
ಕೋಟ: 38 ಸಂವತ್ಸರ ಕಳೆದ ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘ ಇದರ ವಿದ್ಯಾರ್ಥಿ ನಿಲಯ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಪ್ರಧಾನ ತಂತ್ರಿಗಳಾದ ವೇದಮೂರ್ತಿ ಪ್ರಸನ್ನ ಕುಮಾರ್ ಐತಾಳರ ಪೌರೋಹಿತ್ಯದಲ್ಲಿ ಹರ್ಷ ಫೌಂಡೇಶನ್‌ನ ಕಾಂತಿ ಕೃಷ್ಣಾನಂದ ಶೆಟ್ಟಿಗಾರ್ ಮತ್ತು ಕೃಷ್ಣಾನಂದ ಎಮ್. ಶೆಟ್ಟಿಗಾರ್ ಶಿಲಾನ್ಯಾಸ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೋಟೇಶ್ವರ ವಲಯ ಪದ್ಮಶಾಲಿ ಸಂಘದ ವಿ.ಎಸ್. ಡಾ. ಚಂದ್ರಶೇಖರ್ ಶೆಟ್ಟಿಗಾರ್ ವಹಿಸಿದ್ದರು. ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷÀ ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಂಬೈಯ ಪದ್ಮಶಾಲಿ ಸಂಘದ ಅಧ್ಯಕ್ಷರಾದ ಉತ್ತಮ್ ಶೆಟ್ಟಿಗಾರ್ ಶುಭಸಂಸನೆಗೈದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಹರ್ಷ ಫೌಂಡೇಶನ್‌ನ ಶಿವಾನಂದ ಶೆಟ್ಟಿಗಾರ್, ಸಮಾಜದ ಹಿರಿಯರಾದ ನಿವೃತ್ತ ಎ.ಎಸ್.ಐ. ಗಣಪಯ್ಯ ಶೆಟ್ಟಿಗಾರ್ ಶುಭ ಹಾರೈಸಿದರು.
ಕೋಟೇಶ್ವರ ಪದ್ಮಶಾಲಿ ಸಂಘವನ್ನು ಸ್ಥಾಪಿಸಿದ ಕೀರ್ತಿಶೇಷರಾದ ಗೋವೀಂದ ಶೆಟ್ಟಿಗಾರರವರು ಸಮಾಜಕ್ಕೆ ಸರಳತೆ, ಸಜ್ಜನಿಕೆಯನ್ನು ಹಾಗೂ ಪ್ರಾಮಾಣಿಕತೆಯನ್ನು ತಿಳಿಸಿದ್ದಾರೆಂದು ಶಿಲಾನ್ಯಾಸಗೈದ ಹರ್ಷ ಫೌಂಡೇಶನ್‌ನ ಕೃಷ್ಣಾನಂದ ಶೆಟ್ಟಿಗಾರ್ ಹೇಳಿದರು. ಇದೇ ಸಂದರ್ಭದಲ್ಲಿ ಕೃಷ್ಣಾನಂದ ಶೆಟ್ಟಿಗಾರ್, ಉತ್ತಮ್ ಶೆಟ್ಟಿಗಾರ್ ದಂಪತಿಗಳನ್ನು ಸನ್ಮಾನಿಸಲಾಯಿತು ಹಾಗೂ ಕಾಂತಿ ಕೃಷ್ಣಾನಂದ ಶೆಟ್ಟಿಗಾರ್‌ರವರನ್ನು ಮುತ್ತೆöÊದೆಯರು ಬಾಗೀನ ನೀಡಿ ಗೌರವಿಸಿದರು. ಸಂಘದ ಕಾರ್ಯದರ್ಶಿ ಪ್ರಮೋದ್ ಶೆಟ್ಟಿಗಾರ್ ಸ್ವಾಗತಿಸಿದರೆ, ಉಷಾ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ವಕ್ವಾಡಿ ಜನಾರ್ಧನ್ ಶೆಟ್ಟಿಗಾರ್, ಮಂಜುನಾಥ್ ಶೆಟ್ಟಿಗಾರ್ ಮತ್ತು ವೆಂಕಟೇಶ್ ಶೆಟ್ಟಿಗಾರ್ ಅತಿಥಿಗಳನ್ನು ಗೌರವಿಸಿದರು. ನಿವೃತ್ತ ಶಿಕ್ಷಕಿ ಇಂದಿರಾ ಜಿ. ವಂದಿಸಿದರು.
ಕೋಟೇಶ್ವರ ವಲಯ ಪದ್ಮಶಾಲಿ ಸಮಾಜ ಸಂಘ ಇದರ ವಿದ್ಯಾರ್ಥಿ ನಿಲಯ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಹರ್ಷ ಫೌಂಡೇಶನ್‌ನ ಕಾಂತಿ ಕೃಷ್ಣಾನಂದ ಶೆಟ್ಟಿಗಾರ್ ಮತ್ತು ಕೃಷ್ಣಾನಂದ ಎಮ್. ಶೆಟ್ಟಿಗಾರ್ ಶಿಲಾನ್ಯಾಸ ಮಾಡಿದರು. ಕೋಟೇಶ್ವರ ವಲಯ ಪದ್ಮಶಾಲಿ ಸಂಘದ ವಿ.ಎಸ್. ಡಾ. ಚಂದ್ರಶೇಖರ್ ಶೆಟ್ಟಿಗಾರ, ಸಂಘದ ಕಾರ್ಯದರ್ಶಿ ಪ್ರಮೋದ್ ಶೆಟ್ಟಿಗಾರ್ ಮತ್ತಿತರರು ಇದ್ದರು.














Leave a Reply