Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬಾಗಲಕೋಟೆ ವಿಶ್ವವಿದ್ಯಾಲಯ ಮುಚ್ಚಬೇಡಿ: ಮನವಿ

ಸಾವಳಗಿ: ಬಾಗಲಕೋಟೆ ವಿಶ್ವ ವಿದ್ಯಾಲಯ ಮುಚ್ಚಬಾರದು. ಜಿಲ್ಲೆಯಲ್ಲೇ ಮುಂದುವರಿಸಬೇಕು’ ಎಂದು ಆಗ್ರಹಿಸಿ ಶುಕ್ರವಾರ ಉಪ ತಹಶೀಲ್ದಾರ್ ವೈ ಎಚ್ ದ್ರಾಕ್ಷಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಜಮಖಂಡಿ ತಾಲೂಕಿನ ಸಾವಳಗಿ ನಗರದ ನಾಡ ಕಾರ್ಯಾಲಯ ಆವರಣದಲ್ಲಿ ಬಾಗಲಕೋಟೆಯ ವಿಶ್ವ ವಿದ್ಯಾಲಯವನ್ನು ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಇದನ್ನು ಖಂಡಿಸಿ ಉಪ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ. ಇದನ್ನು ಮುಚ್ಚ ಬಾರದು, ವಿದ್ಯಾಲಯಕ್ಕೆ ಬೇಕಾಗುವ ಮೂಲಭೂತ ಸೌಕರ್ಯ ಒದಗಿಸಬೇಕು  ‘ಬಾಗಲಕೋಟೆ  ವಿ.ವಿ ಉಳಿವಿಗಾಗಿ ನಮ್ಮ ಹೋರಾಟ’ ಎಂದು ಘೋಷಣೆಗಳನ್ನು ಕೂಗಿದರು.

ಕರ್ನಾಟಕ ಸರ್ಕಾರದಲ್ಲಿ ಚರ್ಚೆಯಲ್ಲಿರುವ 9 ವಿಶ್ವ ವಿದ್ಯಾಲಯ ಮುಚ್ಚಲು ಮುಂದಾಗಿದ್ದೆ ಅದರಲ್ಲಿ ಬಾಗಲಕೋಟೆ ವಿಶ್ವ ವಿದ್ಯಾಲಯ ಒಂದಾಗಿದೆ ಇದನ್ನು ಮುಚ್ಚಲು ಹುನ್ನಾರ ನಡೆದಿದೆ. ರಾಜ್ಯದಲ್ಲಿರುವ ಹೊಸ ವಿಶ್ವ ವಿದ್ಯಾಲಯದಿಂದ ಪ್ರತಿ ಜಿಲ್ಲೆಯ ಬಡ ಕೂಲಿ ಕಾರ್ಮಿಕರ ವರ್ಗದ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮೂಲಭೂತ ಹಕ್ಕಾದ ಶಿಕ್ಷಣವನ್ನು ಪಡೆಯುವ ವರದಾನವಾಗಿತ್ತು‌, ಆದರೆ ರಾಜ್ಯ ಸರಕಾರದ ನಡೆ ವಿಶ್ವ ವಿದ್ಯಾಲಯವನ್ನು ಮುಚ್ಚುವ ಹುನ್ನಾರದಿಂದ ಶಿಕ್ಷಣಕ್ಕೆ ಕೊಡಲಿ ಪೆಟ್ಟಾಗಿ ಪರಿಣಮಿಸಿದೆ, ಇದನ್ನು ವಿಶ್ವ ವಿದ್ಯಾಲಯ ಹೋರಾಟ ಮತ್ತು ಅಭಿವೃದ್ಧಿ ಸಮಿತಿ ಜಮಖಂಡಿ ವಿದ್ಯಾರ್ಥಿಗಳ ಸಮಿತಿ ಸಾವಳಗಿ, ಗ್ರಾಮದ ಶಿಕ್ಷಣ ಪ್ರೇಮಿಗಳು ಸೇರಿದಂತೆ ಅನೇಕರು ವಿಶ್ವ ವಿದ್ಯಾಲಯ ಮುಚ್ಚಿದರೆ ಮುಂಬರುವ ದಿನಗಳಲ್ಲಿ ವಿಶ್ವ ವಿದ್ಯಾಲಯದ ಮುಂದೆ ಆಮರಣ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿ ಪರಶುರಾಮ ಯಮಗಾರ ಮಾತನಾಡಿ  ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಿತದೃಷ್ಟಿಯಿಂದ ಸರ್ಕಾರ ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಮುಚ್ಚದೆ ಮುಂದುವರಿಸಬೇಕು. ವಿಶ್ವವಿದ್ಯಾಲಯದ ನಿರ್ವಹಣೆಗೆ ಮೂಲ ಸೌಕರ್ಯ ಒದಗಿಸಬೇಕು, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.  ನಂತರ ಗ್ರಾಮದ ಮುಖಂಡ ಅಪ್ಪುಗೌಡ ಪಾಟೀಲ ಮಾತನಾಡಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ರಾಜುಗೌಡ ಪಾಟೀಲ, ರಾಜು ಮೋಹಿತೆ, ಮಹಾದೇವ ಮಾಳಿ, ಮಲ್ಲು ನ್ಯಾಮಗೌಡ, ಶಂಕರ ಐನಾಪೂರ, ಲಕ್ಷ್ಮಣ್ ಪುಂಡೆ, ಅಣ್ಣಪ್ಪ ಮೋಹಿತೆ, ಕಾಲೇಜು ವಿದ್ಯಾರ್ಥಿಗಳಾದ ಶ್ರವಣ ಜಮಖಂಡಿ ಅರುಣ ಹುನ್ನೂರ, ಮುರುಗೇಂದ್ರ ಬಿರಾದಾರ, ಅಭಿಷೇಕ ಮೂಡಲಗಿ, ರಾಜಕುಮಾರ ಚೌರಿ, ವಿದ್ಯಾರ್ಥಿನಿಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

