Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹೀಗೊಂದು ಅಪರೂಪದ ಸರ್ಕಾರಿ ಶಾಲೆ

ಸಾಗರ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕುದುರೂರು ಗ್ರಾಮ ಪಂಚಾಯಿತಿಯ ಅಂಬಾರ ಗುಡ್ಡದ ತಪ್ಪಲಿನಲ್ಲಿರುವ ತುದಿಯ ಪುಟ್ಟ ಶಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಳಸಸಿ. ಈ ಶಾಲೆ 1958 ರಲ್ಲಿ ಆರಂಭವಾಗಿ ಸಾವಿರಾರು ಮಕ್ಕಳಿಗೆ ಜ್ಞಾನದ ದೀಪವನ್ನು ಬೆಳಗಿ ಅವರ ಬಾಳಿಗೆ ಜ್ಞಾನ ದೀವಿಗೆ ಆಗಿದೆ. ಸುಂದರ ಕಾನನದ ನಡುವೆ ಪುಟ್ಟ ಶೈಕ್ಷಣಿಕ ದೇವಾಲಯದಂತೆ ಕಂಗೊಳಿಸುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಳಸಸಿಯು ತನ್ನ ಶೈಕ್ಷಣಿಕ ಸಾಧನೆಯ ಮೂಲಕ ಸಾಗರ ತಾಲೂಕಿನ ಗಮನ ಸೆಳೆದಿರುವುದು ಹೆಮ್ಮೆ ಎನಿಸಿದೆ.

2018 -19 ನೇ ಸಾಲಿನ ನೀಡಿದು ಈವರೆಗೆ ಪ್ರತಿ ಬಾರಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಒಂದಲ್ಲಾ ಒಂದು ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುವುದು ದಾಖಲೆಯ ಸರಿ 204 25 ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ನಾಲ್ಕು ತಾಲೂಕು ಮಟ್ಟದ ಬಹುಮಾನವನ್ನು ಗಳಿಸಿ ಇಡೀ ತಾಲೂಕಿನಲ್ಲೇ ಹಿನ್ನೀರಿನ ಶಾಲೆ ಮಾಡದ ಸಾಧನೆಯನ್ನು ಈ ಶಾಲೆ ಹೆಸರು ಮಾಡಿದೆ.

ಅದರ ಜೊತೆಗೆ ಜನವರಿ 25 ಮತ್ತು 26ರಂದು ಈ ಶಾಲೆಗೆ ಐತಿಹಾಸಿಕ ಸಂಭ್ರಮದ ಕ್ಷಣ ಏಕೆಂದರೆ ಸಾಗರ ತಾಲೂಕಿನ ಯಾವುದೇ ಶಾಲೆಗೆ ಕಡಿಮೆ ಇಲ್ಲದಂತೆ ಒಂದರಿಂದ ಏಳನೇ ತರಗತಿಯನ್ನು ಹೊಂದಿದ್ದು 28 ಮಕ್ಕಳಿರುವ ಈ ಶಾಲೆ ಶೈಕ್ಷಣಿಕವಾಗಿ ತನ್ನ ಹಿರಿತನವನ್ನು ಮೆರೆದಿದೆ ರೈಡ್  ಪರ್  ಕಾಸ್ ಎಂಬ ಸಂಸ್ಥೆ ಸುಮಾರು 33 ಚಿತ್ರ ಕಲಾವಿದರ ತಂಡ ಈ ಶಾಲೆಗೆ ಆಗಮಿಸಿ ಇಡೀ ಶಾಲೆಯನ್ನ ಹಸಿ ಚಿತ್ತಾರ ಹಸೆ ಚಿತ್ತಾರದೊಳಗೆ ಸಂಸ್ಕೃತಿ, ಕ್ರೀಡೆ, ಮಾಸಿಹೋಗಿರುವ ಜಾನಪದ ಕಲೆಗಳನ್ನ ಅನಾವರಣಗೊಳಿಸುವುದರ ಮೂಲಕ ಇಡೀ ಶಾಲೆಗೆ ಹೊಸತನದ ಮೆರೆಗನ ಶ್ರೀಯುತ ಮಧು ಬೆಂಗಳೂರು ಇವರ ನೇತೃತ್ವದ ತಂಡ ಶಾಲೆಯ ಅಂದಚಂದದ ಚಿತ್ರಕಲೆ ಬಿಡಿಸುವುದರ ಮೂಲಕ ಸುಂದರಗೊಳಿಸುವುದರ ಮೂಲಕ ಸಾಧನೆ  ಮೆರೆದಿದೆ.

ಇದರ ಜೊತೆಗೆ ಶಾಲಾ ಮಕ್ಕಳಿಗೆ ಎರಡು ಸುಸರ್ಜಿತವಾದ ಡೆಲ್ ಕಂಪನಿಯ ಕಂಪ್ಯೂಟರ್ ಗಳು 28 ಮಕ್ಕಳಿಗೆ ರೈಡ್ ಫಾರ್ ಕಾಸ್ ಸಂಸ್ಥೆಯ  ಸುಂದರ ಬ್ಯಾಗುಗಳು, ಲೇಖನ ಸಾಮಗ್ರಿಗಳು ಮತ್ತು ಮಕ್ಕಳು ಚಿತ್ರಕಲೆ ಬಿಡಿಸಲು ಚಿತ್ರಕಲಾ ಪುಸ್ತಕ ಮತ್ತು ಕ್ರಯನ್ಸ್ ಪೆನ್ಸಿಲ್ ಗಳು ಹಾಗೂ ವಿವಿಧ ತಿಂಡಿ ತಿನಿಸುಗಳನ್ನ ಹೊತ್ತು ತಂದ ಈ ತಂಡ ಹಾಳಸಸಿ ಪೋಷಕರ ಮನಸೂರೆಗೊಂಡು ಪ್ರಸಂಸೆಗೆ  ಪಾತ್ರವಾಗಿದೆ.

ಈ ರೈಡ್ ಫರ್  ಕಾಸನ ಎಲ್ಲ ಸದಸ್ಯರುಗಳಿಗೆ ಶಾಲೆಯ ಎಸ್ ಟಿ ಎಂ ಸಿ ಪದಾಧಿಕಾರಿಗಳು ಶಿಕ್ಷಕರು ಹಿರಿಯ ವಿದ್ಯಾರ್ಥಿಗಳು ಹಾಗೂ ಕುದುರು ಗ್ರಾಮ ಪಂಚಾಯಿತಿ ಹೃದಯಪೂರ್ವಕವಾಗಿ ಅಭಿನಂದನೆಯನ್ನು ಸಲ್ಲಿಸುತ್ತಿದೆ
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪರಶುರಾಮಪ್ಪ ಈ ಸಂಸ್ಥೆಯ  NJO ತಂಡವನ್ನು ಇಲಾಖೆಯ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತಿದ್ದಾರೆ.

ಜೊತೆಗೆ ಇದೊಂದು ಮಾದರಿಯ ಕಾರ್ಯಕ್ರಮವಾಗಿದ್ದು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಪ್ರೇರಕವಾದ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ‌ ಕಾರ್ಯಕ್ರಮದ ಜೊತೆಗೆ ನಿಂತ ಶ್ರೀ ಚಂದ್ರಪ್ಪ ಅಳೂರು ಇವರ ಶ್ರಮವನ್ನು ಪ್ರಸಂಸಿಸಲಾಯಿತು.

✍🏻 *ಓಂಕಾರ ಎಸ್. ವಿ. ತಾಳಗುಪ್ಪ*

Leave a Reply

Your email address will not be published. Required fields are marked *