ಕೋಟ: ಮಳಲುತಾಯಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ ಕಂಬಳಗದ್ದೆ, ಮಣೂರು ಕೋಟ ಇದರ ವಾರ್ಷಿಕ ಹಾಲು ಹಬ್ಬ ಗೆಂಡಸೇವೆ, ಢಕ್ಕೆಬಲಿ ಹಾಗೂ ತುಲಾಭಾರ ಸೇವೆ ಕಾರ್ಯಕ್ರಮಗಳು ಫೆ.6ರ ಗುರುವಾರದಂದು ದುರ್ಗಾಹೋಮ ಹಾಗೂ ಹಾಲುಹಬ್ಬ. ಗೆಂಡಸೇವೆ ಮತ್ತು ಮರುದಿನ ಫೆ.7.ರ ಶುಕ್ರವಾರ ಬೆಳಿಗ್ಗೆ ನಾಗನಿಗೆ ಹಾಲುಹಿಟ್ಟು ಸೇವೆ. ಢಕ್ಕೆಬಲಿ, ತುಲಾಭಾರ ಸೇವಾದಿಗಳು ಶ್ರೀದೇವಿಯ ಸನ್ನಿಧಿಯಲ್ಲಿ ನಡೆಯಲಿದೆ.
ಫೆ.6 ಗುರುವಾರ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಗಣಪತಿ ಪೂಜೆ, ದುರ್ಗಾಹೋಮ ರಾತ್ರಿ ಗಂಟೆ 8.00ಕ್ಕೆ ಗೆಂಡಸೇವೆ ನಂತರ ಅನ್ನಸಂತರ್ಪಣೆ ರಾತ್ರಿ ಗಂಟೆ 9.00ಕ್ಕೆ ಶ್ರೀ ದುರ್ಗಾ ಕಲಾತಂಡ ಹಾರಾಡಿ ಇವರಿಂದ ಒಂದಲ್ಲಾ ಒಂದು ಸಮಸ್ಯೆ ಎಂಬ ನಗೆ ನಾಟಕ, 7ರ ಶುಕ್ರವಾರ ಬೆಳಗ್ಗೆ ನಾಗದೇವರಿಗೆ ಹಾಲುಹಿಟ್ಟು ಸೇವೆ ಮತ್ತು ಢಕ್ಕೆಬಲಿ ಹಾಗೂ ತುಲಾಭಾರ ಸೇವೆ, ಮಹಾ ಮಂಗಳಾರತಿ ತೀರ್ಥಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿರುವುದು. ರಾತ್ರಿ ಗಂಟೆ 8.00ಕ್ಕೆ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ ಹಾಲಾಡಿ ಇವರಿಂದ ಯಕ್ಷಗಾನ ಬಯಲಾಟ ಕಾರ್ಯಕ್ರಮಗಳು ಜರಗಲಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.
















Leave a Reply