News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ

ವರದಿ : ಅಶ್ವಿನಿ ಅಂಗಡಿ

ಬಾಗಲಕೋಟೆ : ವಿದ್ಯಾರ್ಥಿಗಳು ದೇಶ ಪ್ರೇಮ ಬೆಳೆಸಿಕೊಳ್ಳಬೇಕು. ಜನ್ಮ  ನೀಡಿದ ತಂದೆ ತಾಯಿಗಳಿಗೆ ಹಾಗೂ ಭೂಮಿಗೆ ಋಣವನ್ನು ತೀರಿಸುವಂತಾಗಬೇಕು. ಸತ್ತಾಗ ನಾವು ನಗುತಿರಬೇಕು,ಜಗತ್ತು ಅಳುತ್ತಿರಬೇಕು ಎಂದು ಸಂಜಯ್ ನಡುವಿನಮನಿ ಹೇಳಿದರು. 

ಅವರು ನಗರದ ಬಿ.ವಿ.ವಿ.ಸಂಘದ ನೂತನ ಸಭಾಭವನದಲ್ಲಿ ಮಂಗಳವರ ನಡೆದ ಬಸವೇಶ್ವರ ಪದವಿ-ಪೂರ್ವ ವಾಣಿಜ್ಯ ಮಹಾವಿದ್ಯಾಲಯದ 2024-25 ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಇಂದಿನ ದುಷ್ಟಚಟಗಳಿಗೆ ವಿದ್ಯಾರ್ಥಿಗಳು ಬಲಿಯಾಗಬಾರದು. ಅಮೂಲ್ಯವಾದ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು.

ತಾವುಗಳು  ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ಅಧ್ಯಯನಶೀಲರಬೇಕು. ಅಂತಹ ಮಹನೀಯರ ಆದರ್ಶಗಳನ್ನು ಪಾಲಿಸಬೇಕು, ಈ ವಿದ್ಯಾಲಯ ನಿಮಗೆ ಶಿಕ್ಷಣವನ್ನು ಕೊಡುವುದರ ಜೊತೆಗೆ ನಿಮ್ಮ ವ್ಯಕ್ತಿತ್ವವನ್ನು ರೂಪಿಸಿದೆ. ಸಕಾರಾತ್ಮಕ ಚಿಂತನೆಗಳನ್ನು ಸಾಧಿಸುವುದರ ಕಡೆಗೆ ಗಮನಹರಿಸಬೇಕು. ಶಿಕ್ಷಕರು ಗುರುತಿಸುವಂತಹ ವ್ಯಕ್ತಿತ್ವವನ್ನು  ರೂಪಿಸಿಕೊಳ್ಳಬೇಕು. ನಿದ್ದೆಯಲ್ಲಿ ಕಾಣುವುದು ಕನಸಲ್ಲ, ಕನಸು ಕಂಡರೆ ನಿದ್ದೆ ಬಾರದಂತೆ ಕಾಣಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಗನ್ನಾಥ್ ಚೌವ್ಹಾಣ ಅವರು ಮಾತನಾಡಿ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು. ನಮ್ಮ ಭಾರತದ ಯುವಶಕ್ತಿ ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ವಿದ್ಯಾರ್ಥಿಗಳು ಪಾಲಕರಿಗೆ ಗೌರವಿಸಬೇಕು ತಾವು ಕಲಿತ ಮಹಾವಿದ್ಯಾಲಯವನ್ನು ಮತ್ತು ಕಲಿಸಿದ ಗುರುವನ್ನು ಮರೆಯಬಾರದು ಎಂದರು.

ಇದೇ  ಸಂದರ್ಭದಲ್ಲಿ 2024 ವರ್ಷದಲ್ಲಿ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು ಉತ್ತೀರ್ಣ ಉತ್ತೀರ್ಣರಾದ ಎಸ್ ಐ ಪತ್ತಾರ್ ಹಾಗೂ ಡಾಕ್ಟರೇಟ್ ಪದವಿ ಮುಗಿಸಿದ ಶ್ರೀಮತಿ ಎಸ್ ಆರ್ ಗರಗದಮಠ  ಇವರಿಗೆ ಸನ್ಮಾನಿಸಲಾಯಿತು. ಕುಮಾರಿ ಪವಿತ್ರಾ ಹೊಸಮನಿ ಪ್ರಾರ್ಥಿಸಿದರು ಸಂಯೋಜಕರಾದ ಶ್ರೀಮತಿ ಜಿ. ಎಸ್. ಶೆಲ್ಲಿಕೇರಿ ಸ್ವಾಗತಿಸಿದರು. ಎಸ್. ಐ.  ಪತ್ತಾರ್ ಪ್ರಸ್ತಾವಿಕ ಮಾತನಾಡಿದರು.

Leave a Reply

Your email address will not be published. Required fields are marked *