿಗಳ ಕರ್ತವ್ಯ. ಆಗ ಮಾತ್ರಾ ನಮ್ಮ ಶ್ರೀಮಂತ ಸಂಸ್ಕ್ರತಿಯ ಉಳಿವು ಸಾಧ್ಯ. ರಥೋತ್ಸವದ ಅವಭೃತದ ಸಂದರ್ಭದಲ್ಲಿ ಯಕ್ಷಗಾನ ಆಯೋಜಿಸಿರುವುದರಿಂದ ಹಂದೆ ದೇವಳದ ಆಡಳಿತ ಮಂಡಳಿ ಮತ್ತು ಸಂಘಟಕರು ಅಭಿನಂದನಾರ್ಹರು…. ಅಂದು ನಮ್ಮೊಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಕಲಾ ಪೋಷಕರಾದ ಕಾರ್ಕಡ ತಾರಾನಾಥ ಹೊಳ್ಳ ಮತ್ತು ಹಂದೆ ಶ್ರೀ ಮಹಾವಿಷ್ಣು ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರಾದ ಅಮರ ಹಂದೆಯವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕ ರಾಘವೇಂದ್ರ ತುಂಗ ಕೆ. ರವರು ನಿರ್ವಹಿಸಿದರು.

ನಂತರ ಸುಜಯೀಂದ್ರ ಹಂದೆ ಹೆಚ್ ವಿರಚಿತ ರಾಜ ದ್ರುಪದ ಯಕ್ಷಗಾನ ಪ್ರದರ್ಶನ ನಡೆಯಿತು. ಕಲಾವಿದರಾಗಿ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ, ಸುದೀಪ ಉರಾಳ, ಸುಜಯೀಂದ್ರ ಹಂದೆ, ತಮ್ಮಣ್ಣ ಗಾಂವ್ಕರ್, ಸಂಜೀವ ಹೆನ್ನಾಬೈಲು, ಡಾ. ಶಿವಕುಮಾರ್ ಅಲಗೋಡು, ಆದಿತ್ಯ ಹೆಗಡೆ, ನರಸಿಂಹ ತುಂಗ, ಶ್ರೀರಾಮ್ ಹೆಬ್ಬಾರ್, ಶಶಾಂಕ ಉರಾಳ, ರಾಜು ಪೂಜಾರಿ ಯವರು ಭಾಗವಹಿಸಿದರು. ಕಾರ್ಯಕ್ರಮದ ಸಂಯೋಜನೆಯನ್ನು ಕೋಟ ಸುದರ್ಶನ ಉರಾಳ ಮಾಡಿದರು.

ಸಾಲಿಗ್ರಾಮ ಗುರುನರಸಿಂಹ ದೇವಳದ ವಾರ್ಷಿಕ ರಥೋತ್ಸವ ದೇವರ ಅವಭೃತೋತ್ಸವ ಸಂದರ್ಭದಲ್ಲಿ ಕೋಟ ಹಂದೆ ಶ್ರೀ ಮಹಾವಿಷ್ಣು ಮಹಾಗಣಪತಿ ದೇವಾಲಯದ ನಾಗಪ್ಪಯ್ಯ ಹಂದೆ ರಂಗಮAಟಪದಲ್ಲಿ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ವತಿಯಿಂದ ಯಕ್ಷ ಚಿಂತಕ ಸುಜಯೀಂದ್ರ ಹಂದೆ ಹೆಚ್. ವಿರಚಿತ “ರಾಜಾ ದ್ರುಪದ” ಪ್ರಸಂಗ ಪ್ರದರ್ಶನವನ್ನು ಚೆಂಡೆ ಬಾರಿಸುವ ಮೂಲಕ ಸಾಹಿತಿ, ಕಲಾಪೋಷಕರಾದ ಹೆಚ್. ಜನಾರ್ದನ ಹಂದೆ ಯವರು ನೆರವೇರಿಸಿದರು.

Leave a Reply

Your email address will not be published. Required fields are marked *