
ಕೋಟ: ಪಂಚವರ್ಣ ಸಂಘಟನೆ ಕಾರ್ಯಕ್ರಮಗಳು ಆ ಸಂಸ್ಥೆಯನ್ನು ಬಹು ಎತ್ತರಕ್ಕೆ ಕೊಂಡ್ಯೊಯ್ದಿದೆ ಎಂದು ನಿವೃತ್ತ ಬಿ.ಎಸ್.ಎನ್.ಎಲ್ ಅಧಿಕಾರಿ ಎಂ.ವಿಷ್ಣುಮೂರ್ತಿ ಮಯ್ಯ ಹೇಳಿದರು.
ಮಂಗಳವಾರ ಕೋಟದ ಪಂಚವರ್ಣ ಕಛೇರಿಯಲ್ಲಿ ಪಂಚವರ್ಣ ಯುವಕ ಮಂಡಲ ಕೋಟ ಇದರ ನೂತನ ಪದಾಧಿಕಾರಿಗಳ ಪದಪ್ರದಾನ, ಸಾಧಕರಿಗೆ ಗೌರವ ಸಂಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ಸಂಘ ಸoಸ್ಥೆಗಳ ಕಾರ್ಯವೈಕರಿಗಳು ಜನಮಾನಸದಲ್ಲಿ ನೆಲೆನಿಲ್ಲುವಂತೆ ಮಾಡಬೇಕು ಊರಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಂತ್ತಾಗಬೇಕು ಈ ನಿಟ್ಟಿನಲ್ಲಿ ಇಂತಹ ಸಂಘಸoಸ್ಥೆಗಳ ಇತರ ಸಂಘಟನೆಗಳಿಗೆ ಮಾದರಿಯಾಗಿದೆ,ಸಾಧಕರನ್ನು ಗುರುತಿಸುವ ಮನೋಭಾವ ಶ್ರೇಷ್ಠವಾಗಿದೆ ಇದೇ ರೀತಿ ಇನ್ನಷ್ಟು ಸಮಾಜಕ್ಕೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು. ಇದೇ ವೇಳೆ ನೂತನ ಅಧ್ಯಕ್ಷ ಮನೋಹರ್ ಪೂಜಾರಿಯವರಿಗೆ ನಿರ್ಗಮಿತ ಅಧ್ಯಕ್ಷ ಅಜಿತ್ ಆಚಾರ್ ದಾಖಲೆಗಳನ್ನು ಹಸ್ತಾಂತರಿಸುವ ಮೂಲಕ ಹೊಸ ಅಧ್ಯಕ್ಷರಿಗೆ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöತ ರೇಖಿ ಚಿಕಿತ್ಸಾ ತಜ್ಞ ಕಾರ್ಕಡ ನಾರಾಯಣ ಆಚಾರ್, ರಕ್ತದಾನಿ ದಿನೇಶ್ ಕಾಂಚನ್ ಬೆಟ್ಟಿನಮನೆ ಇವರುಗಳಿಗೆ ಗೌರವ ಸಂಮ್ಮಾನ ನೀಡಲಾಯಿತು.ಸಭೆಯ ಅಧ್ಯಕ್ಷತೆಯನ್ನು ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöತ ಗೌರವ ಸಲಹೆಗಾರರಾದ ಮಣೂರು ಭಾಸ್ಕರ್ ಶೆಟ್ಟಿ, ಭಾರತಿ ವಿ ಮಯ್ಯ, ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ಪoಚವರ್ಣ ಯುವಕ ಮಂಡಲದ ನಿರ್ಗಮಿತಾಧ್ಯಕ್ಷ ಅಜಿತ್ ಆಚಾರ್,ನೂತನ ಕಾರ್ಯದರ್ಶಿ ನಿತೀನ್ ಕುಮಾರ್ ಕೋಟ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ ಸನ್ಮಾನಪತ್ರ ವಾಚಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮ ಸಂಯೋಜಿಸಿದರು.ಸoಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Leave a Reply