
ತಾಳಗುಪ್ಪ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತಾಳಗುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಮನೆ ಗ್ರಾಮದಲ್ಲಿರುವ ನಾಡಿನ ಸುಪ್ರಸಿದ್ದ ವಿದ್ಯಾಸಂಸ್ಥೆಯಂದೇ ಪ್ರಖ್ಯಾತಿ ಹೊಂದಿರುವ ಮಲೆನಾಡು ಅಭಿವೃದ್ಧಿ ಪ್ರತಿಷ್ಟಾನದ ” ನಾಲಂದ ಪ್ರೌಢ ಶಾಲೆ ” ಸಾವಿರಾರು ವಿದ್ಯಾರ್ಥಿಗಳು ಈ ವಿಜ್ಯಸಂಸ್ಥೆಯಲ್ಲಿ ವಿದ್ಯಾರ್ಜನೆಯಿಂದ ದೇಶ ವಿದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮತ್ತೊಂದು ವಿಶೇಷ
ನಾಲಂದ ಪ್ರೌಢ ಶಾಲೆ( ಅಂದು ನಾಲಂದ ಪದವಿ ಪೂರ್ವ ಕಾಲೇಜು ) ಗೆ ತಾನು ವಾಸವಿರುವ ಮನೆಯಿಂದ ಸುಮಾರು 04 ರಿಂದ 05 ಕಿ. ಮೀ. ದೂರದಿಂದ ದಿನ0ಪ್ರತಿ ನೆಡೆದೇ ವ್ಯಾಸಂಗ ಮಾಡಿ ‘ನಾಲಂದ ಪ್ರೌಢ ಶಾಲೆ” ಯಲ್ಲಿ ಧೈಹಿಕ ಶಿಕ್ಷಕರಾಗಿ ಸೇವೆಯ ಕರ್ತವ್ಯಕ್ಕೆ ಅಣಿಯಾಗಿದ್ದೂ ವಿಶೇಷ
ಶ್ರೀಯುತ ಮಹೇಂದ್ರ ಕುಮಾರ್ ನಾನು ಆತ್ಮೀಯ ಸ್ನೇಹಿತರಾಗಿದ್ದೂ ಒಂದೇ ಬೆಂಚಿನಲ್ಲಿ ಕೂತು ಒಟ್ಟಿಗೆ ಕೂತು ವಿದ್ಯಾಭ್ಯಾಸ ಮಾಡಿದ್ದೂ, ನನ್ನ ಆತ್ಮೀಯ ಗೆಳೆಯ ” ನಾಲಂದ ಪ್ರೌಢ ಶಾಲೆ” ಯಲ್ಲಿ ಧೈಹಿಕ ಶಿಕ್ಷಕ ಕರ್ತವ್ಯದಿಂದ ಸೇವಾ ಪದೋನತಿ ಹೊಂದಿ ” ಮುಖ್ಯ ಶಿಕ್ಷಕ ” ರಾಗಿ ಸೇವೆ ಸಲ್ಲಿಸುತ್ತಿರುವ ಭಾಗ್ಯ ಒಲಿದುರುವುದಕ್ಕೆ ವಿದ್ಯಾಸಂಸ್ಥೆಯ ಶಿಕ್ಷಕ ಶಿಕ್ಷಕಿಯರ ಸಮೂಹ,ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು, ಹಳೆಯ ವಿದ್ಯಾರ್ಥಿಗಳು, ಸುತ್ತಮುತ್ತಲಿನ ಗ್ರಾಮಸ್ಥರುಗಳು ಮುಖ್ಯ ಶಿಕ್ಷಕರಾದ ಮಹೇಂದ್ರ ಕುಮಾರ್ ರವರಿಗೆ ಅಭಿನಂಧಿಸಿದರು*
*”ನಾಲಂದ ಪ್ರೌಢ ಶಾಲೆ ” ಇನ್ನಷ್ಟು ಹೆಚ್ಚಿನ ವಿದ್ಯಾಭ್ಯಾಸವನ್ನೂ ವಿದ್ಯಾರ್ಜನೆಯತ್ತ ವಿದ್ಯಾರ್ಥಿಗಳಿಗೆ ಧಾರೆಯೆರೆದು ಭವ್ಯ ಭಾರತದ ಉತ್ತಮ ಸಮಾಜಕ್ಕಾಗಿ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಲು” ನಾಲಂದ ಪ್ರೌಢ ಶಾಲೆ ” ಯ ನೂತನವಾಗಿ ” ಮುಖ್ಯ ಶಿಕ್ಷಕ ” ರಾಗಿ ಅಧಿಕಾರದ ಚುಕ್ಕಾಣಿ ಹಿಡಿದ ” ಮಹೇಂದ್ರ ಕುಮಾರ್ ” ರವರು ಶ್ರಮವಹಿಸಲಿ ಎಂಬುದೇ ಸರ್ವರ ಆಶಯವಾಗಿದೆ
✍🏻 ಸುದ್ದಿ – ಓಂಕಾರ ಎಸ್. ವಿ. ತಾಳಗುಪ್ಪ*
Leave a Reply