
ನಿವೃತ್ತ ಸರ್ಕಾರಿ ನೌಕರನ ಬಹು ಕೋಟಿ ಅಕ್ರಮ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಾಥ್ ನೀಡುತ್ತಿರುವ ಖಂಡಿಕಾ ಗ್ರಾಮ ಪಂಚಾಯಿತಿ – ಕಾರ್ಮಿಕ ನಿಧಿಗೆ 1% ಶುಲ್ಕ ಕಟ್ಟದೇ ಬಾರಿ ಮೋಸ – ಕಣ್ಣಿದ್ದೂ ಜಾಣ ಕುರುಡುತನ ನಡೆಯತ್ತ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ & ಕಾರ್ಮಿಕ ಇಲಾಖೆಯ ಭ್ರಷ್ಟ ಅಧಿಕಾರಿಗಳು
ಖಂಡಿಕಾ (ಸಾಗರ ): ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ಖಂಡಿಕಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೃತ್ತ ಸರ್ಕಾರಿ ನೌಕರರಾದ ಸ್ವತ್ತಿನ ಮಾಲೀಕರಾದ ಈಶ್ವರ ಬಿನ್ ದೊಡ್ಡ ದ್ಯಾವ ನಾಯ್ಕ ಡಿಮ್ಯಾಂಡ್ ರಿಜಿಸ್ಟರ್ ನಂಬರ್ 638 ನಮೂನೆ 9 &11 ಸಂಖ್ಯೆ 15240030210052091ಆಗಿದ್ದೂ ಕರ್ನಾಟಕ ಪಂಚಾಯತ್ ರಾಜ್ ಅಧಿ ನಿಯಮ ಉಲ್ಲಂಘನೆ ಮಾಡಿ ಬಹು ಕೋಟಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿದ್ದರೂ ಇದುವರೆಗೂ ಗ್ರಾಮ ಪಂಚಾಯಿತಿ ಆಡಳಿತ ನೋಟೀಸ್ ನೀಡಿದ್ದೂ ಬಿಟ್ಟರೇ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗದೇ ಪರೋಕ್ಷವಾಗಿ ಬಹುಕೋಟಿ ವಾಣಿಜ್ಯ ಕಟ್ಟಡ ಅಕ್ರಮವಾಗಿ ನಿರ್ಮಿಸುತ್ತಿರುವುದಕ್ಕೆ ನೈತಿಕ ಬೆಂಬಲ ನೀಡುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ.
*ಕಾರ್ಮಿಕ ನಿಧಿಗೆ 1% ಶುಲ್ಕವನ್ನೂ ಪಾವತಿ ಮಾಡದೇ ಗ್ರಾಮ ಪಂಚಾಯಿತಿಯಿಂದ ಸಮುಚಿತ ಮಾರ್ಗದಲ್ಲಿ ಯಾವುದೇ ರೀತಿಯಲ್ಲೂ ಪರವಾನಿಗೆ ಪಡೆಯದೇ ಬಹುಕೋಟಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿದ್ದರೂ ಗ್ರಾಮ ಪಂಚಾಯಿತಿ ಆಡಳಿತ ವಿರುದ್ಧ ಇದುವರೆಗೂ ಯಾವುದೇ ಸೂಕ್ತ ಶಿಸ್ತು ಕ್ರಮವನ್ನೂ ಶಿವಮೊಗ್ಗ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಐಎಎಸ್ ಹಾಗೂ ಕರ್ತವ್ಯ ನಿರತ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕುಂಭಕರ್ಣ ನಿದ್ರೆಯಲ್ಲಿರುವ ಬಗ್ಗೆ ಪ್ರಜ್ಞಾವಂತ ನಾಗರೀಕರುಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವುದು ನಗ್ನಸತ್ಯ ವಾಗಿದೆ.
✍🏻@ – ಓಂಕಾರ ಎಸ್. ವಿ. ತಾಳಗುಪ್ಪ
Leave a Reply