
ಕೋಟ: ಕಳೆದ ಐವತ್ತೆರಡು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ- ಐರೋಡಿ ಇವರಿಂದ ಚಕ್ರತೀರ್ಥ, ಸಗ್ರಿ ಇಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.
ಶ್ರೀ ಉಮಾಮಹೇಶ್ವರ ದೇವಸ್ಥಾನ ಚಕ್ರ ತೀರ್ಥ, ಸಗ್ರಿ ಇಲ್ಲಿ ನಡೆಯುತ್ತಿರುವ ಚಕ್ರತೀರ್ಥ ಬ್ರಹ್ಮಕಲಶೋತ್ಸವದ ಸಾಂಸ್ಕçತಿಕ ಕಾರ್ಯಕ್ರಮದ ಅಂಗವಾಗಿ ಫೆ. 23 ರಂದು ಸಂಜೆ 7-30 ಕ್ಕೆ ಅನುಸಾಲ್ವ ಗರ್ವಭಂಗ ಎಂಬ ಕಥಾನಕದ ಯಕ್ಷಗಾನ ಪ್ರದರ್ಶನ ಜರಗಲಿದೆ. ಈ ಪ್ರದರ್ಶನವು ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ನಿರ್ದೇಶನದಲ್ಲಿ ನಡೆಯಲಿದ್ದು ಗಜೇಂದ್ರ ಶೆಟ್ಟಿ, ಚಂದ್ರಯ್ಯ ಆಚಾರ್ ಹಾಲಾಡಿ, ರಾಮ ಬಾಯಿರಿ, ಕಾರ್ಕಡ ಸೀತಾರಾಮ ಸೋಮಯಾಜಿ, ಪಾರಂಪಳ್ಳಿ ವೈಕುಂಠ ಹೇರ್ಳೆ, ಹೆರಂಜಾಲು ಪ್ರಶಾಂತ ಮಯ್ಯ, ಶಿರಿಯಾರ ಅಶೋಕ ಆಚಾರ್, ಶ್ರೀಕಾಂತ ಭಟ್ಟ ವಡ್ಡರ್ಸೆ, ಬಸ್ರೂರು ಪ್ರಭಾಕರ ಐತಾಳ, ಸೃಜನ್ ಗುಂಡ್ಮಿ, ಹಟ್ಟಿಯಂಗಡಿ ವಿನಯ ಕುಮಾರ್ ಭಾಗವಹಿಸಲಿದ್ದಾರೆ.













Leave a Reply