‘ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಮುಚ್ಚಲು ಹೊರಟಿರುವ ಸರ್ಕಾರದ ಕ್ರಮವನ್ನು ಬಲವಾಗಿ ಖಂಡಿಸುತ್ತೇವೆ. ವಿಶ್ವವಿದ್ಯಾಲಯವನ್ನು ಮುಚ್ಚುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವು ದುಬಾರಿಯಾಗಲಿದೆ. ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ.

ಸಿದ್ಧಾರ್ಥ್ ತಳಕೇರಿ
ಬಾಗಲಕೋಟೆ ವಿಶ್ವ ವಿದ್ಯಾಲಯ ಹೋರಾಟ ಸಮಿತಿ ಕಾರ್ಯದರ್ಶಿ ಜಮಖಂಡಿ. ಗ್ರಾಮ ಪಂಚಾಯತ ಸದಸ್ಯರು ಸಾವಳಗಿ.

ಬಾಗಲಕೋಟೆ ವಿವಿ ಮುಚ್ಚಲು ಸರ್ಕಾರ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ. ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ. ಇತರೆ ವಿವಿಗಳೊಂದಿಗೆ ವಿಲೀನ ಮಾಡುವುದರಿಂದ ತೊಂದರೆ ಆಗಲಿದ್ದು, ಬಾಗಲಕೋಟೆ ವಿಶ್ವವಿದ್ಯಾಲಯವನ್ನು ಇಲ್ಲಿಯೇ ಉಳಿಸಬೇಕು’

ಉಮೇಶ್ ಆರ್. ಜಾಧವ್
ಶಿಕ್ಷಣ ಪ್ರೇಮಿಗಳು ಸಾವಳಗಿ.
ಭವಾನಿ ಕೋ ಆಪ್ ಕ್ರೇಡಿಟ ಸೊಸಾಯಿಟಿ ಅಧ್ಯಕ್ಷ ಸಾವಳಗಿ.

Leave a Reply

Your email address will not be published. Required fields are marked *