
ಕೋಟ: ಕೋಟದ ವಿವೇಕ ವಿದ್ಯಾಸಂಸ್ಥೆಗಳ ಅಮೃತ
ಮಹೋತ್ಸವದ ಯೋಜನೆಯ ಅಡಿಯಲ್ಲಿ ಆಂಗ್ಲ ಮಾಧ್ಯಮ ವಿಭಾಗದಲ್ಲಿ ನೂತನ ವಿಜ್ಞಾನ ಪ್ರಯೋಗಾಲಯ, ವಾಚನಾಲಯದ ಉದ್ಘಾಟನಾ ಸಮಾರಂಭ ಜರುಗಿತು.
ವಿಜ್ಞಾನ ಪ್ರಯೋಗಾಲಯವನ್ನು ಮೈಯಾಸ್ ರೆಸ್ಟೋರೆಂಟ್ ಪ್ರೈ ಲಿಮಿಟೆಡ್, ಬೆಂಗಳೂರು ಮಾಲಿಕ
ಸದಾನಂದಮಯ್ಯ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪ್ರಯೋಗಾಲಯದ ಹೆಚ್ಚಿನ ಲಾಭವನ್ನು ಪಡೆದು ಭವಿಷ್ಯದಲ್ಲಿ ಹೊಸ ಆವಿಷ್ಕಾರದೊಂದಿಗೆ
ಉತ್ತಮ ಸಾಧನೆಯನ್ನು ಮಾಡಿ ಅದನ್ನು ಸಮಾಜಕ್ಕೆ ಸಮರ್ಪಿಸುವಂತೆ ಆಗಬೇಕು, ಆಗ ನಮ್ಮ ಜೀವನ ಸಾರ್ಥಕಗೊಳ್ಳುತ್ತದೆ ಎಂದು ತಿಳಿಸಿದರು. ವಾಸುದೇವ ಕಾರಂತ್, ನಿವೃತ್ತ ಹಿರಿಯ ಪ್ರಬಂಧಕರು ಸಿಂಡಿಕೇಟ್ ಬ್ಯಾಂಕ್, ಇವರು ವಾಚನಾಲನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರ
ಮೂಲಕ ಹೆಚ್ಚಿನ ಜ್ಞಾನ ಸಂಪಾದನೆಯನ್ನು ಮಾಡಬೇಕೆಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಕೋಟ ವಿದ್ಯಾ ಸಂಘದ ಅಧ್ಯಕ್ಷರಾದ ಸಿ,ಎ.ಪ್ರಭಾಕರ ಮಯ್ಯ, ಕಾರ್ಯದರ್ಶಿ ಎಂ.ರಾಮದೇವ
ಐತಾಳ್, ಕೋಶಾಧಿಕಾರಿ ವೆಲೇರಿಯನ್ ಮೇನೇಜಸ್ ಕಾರ್ಯದರ್ಶಿ ಪಿ.ಮಂಜುನಾಥ್ ಉಪಾಧ್ಯಾ , ಪ್ರಾಂಶುಪಾಲ ಜಗದೀಶ ನಾವಡ, ಜಗದೀಶ ಹೊಳ್ಳ, ವೆಂಕಟೇಶ ಉಡುಪ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯನಿ ಪ್ರೀತಿ ರೇಖಾ
ಇವರು ಅತಿಥಿಗಳನ್ನು ಸ್ವಾಗತಿಸಿದರು.
ಅಧ್ಯಾಪಕ ಅಚ್ಯುತ ಉಪಾಧ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.ವಿವೇಕ ವಿದ್ಯಾಸಂಸ್ಥೆಗಳ ಅಮೃತ ಮಹೋತ್ಸವದ ಯೋಜನೆಯ ಅಡಿಯಲ್ಲಿ ಆಂಗ್ಲ ಮಾಧ್ಯಮ ವಿಭಾಗದಲ್ಲಿ ನೂತನ ವಿಜ್ಞಾನ ಪ್ರಯೋಗಾಲಯವನ್ನು ಮೈಯಾಸ್ ರೆಸ್ಟೋರೆಂಟ್ ಪ್ರೈ ಲಿಮಿಟೆಡ್, ಬೆಂಗಳೂರು ಮಾಲಿಕ ಸದಾನಂದ ಮಯ್ಯ ಉದ್ಘಾಟಿಸಿದರು. ಕೋಟ ವಿದ್ಯಾ ಸಂಘದ ಅಧ್ಯಕ್ಷರಾದ ಸಿ,ಎ.ಪ್ರಭಾಕರ ಮಯ್ಯ, ಕಾರ್ಯದರ್ಶಿ ಎಂ.ರಾಮ ದೇವ ಐತಾಳ್, ಕೋಶಾಧಿಕಾರಿ ವೆಲೇರಿಯನ್ ಮೇನೇಜಸ್, ಪ್ರಾಂಶುಪಾಲ ಜಗದೀಶ ನಾವಡ ಇದ್ದರು.
Leave a Reply