
ಕುಂದಾಪುರ :- ಇಲ್ಲಿನ ಖಾರ್ವಿಕೇರಿ ರಸ್ತೆಯಲ್ಲಿರುವ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ವಾರ್ಷಿಕ ಮಾರಿ ಜಾತ್ರೆಯು ಫೆ.11 ಮತ್ತು 12 ರಂದು ನಡೆಯಲಿರುವುದು.
ಫೆ.11 ರಂದು ಮಂಗಳವಾರ ಬೆಳಿಗ್ಗೆ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆ, ದೇವಳದಲ್ಲಿ ಸೇವಾ ಕರ್ತರಿಂದ ವಿಶೇಷ ಪುಷ್ಪಾಲಂಕಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.

ಸಂಜೆ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 8 ಗಂಟೆಗೆ ಹರಕೆಯ ತುಲಾಭಾರ ಸೇವೆ, ಮಡಿಲು ತುಂಬುವುದು, ರಾತ್ರಿ 9ಗಂಟೆಗೆ ರಾತ್ರಿ ಪೂಜೆ ಬಳಿಕ ಸೇವಾ ಕರ್ತರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಫೆ.12ರಂದು ಮಧ್ಯಾಹ್ನ ಅಲಂಕಾರ ಪೂಜೆ, ಮಂಗಳಾರತಿ, ಬಳಿಕ ಸೇವಾ ಕರ್ತರಿಂದ ದೋಸೆ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಳದ ಅಧ್ಯಕ್ಷರಾದ ಅಜಂತ ಖಾರ್ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Reply