
ವರದಿ : ಪುರುಷೋತ್ತಮ್ ಪೂಜಾರಿ
ಸರ್ವೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗುಲ್ವಾಡಿಯಲ್ಲಿ ದಿನಾಂಕ 19/02/2025 ರಂದು ಪೋಷಕರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಮುಖ್ಯಶಿಕ್ಷಕರಾದ ಪ್ರದೀಪ್ ಕುಮಾರ್ ಶೆಟ್ಟಿ, ಎಸ್.ಡಿ ಎಮ್. ಸಿ ಅಧ್ಯಕ್ಷರಾದ ಜಿ. ಇಸ್ಮಾಯಿಲ್, ಉಪಾಧ್ಯಕ್ಷರಾದ ಶ್ರೀಮತಿ ಅಕ್ಷತಾ, ಮಕ್ಕಳ ರಕ್ಷಣಾ ಸಮಿತಿ ರಕ್ಷಣಾ ಅಧಿಕಾರಿ ಶ್ರೀಮತಿ ಮಲ್ಲಿಕಾ, ಗೌರವ ಶಿಕ್ಷಕಿಯರಾದ ಶ್ರೀಮತಿ ಸಂಗೀತ, ಶ್ರೀಮತಿ ವಿದ್ಯಾಶ್ರೀ, ಕುಮಾರಿ ಚಂದ್ರಮತಿ, ಸದಸ್ಯರಾದ ಶ್ರೀಮತಿ ಅಂಬಿಕಾ, ಶ್ರೀಮತಿ ರೇಷ್ಮಾ ಹಾಗೂ ವಿದ್ಯಾರ್ಥಿ ನಾಯಕ ಮೊಹಮ್ಮದ್ ಇಫಾಝ್, ವಿದ್ಯಾರ್ಥಿ ನಾಯಕಿ ಕುಮಾರಿ ಪ್ರಜ್ಞಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯಘಟ್ಟವಾಗಿ “ಹೊಸ ಸಂವತ್ಸರಕ್ಕೆ ಹೊಸ ಚಿಗುರು ” ಎಂಬ ಉಕ್ತಿಯಂತೆ 2025-26 ನೇ ಸಾಲಿನ 1ನೇ ತರಗತಿಗೆ 3 ವಿದ್ಯಾರ್ಥಿಗಳಾದ ( ಸಮೀಕ್ಷಾ, ಹೃತ್ವಿಕ್, ಮೊಹಮ್ಮದ್ ಶೈಮಾನ್ )ರವರನ್ನು ಮುಖ್ಯ ಶಿಕ್ಷಕ ರಾದ ಪ್ರದೀಪ್ ಕುಮಾರ್ ಶೆಟ್ಟಿಯವರು ದಾಖಲಾತಿ ಮಾಡಿಕೊಂಡರು. ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡುವುದರ ಮೂಲಕ ತಮ್ಮ ಪ್ರಾಸ್ತವಿಕ ಮಾತುಗಳನ್ನಾಡಿದರು.
ಪೋಷಕರೊಂದಿಗೆ ವಿದ್ಯಾರ್ಥಿಗಳ “ವಾರ್ಷಿಕ ಪರೀಕ್ಷೆಯ ಪೂರ್ವತಯಾರಿ”ಯನ್ನು ಹೇಗೆ ನಡೆಸಬೇಕೆಂದು ಈ ಸಂದರ್ಭದಲ್ಲಿ ಚರ್ಚಿಸಲಾಯಿತು. ಶ್ರೀಮತಿ ಮಲ್ಲಿಕಾರವರು ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದವನ್ನು ಸಲ್ಲಿಸಿದರು.














Leave a Reply