
ಜಮಖಂಡಿ: ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಯುವಕರು ಸಾವಳಗಿ ತಾಲೂಕು ಕನಸು ಕನಸಾಗಿಯೇ ಉಳಿದಿದೆ ಆದಷ್ಟು ಬೇಗ ತಾಲೂಕಾ ಕೇಂದ್ರ ಆಗಲೇಂದು ಸಂಗಮದಲ್ಲಿ ಬೇಡಿಕೊಂಡು ನದಿಯಲ್ಲಿ ಮುಳಿಗೆದ್ದು.
42 ವರ್ಷಗಳ ಐತಿಹಾಸಿಕ ಹೋರಾಟವಾಗಿರುವ ಸಾವಳಗಿ ತಾಲ್ಲೂಕು ಹೋರಾಟವೂ ಸರ್ಕಾರದ ನಿರ್ಲಕ್ಷ್ಯದಿಂದ ತಾಲೂಕು ಕಾಣದೆ ಹಾಗೆಯೇ ಉಳಿದಿದೆ. ತಾಲ್ಲೂಕು ಕೇಂದ್ರದ ಕನಸು ಕನಸಾಗಿಯೇ ಉಳಿದಿದೆ. ನಮ್ಮ ಸಾವಳಗಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯ ಒಳಗೊಂಡಿದೆ, ತಾಲೂಕಾ ಕೇಂದ್ರಕ್ಕೆ ಇರುವ ಸೌಲಭ್ಯಗಳ ಇದೆ ಎಂದು ತ್ರಿವೇಣಿ ಸಂಗಮದಲ್ಲಿ ಮುಳಿಗೆದ್ದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡ ಯುವಕರು.
ಯುವಕರಾದ ಸಾಗರ ಜಾಧವ, ಮಂಜುನಾಥ ಸಾವಂತ, ಸಾಗರ ಮಾಂಗ, ಕೇದಾರಿ ಮಾಳಿ, ಸುನೀಲ್ ಸಾವಂತ.
ವರದಿ ಸಚೀನ ಆರ್ ಜಾಧವ ಜಮಖಂಡಿ














Leave a Reply