
ಕೋಟ: ಸಂಸ್ಕಾರ ಭರಿತ ಶಿಕ್ಷಣ ಇಂದು ಮರೆಯಾಗಿದ್ದು ಪ್ರಸ್ತುತ ಶಿಕ್ಷಣದ ವ್ಯವಸ್ಥೆ ರ‍್ಯಾಂಕ್‌ಗೆ ಸೀಮಿತವಾಗಿದೆ ಎಂದು ಬ್ರಹ್ಮಾವರ ವ್ಯವಸಾಯಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಹೇಳಿದರು.
ಮಂಗಳವಾರ ಇಲ್ಲಿನ ಸಾಸ್ತಾನದ ಚೆಲ್ಲೆಮಕ್ಕಿ ನಾಗದೇಗುಲದ ವರ್ಧಂತಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿ ಭಾರತೀಯ ಪರಂಪರೆಯಲ್ಲಿ ನಮ್ಮ ಹಿರಿಯರು ನೀಡಿದ ಸಂಸ್ಕಾರಯುತ ಶಿಕ್ಷಣ ಇಲ್ಲದೆ ಆಧುನಿಕ ಶಿಕ್ಷಣ ದಿಸೆಯಲ್ಲಿ ಯುವ ಸಮುದಾಯದ ದಿಕ್ಕು ಬದಲಾಗಿದ್ದು ಧಾರ್ಮಿಕ ಆಧ್ಯಾತ್ಮಿಕದ ಕ್ಷೇತ್ರದಿಂದ
ವoಚಿತರಾಗುತ್ತಿದ್ದಾರೆ ಇದರಿಂದಲೇ ಆನಾಥಾಶ್ರಮ ಸಂಸ್ಕöತಿ ಹೆಚ್ಚುತ್ತಿದೆ. ದೈವ ದೇವರುಗಳ ಭಕ್ತಿ ಕಡಿಮೆಯಾಗಿದೆ ಹಿರಿಯ ಕಿರಿಯ ಎಂಬ ಭಾವನೆ ಶೂನ್ಯವಾಗಿದೆ ಹಿಉಜ್ಗ್ ಮುಂದೇನು ಎಂದು ಪ್ರಶ್ನಿಸಿ ಪೋಷಕರು ಈ ಬಗ್ಗೆ ಜಾಗೃತರಾಗುವುದು ಒಳಿತು ಇಲ್ಲವಾದಲ್ಲಿ ನಮ್ಮ ಹಿರಿಯರು ನೀಡಿದ ಪರಂಪರೆ ಇತಿಹಾಸ ಪುಟ ಸೇರಲಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಶತಾಯುಷಿ
ಗಿರಿಜಾ ನಾರಾಯಣ ಗಾಣಿಗ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೆ.ತಾರಾನಾಥ ಹೊಳ್ಳ, ಶಿಕ್ಷಣ ತಜ್ಞ ಕೆ.ಜಗದೀಶ ನಾವಡ,ಸಹಕಾರಿ ಧುರೀಣ ಬಿರ್ತಿ ರಾಜೇಶ್ ಶೆಟ್ಟಿ, ಸಿ ಎ ನರಸಿಂಹಬಾಬು ಬೆAಗಳೂರು ಇವರುಗಳನ್ನು ಸನ್ಮಾನಿ
ಸಲಾಯಿತು. ಸಾಧಕ ವಿದ್ಯಾರ್ಥಿಗಳಾದ ವೈಶಾಲಿ ಪೈ, ಅನ್ವಿತಾ ಯಕ್ಷಿಮಠ, ನಿಶಾ,ಅನನ್ಯಾ ಸುರೇಶ್, ಪ್ರಜ್ವಲ್.ಕೆ ಇವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಧ್ಯಕ್ಷತೆಯನ್ನು ವರ್ಧಂತ್ಯುತ್ಸವ ಸಮಿತಿ ಅಧ್ಯಕ್ಷ ಜಿ.ಆರ್
ಸುಧಾಕರ್, ಬ್ರಹ್ಮಾವರ ಪ್ರಣವ್ ಆಸ್ಪತ್ರೆ ಮುಖ್ಯಸ್ಥ ಡಾ.ಪ್ರವೀಣ್, ಸಮಿತಿ ಕಾರ್ಯಾಧ್ಯಕ್ಷ ದಿನಕರ್ ವಿ ರಾವ್, ಸಮಿತಿ ಉಪಾಧ್ಯಾಕ್ಷ ಬಿರ್ತಿ ಬಾಲಕೃಷ್ಣ,ರಾಮಚಂದ್ರ ರಾವ್ ಬೆಂಗಳೂರು ಉಪಸ್ಥಿತರಿದ್ದರು.
