ವರದಿ : ಅಶ್ವಿನಿ ಅಂಗಡಿ
ಬಿಟಿಡಿಎ ಪ್ರೌಢಶಾಲೆಗೆ ಡಿಜಿಟಲ್ ಪ್ರೊಜೆಕ್ಟರ್ ಕೊಡುಗೆ
ಬಾಗಲಕೋಟೆ-ನಗರದ ವಿದ್ಯಾಗಿರಿಯ ಬಾಗಲಕೋಟ ವಿಕಾಸ ಪತ್ತಿನ ಸಹಕಾರಿ ಸಂಘ ಕೇರ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ ಸಹಯೋಗದೊಂದಿಗೆ ವಿದ್ಯಾಗಿರಿ ವಲಯದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಆವರಣದಲ್ಲಿರುವ ಸರ್ಕಾರಿ ಪ್ರೌಢಶಾಲೆ(ಆರ್.ಎಂ.ಎಸ್.ಎ)ಗೆ ಡಿಜಿಟಲ್ ಪ್ರೊಜೆಕ್ಟರ್ ಮತ್ತು ಬೋರ್ಡ ಕೊಡುಗೆ ನೀಡಿದೆ.
ವಿಕಾಸ ಪತ್ತಿನ ಸಹಕಾರಿ ಸಂಘದ 9 ನೇ ವಾರ್ಷಿಕೋತ್ಸವದ ಸ್ಮರಣೆಗಾಗಿ ಪ್ರೊಜೆಕ್ಟರ್ ಕೊಡುಗೆ ನೀಡಿದ್ದು, 10 ನೇ ತರಗತಿಯ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಸಂಘದ ಅಧ್ಯಕ್ಷ ಎಸ್.ಕೆ.ಪಾಟೀಲ ತಿಳಿಸಿದರು. ರವಿವಾರ ಬೆಳಿಗ್ಗೆ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೂಜೆ ನೆರವೇರಿದ ನಂತರ ಬಿಟಿಡಿಎ ಶಾಲೆಯ ಆವರಣದಲ್ಲಿ ಸಸಿ ನೆಡಲಾಯಿತು. ನಂತರ ಶಾಲೆಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಶಾಲೆಯ ಮುಖ್ಯಾಧ್ಯಾಪಕಿ ಜಿ.ಎಸ್.ಖೋತ ಅವರಿಗೆ ಸಂಘದ ಅಧ್ಯಕ್ಷ ಎಸ್.ಕೆ.ಪಾಟೀಲ ಪ್ರೊಜೆಕ್ಟರ್ ನೀಡಿದರು.
ಸಮಾರಂಭದಲ್ಲಿ ನಗರಸಭೆ ಸದಸ್ಯ ವಿ.ವಿ.ಶಿರಗನ್ನವರ, ಸಹಕಾರಿ ಸಂಘದ ಉಪಾಧ್ಯಕ್ಷ ಆರ್.ಎನ್.ಕಂಕಾಳೆ, ನಿರ್ದೇಶಕರಾದ ಎಸ್.ಜಿ.ವಿಜಾಪೂರ, ಈಶ್ವರ ಕೋನಪ್ಪನವರ, ಸುನೀಲ ಅಂಬೋರೆ, ಆನಂದ ಪವಾರ, ಪ್ರಭು ಕೊಬ್ರಿ, ಶಿಕ್ಷಣ ಇಲಾಖೆಯ ಬಿಆರ್‌ಪಿ ಜ್ಯೋತಿ ಮುಳ್ಳೂರ, ಸಿಆರ್‌ಪಿ ಮುತ್ತು ಬಳ್ಳಾ, ಬಸವರಾಜ ಬಗಲಿ, ಎಲ್.ಡಿ.ಗೌಡರ, ಸಂಘದ ಮುಖ್ಯ ಕರ‍್ಯನಿರ್ವಾಹಕ ಅಧಿಕಾರಿ ಎಸ್.ಜಿ.ಪಾಟೀಲ, ಲಕ್ಷö್ಮಣ ಹಡಪದ, ಶಿವು ರಾಠೋಡ, ಶಾಲೆಯ ಶಿಕ್ಷಕರು ಇದ್ದರು.
ಇದೇ ಸಂದರ್ಭದಲ್ಲಿ ರಾಷ್ಟಿçಯ ವಿಜ್ಞಾನ ಮೇಳಕ್ಕೆ ಆಯ್ಕೆಯಾಗಿದ್ದ ಶಿರೂರ ಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ಸಹನಾ ಕೊಣ್ಣೂರ ಹಾಗೂ ಸಾಧಕ ವಿದ್ಯಾರ್ಥಿ ಮಂಜುನಾಥ ಹಡಪದ ಅವರನ್ನು ಸನ್ಮಾನಿಸಲಾಯಿತು. ಜಿ.ಎಸ್.ಖೋತ ಸ್ವಾಗತಿಸಿದರು. ಕೇರ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟಿ ಈಶ್ವರ.ಎಸ್.ಕೋನಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸ್.ಆರ್.ಬದನೂರ ನಿರೂಪಿಸಿದರು. ಶಿವಾನಂದ ಮಂತ್ರಿ ವಂದಿಸಿದರು.