Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ : ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ, ಮಾಧ್ಯಮಗಳ ಹಾದಿ ತಪ್ಪಿಸಿದವರ ವಿರುದ್ಧ ಪ್ರಕರಣ ದಾಖಲು

ಕೋಟ: ನಿನ್ನೆ ದಿನ ಟಿವಿ, ಪತ್ರಿಕೆ ಹಾಗೂ ಹಲವಾರು ವಾಟ್ಸಾಫ್ ಗ್ರೂಫ್ ಗಳಲ್ಲಿ ಬ್ರಹ್ಮಾವರದ ಗುಂಡ್ಮಿ ಗ್ರಾಮದ ಭಗವತಿ ರಸ್ತೆಯಲ್ಲಿರುವ ನಾಗೇಶರವರ ಮನೆಯ ದನದ ಕರುವಿನ ಬಾಲದ ತುದಿಯನ್ನು ಯಾರೋ ಮತಾಂದರು ಕತ್ತರಿಸಿ ಹೋಗಿರುವ ಬಗ್ಗೆ ಮೇಸೆಜ್‌ ಹರಿದಾಡುತ್ತಿದನ್ನು ಸಾರ್ವಜನಿಕರು ಕರೆ ಮಾಡಿ ಕಳವಳ ವ್ಯಕ್ತ ಪಡಿಸಿದ್ದರು.

ಕೂಡಲೇ ಕಾರ್ಯ ಪ್ರವೃತ್ತರಾದ ಕೋಟ ಠಾಣಾಧಿಕಾರಿಯವರು ಪ್ರಕರಣದ ಬಗ್ಗೆ ವಿಚಾರಿಸಿದಾಗ ದಿನಾಂಕ: 28.01.2025 ರಂದು ಮಧ್ಯಾಹ್ನ 2:00 ಗಂಟೆಗೆ ನಾಗೇಶ ಹಾಗೂ ಅವರ ಹೆಂಡತಿ ಅಹಲ್ಯ ರವರು ಮನೆಯಲ್ಲಿರುವಾಗ ಅಪರಿಚಿತ ಸುಮಾರು 60 ವರ್ಷ ಪ್ರಾಯದ ಗಂಡಸು ಧನ ಸಹಾಯ ಮಾಡುವಂತೆ ಅವರ ಮನೆಗೆ ಬಂದಿದ್ದು ಅವರು ಹಣ ಕೊಡದೇ ಇದ್ದು ಆಗ ಆ ವ್ಯಕ್ತಿಯ ಮನೆಯಿಂದ ಹೋಗಿರುತ್ತಾನೆ. ಅದೇ ದಿನ ಸಂಜೆ 4:00 ಗಂಟೆಗೆ ನಾಗೇಶ ರವರು ದನದ ಹಾಲು ಕರೆಯಲು ಕೊಟ್ಟಿಗೆಗೆ ಹೋದಾಗ ದನ ನಿಂತುಕೊಂಡಿದ್ದು ಮಲಗಿದ್ದ ಕರುವಿನ ಬಾಲದ ಮೇಲೆ ದನದ ಕಾಲು ಇದ್ದು ಕರುವು ಎದ್ದಾಗ ಬಾಲ ತುಂಡಾಗಿ ಬಿದ್ದಿರುತ್ತದೆ.

ಅದೇ ದಿನ ರಾತ್ರಿ ಸರಿಸುಮಾರು 8:00 ಗಂಟೆಗೆ ನಾಗೇಶರವರ ಮಗ ಅನಿಲರವರಿಗೆ ತಿಳಿದಾಗ, ಅವರು ಇದರ ವಾಸ್ತವವನ್ನು ಸರಿಯಾಗಿ ಅರಿಯದೇ ಇನ್ನೂ ಕೆಲವರು ಸೇರಿ ಈ ವಿಷಯವನ್ನು ತಿರುಚಿ ಯಾರೋ ಮತಾಂಧ ಸೇಲ್ಸ್‌ ಮೆನ್‌ ತಮ್ಮ ಮನೆಗೆ ಮಧ್ಯಾಹ್ನ ಬಂದು ದನದ ಕರುವಿನ ಬಾಲವನ್ನು ಕತ್ತರಿಸಿರುವುದಾಗಿ ಸುದ್ದಿಯನ್ನು ಹಬ್ಬಿಸಿ, ಕರುವಿನ ತುಂಡಾದ ಬಾಲದ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು, ವಾಸ್ತವಿಕ ಸಂಗತಿಗಳನ್ನು ತಿರುಚಿ ಆತಂಕದ ವಾತಾವರಣ ನಿರ್ಮಾಣ ಆಗುವಂತೆ ಸುಳ್ಳು ಸುದ್ದಿ ಸೃಷ್ಟಿಸಿ, ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಲ್ಲಿ ಬಿತ್ತರವಾಗುವಂತೆ ಮಾಡಿ, ಸಮಾಜದಲ್ಲಿ ಗುಂಪುಗಳ ನಡುವೆ ದ್ವೇಷ ಹುಟ್ಟಿಸಿ ಅಶಾಂತಿ ನಿರ್ಮಾಣ ಮಾಡುವಂತೆ ಮಾಡಿದ ಕಾರಣ, ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 19/2025 ಕಲಂ: 353(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *