
ಕೋಟ: ಸೇವಾ ಸಂಗಮ ಶಿಶು ಮಂದಿರ ಸಂಸ್ಕಾರ ಭರಿತ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ ಆದ್ದರಿಂದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಶಿಶುಮಂದಿರಕ್ಕೆ ಮಿಸಲಿಡಿ ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್ ಹೇಳಿದರು.
ಕೋಟದ ಸೇವಾಸಂಗಮ ಶಿಶುಮಂದಿರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳನ್ನು ಪ್ರಾಥಮಿಕ ಹಂತದಲ್ಲೆ ಸುಸಂಸ್ಕöತರನ್ನಾಗಿಸಲು ಪೋಷಕರ ಪಾತ್ರ ಗಣನೀಯವಾದದ್ದು ಈ ನಿಟ್ಟಿನಲ್ಲಿ ಗುರುಗುಲದ ಮಾದರಿಯಲ್ಲಿ ಸೇವಾ ಸಂಗಮ ಕಾರ್ಯನಿರ್ವಹಿಸುತ್ತಿರುವುದಿ ಶ್ಲಾಘನೀಯ, ಅಲ್ಲದೆ ಇಂದಿನ ದಿನಗಳಲ್ಲಿ ಮೊಬೈಲ್ ನಿಂದ ಮಕ್ಕಳನ್ನು ದೂರ ಇರಿಸಲು ಪೋಷಕರಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೇವಾ ಸಂಗಮ ಶಿಶು ಮಂದಿರದ ಅಧ್ಯಕ್ಷೆ ನಾಗಲಕ್ಷೀ ಹೆಗ್ಡೆ ವಹಿಸಿದ್ದರು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಶುಭಾ ಶಂಸನೆಗೈದರು. ಮುಖ್ಯ ಭಾಷಣಕರಾಗಿ ಸೇವಾ ಸಂಗಮದ ವಿಶ್ವಸ್ಥ ಮಂಡಳಿಯ ಪ್ರಮುಖರಾದ ಕಲ್ಪನಾ ಭಾಸ್ಕರ್ ಪಾಲ್ಗೊಂಡರು. ಪುಟಾಣಿಗಳಿoದ ದೀಪ ನೃತ್ಯ,ಸಂಸ್ಕçತ ಶ್ಲೋಕ ಗೀತೆಗಳ ಪಠಣ ನಡೆಯಿತು.
ಈ ಸಂದರ್ಭದಲ್ಲಿ ಕೋಟ ಶಿಶು ಮಂದಿರದ ಉಪಾಧ್ಯಕ್ಷೆ ಗೀತಾ ಎ ಕುಂದರ್,ಪ್ರಮುಖರಾದ ವಸುಧಾ ಪ್ರಭು, ಸುಶೀಲಸೋಮಶೇಖರ್, ಚಂದ್ರಕಾ ಭಟ್ ಮತ್ತಿತರರು ಉಪಸ್ಥಿತರಿದ್ದರು. ವ್ಯವಸ್ಥಾಪಕಿ ಭಾಗ್ಯ ವಾದಿರಾಜ್ ಸ್ವಾಗತಿಸಿ ಪ್ರಾಸ್ತಾವನೆಗೈದರು.ಕಾರ್ಯಕ್ರಮವನ್ನು ಭಾಗೇಶ್ವರಿ ಮಯ್ಯ ನಿರೂಪಿಸಿದರು.ಕಾರ್ಯದರ್ಶಿ ಸುಷ್ಮಾ ದಯಾನಂದ್ ವಂದಿಸಿದರು. ಕಾರ್ಯಕ್ರಮದ ನಂತರ ಶಶಿ ಮಂದಿರದ ಹಾಗೂ ಬಾಲಗೋಕುಲದ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರಗಿತು.
ಕೋಟದ ಸೇವಾಸಂಗಮ ಶಿಶುಮಂದಿರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್ ಉದ್ಘಾಟಿಸಿದರು. ಸೇವಾ ಸಂಗಮ ಶಿಶು ಮಂದಿರದ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ, ಸೇವಾ ಸಂಗಮದ ವಿಶ್ವಸ್ಥ ಮಂಡಳಿಯ ಪ್ರಮುಖರಾದ ಕಲ್ಪನಾ ಭಾಸ್ಕರ್, ಕೋಟ ಶಿಶು ಮಂದಿರದ ಉಪಾಧ್ಯಕ್ಷೆ ಗೀತಾ ಎ ಕುಂದರ್ ಮತ್ತಿತರರು ಇದ್ದರು.














Leave a Reply