
ವರದಿ : ಅಶ್ವಿನಿ ಅಂಗಡಿ
ಬಾಗಲಕೋಟೆ : ಫೆ 4 – ಪ್ರಾರಂಭಿಕ ಹಂತದಲ್ಲಿ ಕ್ಯಾನ್ಸರ ರೋಗವನ್ನು ಪತ್ತೆ ಹಚ್ಚಿದರೆ ಯಶಸ್ವಿಯಾಗಿ ಗುಣಪಡಿಸಬಹುದು ಆದ್ದರಿಂದ ಭಯ ಪಡದೆ ಆತಂಕಕ್ಕೊಳಗಾಗದೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಎಂದು ಬಿ.ವಿ.ವಿ.ಎಸ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದ ಸರ್ಜರಿ ಪ್ರಾಧ್ಯಾಪಕ ಡಾ. ರವಿ.ಎಸ್. ಕೋಟೆಣ್ಣವರ ಹೇಳಿದರು.
ಅವರು ನವನಗರದ ಹಿರಿಯ ನಾಗರಿಕರ ಯೋಗಕ್ಷೇಮ ಕೇಂದ್ರದಲ್ಲಿ ವಿಶ್ವ ಕ್ಯಾನ್ಸರ ದಿನಾಚಾರಣೆ ಅಂಗವಾಗಿ ಹಮ್ಮಿಕೊಂಡ ಕ್ಯಾನ್ಸರ್ ಅರಿವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು, ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಾಪಕಿ ಡಾ. ಅಖಿಲಾ ಹುಲ್ಲೂರ ಆಹಾರ ಕ್ರಮ ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಎಸ್.ಎಚ್. ಗುಳೇದ ಮಾತನಾಡಿ ನಮ್ಮ ಸಂಸ್ಥೆಗೆ ಆಗಮಿಸಿ ಕ್ಯಾನ್ಸರ ಕುರಿತು ಅರಿವು ಮೂಡಿಸಿದ ಹೋಮಿಯೋಪಧಿ ಕಾಲೇಜನ ಕಾರ್ಯ ಶ್ಲಾಘನೀಯ ಎಂದರು. ಡಾ.ವಿಜಯಲಕ್ಷ್ಮಿ , ಡಾ.ಸುನೀಲ ಭೋಸಲೆ ಉಪಸ್ಥಿತರಿದ್ದರು. ನಿವೃತ್ತ ಪ್ರಾಧ್ಯಾಪಕ ಜಿ.ಎಮ್. ಚನ್ನಪ್ಪಗೋಳ ಸ್ವಾಗತಿಸಿ ವಂದಿಸಿದರು.