Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಧರ್ಮಸ್ಥಳ ಮೇಳದ ವ್ಯವಸ್ಥಾಪಕರಿಗೆ ಮತ್ತು ಯಜಮಾನರಿಗೆ ಸನ್ಮಾನ

ಕೋಟ : ಕಳೆದ ಸಂವತ್ಸರದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದವರ ಹರಕೆ ಬಯಲಾಟದ ಸವಿನೆನಪಿಗಾಗಿ ಕೋಟೇಶ್ವರ ಕುದುರೆಕೆರೆಬೆಟ್ಟಿನ ನವಗ್ರಹ ಜ್ಯೋತಿಷ್ಯಾಲಯದ ಸಂಕಲ್ಪ ಮ್ಯೂಸಿಯಂ ಎದುರುಗಡೆ ನಡೆದ ಹಟ್ಟಿಯಂಗಡಿ ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆದ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಧರ್ಮಸ್ಥಳ ಮೇಳದ ವ್ಯವಸ್ಥಾಪಕರಾದ ಬಿ.ಎನ್.ಗಿರೀಶ್ ಹೆಗ್ಡೆ, ಪುಷ್ಪರಾಜ್ ಶೆಟ್ಟಿ ಮತ್ತು ಹಟ್ಟಿಯಂಗಡಿ ಮೇಳ ಹಾಗೂ ಮೆಕ್ಕೆಕಟ್ಟು ಮೇಳದ ಯಜಮಾನರಾದ ವಕ್ವಾಡಿ ರಂಜೀತ್ ಕುಮಾರ್ ಶೆಟ್ಟಿಯವರನ್ನು ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿಯಾದ ಬಾಲಚಂದ್ರಭಟ್‌ರವರು ಸನ್ಮಾನಿಸಿ ಆಶೀರ್ವಚನಗೈದರು.

ಶ್ರೀಮತಿ ಕಾವ್ಯಶ್ರೀ ಮತ್ತು ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್‌ರವರ ಸೇವಾ ಬಯಲಾಟದ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಕೋಟಿಲಿಂಗೇಶ್ವರ ದೇವಸ್ಥಾನದ ಮಾಜಿ ಧರ್ಮದರ್ಶಿ ಗೋಪಾಲಕೃಷ್ಣ ಶೆಟ್ಟಿಯವರು ವಹಿಸಿದ್ದರು. ಸಮಾರಂಭಕ್ಕೆ  ಮುಖ್ಯ ಅತಿಥಿಗಳಾಗಿ ಉದ್ಯಮಿ ಸುಭಾಶ್ ಶೆಟ್ಟಿ, ಹಂಗಳೂರು ಶನೀಶ್ವರ ದೇವಸ್ಥಾನದ ಧರ್ಮದರ್ಶಿ ಅಣ್ಣಯ್ಯ ಪೂಜಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಚಂದ್ರಶೇಖರ್ ಪದ್ಮಶಾಲಿ ಕಾರ್ಯಕ್ರಮ ನಿರೂಪಸಿದರೆ, ಬಸವರಾಜ್ ಶೆಟ್ಟಿಗಾರ್ ಸ್ವಾಗತಿಸಿದರು. ಲೋಕೇಶ್ ಕುಮಾರ್ ಅತಿಥಿಗಳನ್ನು ಗೌರವಿಸಿದರೆ, ಗುರುರಾಜ್ ಶಾಂತಾಪುರ ವಂದಿಸಿದರು. ನಂತರ  ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್ ವಿರಚಿತ ಹಟ್ಟಿಯಂಗಡಿ ಕ್ಷೇತ್ರ ಮಹಾತ್ಮೆ ಮತ್ತು ಕಪಿಲೇಶ್ವರ ಮಹಾತ್ಮೆ ಅವಳಿ ಪ್ರಸಂಗಗಳು ಅದ್ಧೂರಿಯಾಗಿ ಪ್ರದರ್ಶನಗೊಂಡಿತು.

ಕೋಟೇಶ್ವರ ಕುದುರೆಕೆರೆಬೆಟ್ಟಿನ ನವಗ್ರಹ ಜ್ಯೋತಿಷ್ಯಾಲಯದ ಸಂಕಲ್ಪ ಮ್ಯೂಸಿಯಂ ಎದುರುಗಡೆ ನಡೆದ ಹಟ್ಟಿಯಂಗಡಿ ಮೇಳ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆದ ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲಿ ಧರ್ಮಸ್ಥಳ ಮೇಳದ ವ್ಯವಸ್ಥಾಪಕರಾದ ಬಿ.ಎನ್.ಗಿರೀಶ್ ಹೆಗ್ಡೆ, ಪುಷ್ಪರಾಜ್ ಶೆಟ್ಟಿ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *