
ಕೋಟ: ರೋಟರಿ ಕ್ಲಬ್ ಕೋಟ -ಸಾಲಿಗ್ರಾಮ, ಶ್ರೀದೇವಿ ಜ್ಯುವೆಲಸ್ ಕೋಟ ಆಶ್ರಯದಲ್ಲಿ ಬನ್ನಾಡಿ ಮಂಜುನಾಥ ಅಕ್ಸಾಲರ ಪತ್ನಿ ಬನ್ನಾಡಿ ಪದ್ದು ಆಚಾರ್ 18ನೇ ಸಂಸ್ಮರಣೆ
ಪ್ರಯುಕ್ತ ಆಯುರ್ವೇದ ಆರೋಗ್ಯ ಉಚಿತ ತಪಾಸಣೆ ಮತ್ತು ಔಷಧ ವಿತರಣೆ ಶಿಬಿರವು ಬನ್ನಾಡಿಯಲ್ಲಿ ಜರಗಿತು.
ವೈದ್ಯರಾದ ಡಾ| ಶ್ರೀರಾಮ್ ರಾವ್ ಮಾತನಾಡಿ, ಉತ್ತಮ ಆಹಾರಭ್ಯಾಸ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ನೈಸರ್ಗಿಕ ಪದ್ದತಿಗಳನ್ನು ಮರೆಯದೆ ರೋಗದಿಂದ ಅಳವಡಿಸಿಕೊಂಡರೆ ದೂರವಿರಬಹುದು ಎಂದರು.
ರೋಟರಿ ಜಿಲ್ಲಾ ಗವರ್ನರ್ ದೇವಾನಂದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಸಂಚಾಲಕ ಬನ್ನಾಡಿ ಸೀತಾರಾಮ ಆಚಾರ್ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಆಸ್ಪತ್ರೆಯ ವೈದ್ಯ
ಡಾ. ಎಸ್.ಆರ್.ಎಸ್.ಜಿ.ಪ್ರಸನ್ನ ಐತಾಳ, ಶ್ರೀಕಾಂತ್ ಆಚಾರ್ಯ, ಶೈಲೇಶ್ ಶೆಟ್ಟಿ ಸುಪ್ರಿಯಾ, ವಿಷ್ಣುಪ್ರಿಯ, ಪ್ರೀಜ, ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ್ ಹೆಗ್ಡೆ, ರೋಟರಿ ಕ್ಲಬ್ ಮಾಜಿ ಅಸಿಸ್ಟೆಂಟ್ ಗವರ್ನರ್ ರಾಜೇಂದ್ರ ಸುವರ್ಣ, ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಸನ್ನ ಐತಾಳ, ಬನ್ನಾಡಿ ಪದ್ದು ಆಚಾರ್ ಪತ್ರ ಸಮಾಜಸೇವಕ ನಾರಾಯಣ ಆಚಾರ್ ಇದ್ದರು. ರೋಟರಿ ಸಂಸ್ಥೆಯ ಸದಸ್ಯ ದೇವಪ್ಪ ಪಟ್ಟಗಾರ್ ನಿರೂಪಸಿದರು.
ಬನ್ನಾಡಿ ಮಂಜುನಾಥ ಅಕ್ಸಾಲರ ಪತ್ನಿ ಬನ್ನಾಡಿ ಪದ್ದು ಆಚಾರ್ 18ನೇ ಸಂಸ್ಮರಣೆ ಪ್ರಯುಕ್ತ ಆಯುರ್ವೇದ ಆರೋಗ್ಯ ಉಚಿತ ಶಿಬಿರವನ್ನು ರೋಟರಿ ಜಿಲ್ಲಾ ಗವರ್ನರ್
ದೇವಾನಂದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಸಂಚಾಲಕ ಬನ್ನಾಡಿ ಸೀತಾರಾಮ ಆಚಾರ್, ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಆಸ್ಪತ್ರೆಯ ವೈದ್ಯ ಡಾ. ಎಸ್.ಆರ್.ಎಸ್.ಜಿ.ಪ್ರಸನ್ನ ಐತಾಳ, ಸಮಾಜಸೇವಕ ನಾರಾಯಣ ಆಚಾರ್ ಇದ್ದರು.














Leave a Reply