ದೇಗುಲದ ಕಾರ್ಯದರ್ಶಿ ಗಣೇಶ್ ಜಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.ಶಿಕ್ಷಕಿ ಶೈಲಜಾ ಕಾರ್ಯಕ್ರಮ
ನಿರೂಪಿಸಿದರು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7ರಿಂದ ಸಾಮೂಹಿಕ ಪ್ರಾರ್ಥನೆ, ತಿಲ ಹೋಮ, ಪಂಚ ವಿಂಶತಿ ಕಲಶ ಸ್ಥಾಪನೆ, ಪ್ರಧಾನ ಹೋಮ, ಆಶ್ಲೇಷ ಬಲಿ ಹೋಮ, ಕಲಶಾಭಿಷೇಕ, ಮಹಾಪೂಜೆ ಬ್ರಾಹ್ಮಣ ವಟು ಆರಾಧನೆ 10-00ಕ್ಕೆ ನಾಗ ಸಂದರ್ಶನ, ವೇ.ಮೂ.
ಸುಬ್ರಹ್ಮಣ್ಯ ಮಧ್ಯಸ್ಥ, ಐರೋಡಿ ಇವರಿಂದ ನಂತರ ಪ್ರಸಾದ ವಿತರಣೆ ಭಜನಾ ಕಾರ್ಯಕ್ರಮ, , ಭಕ್ತಿ ಸಂಗೀತ ರಮಾ ಉಪಾಧ್ಯಾಯ ಮತ್ತು ಬಳಗ, ಗುಂಡ್ಮಿ ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ 6-00ಕ್ಕೆ ದೀಪೋತ್ಸವ ,ಗಣಪತಿ ಪೂಜೆ ಮತ್ತು ಮಂದಾರ್ತಿ ಮೇಳದ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಜರಗಿತು. ಧಾರ್ಮಿಕ ವಿಧಿವಿಧಾನವನ್ನು ವೇ.ಮೂ ಪ್ರಸನ್ನ ತುಂಗ ನಿರ್ವಹಿಸಿದರು.
ಇಲ್ಲಿನ ಸಾಸ್ತಾನದ ಚೆಲ್ಲೆಮಕ್ಕಿ ನಾಗದೇಗುಲದ ವರ್ಧಂತಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಧಾರ್ಮಿಕ
ಸಭಾ ಕಾರ್ಯಕ್ರಮದಲ್ಲಿ ಹಿರಿಯ ಶತಾಯುಷಿ ಗಿರಿಜಾ ನಾರಾಯಣ ಗಾಣಿಗ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೆ.ತಾರಾನಾಥ ಹೊಳ್ಳ, ಶಿಕ್ಷಣ ತಜ್ಞ ಕೆ.ಜಗದೀಶ ನಾವಡ, ಸಹಕಾರಿ ಧುರೀಣ ಬಿರ್ತಿ ರಾಜೇಶ್ ಶೆಟ್ಟಿ,ಬಿರ್ತಿ ಬಾಲಕೃಷ್ಣ ಸುಧಾಕರ್ ಪಂಡಿತ್ ಇವರುಗಳನ್ನು ಸನ್ಮಾನಿಸಲಾಯಿತು.
Leave a Reply