
ಕೋಟ: ಶ್ರೀ ಕಂಬಿಗಾರ ಶ್ರೀ ಬಬ್ಬು ಸ್ವಾಮಿ ಮತ್ತು ಪರಿವಾರ ದೈವಸ್ಥಾನ ಗುಂಡ್ಮಿ ಸಾಸ್ತಾನ ಇದರ ವಾರ್ಷಿಕ ಹರಕೆ ಸೇವೆಯ ಪ್ರಯುಕ್ತ ಫೆ. 15 ಮತ್ತು 16ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಫೆ.15ರ ಶನಿವಾರ ಸಂಜೆ 6.00 ರಿಂದ ಭಜನೆ ಫೆ.16ರ ಆದಿತ್ಯವಾರ ಬೆಳಿಗ್ಗೆ 9.00 ರಿಂದ ಶ್ರೀ ಕಂಬಿಗಾರ ಶ್ರೀ ಬಬ್ಬು ಸ್ವಾಮಿ ಮತ್ತು ಪರಿವಾರ ದೈವಗಳ ದರ್ಶನ ಸೇವೆ ಪ್ರಸಾದ ವಿತರಣೆ ನಡೆಯಿತು. ಇದರ ಅಂಗವಾಗಿ ಧಾರ್ಮಿಕ ಸಭಾ
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕೃಷ್ಣ ಆಚಾರ್ ಯಡಬೆಟ್ಟು ವಹಿಸಿದ್ದರು
ಈ ವೇಳೆ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಪೌರಕಾರ್ಮಿಕರಿಗೆ
ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಕೋಟ ಪಂಚಾಯತ್ ಸದಸ್ಯರಾದ ಸುಧಾ ಎ ಪೂಜಾರಿ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಮಾಜಿ ಅಧ್ಯಕ್ಷ ಎ.ಜಗದೀಶ್
ಕಾರಂತ, ದೈವಸ್ಥಾನದ ಪ್ರಮುಖರಾದ ರಮೇಶ್ ಬ್ರಹ್ಮಜ್ಞ, ಸದಾಶಿವ ಹೆಗ್ಡೆ, ಗುರಿಕಾರರಾದ ಚಂದ್ರಪ್ಪ, ಆಡಳಿತ ಮಂಡಳಿ ಸದಸ್ಯ ಚಂದ್ರ ಐರೋಡಿ, ಸುದೇಶ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕುಸುಮಾ ಟೀಚರ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಗಾಯಕ ಕಾರ್ತಿಕ್‌ರಾಜ್ ಸಾಸ್ತಾನ ತಂಡದಿoದ ಭಕ್ತಿ ರಸಮಂಜರಿ ಕಾರ್ಯಕ್ರಮ ಜರುಗಿತು. ಶ್ರೀ ಕಂಬಿಗಾರ ಶ್ರೀ ಬಬ್ಬು ಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನ ವಾರ್ಷಿಕ ಹರಕೆ ಸೇವೆ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಉದ್ಘಾಟಿಸಿದರು. ಕೋಟ ಪಂಚಾಯತ್ ಸದಸ್ಯರಾದ ಸುಧಾ ಎ ಪೂಜಾರಿ, ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಮಾಜಿ
ಅಧ್ಯಕ್ಷ ಎ.ಜಗದೀಶ್ ಕಾರಂತ ಮತ್ತಿತರರು ಇದ್ದರು.














Leave a Reply