
ತಾಳಗುಪ್ಪ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ ತಾಳಗುಪ್ಪ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಕಾರ್ಯದರ್ಶಿ ಗ್ರೇಡ್ ) ಇಮ್ತಿಯಾಜ್ ಭಾಷಾ ವಿರುದ್ಧ ತಾಳಗುಪ್ಪ ಗ್ರಾಮಸ್ಥರು PDO ಇಮ್ತಿಯಾಜ್ ಭಾಷಾ ರವರೇ ತಾವುಗಳು ನಾರಾಯಣ ಕಲಾಲ್ ರವರಿಗೆ ವಾಣಿಜ್ಯ ಕಟ್ಟಡ ಕಟ್ಟಲು ಮೊದಲು ಕಟ್ಟದಂತೆ ನೋಟೀಸ್ ನೀಡಿ ನಂತರದಲ್ಲಿ NOC ನೀಡಿರುತ್ತೀರಿ, NOC ನೀಡುವಾಗ ಒಂದೇ ಒಂದೂ ಬಿಡಿಗಾಸು ಪಡೆದಿಲ್ಲ ಮುಟ್ಟಿಲ್ಲ ಎಂದೂ, ಹಾಗೂ ತಾಳಗುಪ್ಪ ಗ್ರಾಮ ಪಂಚಾಯಿತಿಗೆ ಕರ್ತವ್ಯಕ್ಕೆ ಹಾಜರಾದ ನಂತರ 25 ಸಾವಿರ ದಿಂದ 30 ಸಾವಿರಕ್ಕೂ ಹೆಚ್ಚಿನ ಮೌಲ್ಯದ ಹೊಸ ಮೊಬೈಲ್ ನ್ನೂ ಪಂಚಾಯತ್ ಅನುದಾನದಲ್ಲಿ ಖರೀದಿ ಮಾಡಿಲ್ಲ ನನ್ನ ಸ್ವಂತ ಹಣದಲ್ಲಿಯೇ ಖರೀದಿ ಮಾಡಿರುತ್ತೇನೆ ಎಂದೂ ಪವಿತ್ರ ಮಕ್ಕಾ ಮಧೀನ ದಿಕ್ಕಿನಲ್ಲಿ ತಿರುಗಿ ಪವಿತ್ರ ಗ್ರಂಥವಾದ ” ಕುರಾನ್ ” ಮುಟ್ಟಿ ಪ್ರಮಾಣ ಮಾಡುವಂತೆ ತಾಳಗುಪ್ಪ ಗ್ರಾಮಸ್ಥರು ತೀವ್ರ ಒತ್ತಾಯ ಮಾಡುತ್ತಿರುವುದು ಗ್ರಾಮ ಪಂಚಾಯಿತಿಯ ಚಾವಡಿಯಲ್ಲಿ ಕೇಳಿ ಬರುತ್ತಿರುವುದು ಅಷ್ಟೇ ನಗ್ನಸತ್ಯವಾಗಿದೆ…… ಮುಂದೇನು PDO ಇಮ್ತಿಯಾಜ್ ಭಾಷಾ ಗ್ರಾಮಸ್ಥರ ಆಣೆ ಪ್ರಮಾಣ ಮನವಿಗೆ ಪ್ರಮಾಣ ಮಾಡುತ್ತಾರೆಯೇ ಎಂಬುದೇ ಯಕ್ಷಪ್ರಶ್ನೆ
✍🏻 @ಸುದ್ದಿ ಸ್ಫೋಟ…… ನೈಜ ನಿಖರ ಸುದ್ದಿ – ಓಂಕಾರ ಎಸ್. ವಿ. ತಾಳಗುಪ್ಪ*
Leave a Reply