Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನಾಳೆ ಕರಾವಳಿಯ ಕಡಲ ಕಿನಾರೆಯಲ್ಲಿ‌‌ ಮೊಳಗಲಿದೆ ವಿಷ್ಣು ಸಹಸ್ರನಾಮ.
ಕೋಟದ ಮಣೂರಿನಲ್ಲಿ ವಿವಿಧ ಸಂಘಟನೆಗಳಿಂದ ಆಯೋಜನೆ

ಕೋಟ: ಇಲ್ಲಿನ ಕೋಟ ಮಣೂರು ಪಡುಕರೆ ಸಮುದ್ರ ತಟದಲ್ಲಿ ಕೋಟದ ಪಂಚವರ್ಣ ಸಂಘಟನೆ ,ಸ್ನೇಹಕೂಟ ಮಣೂರು,ಕೇಶವ ಶಿಶು ಮಂದಿರ. ಮೂಡುಗಿಳಿಯಾರು, ಹಂದಟ್ಟು ಮಹಿಳಾ ಬಳಗ ಜಂಟಿ ಆಶ್ರಯದಲ್ಲಿ  ಲೋಕಕಲ್ಯಾಣಾರ್ಥವಾಗಿ ವಿಷ್ಣು ಸಹಸ್ರನಾಮ ಮೊಳಗಲಿದೆ.

ಪಾವಂಜೆ ಶ್ರೀ ಸುಬ್ರಹ್ಮಣ್ಯ ದೇಗುಲ ಕರೆ ನೀಡಿದ ಪ್ರಸ್ತುತ ದಿನಗಳಲ್ಲಿ ಪ್ರಾಕೃತಿಕ ಅಸಮತೋಲನ ನಿವಾರಿಸುವ ಅಥವಾ ಸುನಾಮಿ ಸೇರಿದಂತೆ ವಿವಿಧ ತರಹದ ಪ್ರಕೃತಿ ಹಾನಿ ತಪ್ಪಿಸುವ ಉದ್ದೇಶದಿಂದ ಲೋಕಕಲ್ಯಾಣಾರ್ಥವಾಗಿ ಕಾಸರಗೋಡಿನ ಕಣ್ಣೂರಿನಿಂದ ಬೈಂದೂರಿನ ಶಿರೂರು ಕಡಲ ಕಿನಾರೆಯವರೆಗೆ ವಿವಿಧ ಭಾಗಗಳ ನೂರ ಎಂಟು ವ್ಯಾಪ್ತಿಯಲ್ಲಿ‌ ನೂರ ಎಂಟು  ಜಮಸಮುದಾಯದಿಂದ ವಿಷ್ಣು ಸಹಸ್ರನಾಮ ಪಠಣ ನಡೆಯಲಿದೆ ಸಂಜೆ ಸುಮಾರು 4.ಗ ಆರಂಭಗೊಳ್ಳುವ ಈ ಪಠಣ 6.ಗ ವರೆಗೆ ನಡೆಯಲಿದೆ ಎಂದು ಜಿಲ್ಲಾ ಸಂಯೋಜಕಿ ರಶ್ಮಿರಾಜ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *