• Fri. May 9th, 2025

News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ.....

ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಜಾಗೃತಿ ಆಂದೋಲನ ಉದ್ಘಾಟನೆ ಸಮಾರಂಭ

ByKiran Poojary

Feb 12, 2025

ಕರ್ನಾಟಕ ಪಬ್ಲಿಕ್ ಸ್ಕೂಲ್ ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ ಹಿರಿಯಡ್ಕ,ಡಿ ಡಿ. ಉಪಾಧ್ಯಾಯ ಮದ್ಯವರ್ಜನ ಕೇಂದ್ರ, ರಾಮನಗರ, ಜಿಲ್ಲಾ ಮಕ್ಕಳ ರಕ್ಷಣಾ ಕೇಂದ್ರ, ಹಾಗೂ ಶಾಲಾ ಸಾಕ್ಷರತಾ ಇಲಾಖೆ, ಉಡುಪಿ ಜಿಲ್ಲೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಜಾಗೃತಿ ಆಂದೋಲನ ಉದ್ಘಾಟನೆ ಸಮಾರಂಭ ಹಾಗೂ ಡಿ.ಡಿ ಉಪಧ್ಯಾಯ ಸದ್ಭಾವನಾ ಪ್ರಥಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ವೀರಭದ್ರ ಸಾಂಸ್ಕೃತಿಕ ಕಲಾಕೇಂದ್ರ ಹಿರಿಯಡ್ಕ ಇಲ್ಲಿ 11/02/2025ರಂದು ಹಮ್ಮಿಕೊಳ್ಳಲಾಗಿತ್ತು.

ಈ ಸಮಾರಂಭದ ದಿವ್ಯ ಸಾನಿಧ್ಯವನ್ನು
ಶ್ರೀ ಶ್ರೀ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ,ಅದಮಾರು ಮಠ ಉಡುಪಿ ಇವರು ವಹಿಸಿದ್ದರು. ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕೆ. ನಾಗಣ್ಣಗೌಡ, ಅಧ್ಯಕ್ಷರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು ಇವರು ನೆರವೇರಿಸಿದರು. ಡಾ. ವೆಂಕಟೇಶ್, ಉಪ ಕುಲಪತಿಗಳು, ಮಣಿಪಾಲ ವಿಶ್ವವಿದ್ಯಾನಿಲಯ ಇವರು ಪ್ರಶಸ್ತಿ ಪ್ರದಾನ ಮಾಡಿದರು.ಡಿ. ಡಿ.ಉಪಾಧ್ಯಾಯ ಸದ್ಭಾವನಾ ಪ್ರಥಮ ಪ್ರಶಸ್ತಿಗೆ ಭಾಜನರಾದ ಶ್ರೀ ಲಕ್ಷ್ಮಿ ಜನಾರ್ಧನ ಭಟ್,ನಿವೃತ್ತ ಉಪನ್ಯಾಸಕರು, ಉಡುಪಿ ಇವರಿಗೆ ಪ್ರಶಸ್ತಿ ನೀಡಲಾಯಿತು.ಮಕ್ಕಳ ರಕ್ಷಣೆ ಕುರಿತು ಶ್ರೀ ಯೋಗೀಶ್ ಪಿ.ಆ‌ರ್. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಜಿಲ್ಲೆ.ಇವರು ಮಾಹಿತಿಯನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ,ಶ್ರೀ ಗಣಪತಿ, ಉಪ ನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಡುಪಿ ಜಿಲ್ಲೆ
ಶ್ರೀಮತಿ ನಾಗರತ್ನ ನಾಯಕ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಉಡುಪಿ ಜಿಲ್ಲೆ, ಡಾ. ಯಲ್ಲಮ್ಮ, ಬಿ.ಇ.ಓ. ಉಡುಪಿ,ಡಿ.ಡಿ. ಉಪಾಧ್ಯಾಯ ಆರೋಗ್ಯ ಕೇಂದ್ರದ ಕಾರ್ಯದರ್ಶಿಯಾದ ಡಿ. ಸುಜಾತ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *