
ಕೋಟ: ಸೇವಾ ಸಂಗಮ ವಿದ್ಯಾಕೇಂದ್ರ, ವಿದ್ಯಾ ಗಿರಿ ತೆಕ್ಕಟ್ಟೆ ಇಲ್ಲಿನ ನವೀಕೃತ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಮತ್ತು ಶೌಚಾಲಯ ಉದ್ಘಾಟನಾ ಕಾರ್ಯಕ್ರಮ ಶನಿವಾರ ಜರಗಿತು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತು ತೆಕ್ಕಟ್ಟೆ ಗ್ರಾ.ಪಂ ಅಧ್ಯಕ್ಷೆ ಶೋಭನಾ ಶೆಟ್ಟಿ ಮತ್ತು ಪಟ್ಟಾಭಿರಾಮಚಂದ್ರ ದೇಗುಲ ಕೋಟೇಶ್ವರ ಇದರ ಧರ್ಮದರ್ಶಿ ದಿನೇಶ್ ಕಾಮತ್ ವಿವಿಧ ಸ್ತರದ ಲ್ಯಾಬ್‌ಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ವಿದ್ಯಾರ್ಥಿಗಳನ್ನುದ್ದೇಶಿಸಿಮಾತನಾಡಿ ಈ ಶಾಲೆಯಲ್ಲಿ ಗುರುಕುಲ ಮಾದರಿ ಶಿಕ್ಷಣ ಪದ್ಧತಿ ಹಾಗೂ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿದೆ. ಇಂತಹ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳು ದೇಶದ ಮುಂದಿನ ಉತ್ತಮ ನಾಗರಿಕರಾಗಲು ಸಾಧ್ಯ ಹಾಗೂ ಈ ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ನಾನು ಸಹ ಕೈಜೋಡಿಸುತ್ತೇನೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ರಾಷ್ಟಿçಯ ಸ್ವಯಂಸೇವಕ ಸಮಿತಿಯ ಕುಟುಂಬ ಪ್ರಬೋಧಿನಿ ಮಂಗಳೂರು ವಿಭಾಗ ಪ್ರಮುಖ ಗುರುರಾಜ್‌ರಾವ್. ಶಾಲಾ ಅಧ್ಯಕ್ಷ ಸುರೇಶ್ ಬೆಟ್ಟಿನ್, ಕಾರ್ಯದರ್ಶಿ ಕಮಲಾಕ್ಷ ಪೈ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಸಂಧ್ಯಾ ಭಟ್ ಉಪಸಿತರಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಪೋಷಕರು ಶಿಕ್ಷಕರು ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸೇವಾ ಸಂಗಮ ವಿದ್ಯಾಕೇಂದ್ರ, ವಿದ್ಯಾ ಗಿರಿ ತೆಕ್ಕಟ್ಟೆನವೀಕೃತ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಮತ್ತು ಶೌಚಾಲಯನ್ನು ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು.














Leave a Reply